Sunday, December 3, 2023
Homeರಾಜ್ಯHSRP Number Plate: ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

HSRP Number Plate: ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

HSRP Number Plate: ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ –ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ವಾಹನಗಳ ಮಾಲೀಕರು ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP) ಅಳವಡಿಕೆ ಮಾಡಲು ಸಾರಿಗೆ ಇಲಾಖೆ ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ; ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?

ಏನಿದು ಹೆಚ್.ಎಸ್.ಆರ್.ಪಿ(HSRP):
HSRP ಅಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂದರ್ಥ. ವಾಹನಗಳ ನಂಬರ್ ಪ್ಲೇಟ್ ನಲ್ಲೇ ಈ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತೆ. ಈ ತಂತ್ರಜ್ಞಾನದಿಂದ ವಾಹನ ಕಳ್ಳತನ, ಕದ್ದ ವಾಹನ ಬಳಸಿ ಮಾಡೋ ಕೃತ್ಯಗಳನ್ನು ತಡೆಯಲು ಸಹಾಯವಾಗುತ್ತೆ. ಜೊತೆಗೆ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಬೇಧಿಸಲು ಅನುಕೂಲಗಲಿದೆ. HSRP ನಂಬರ್ ಪ್ಲೇಟ್ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಇನ್ನೂ ಈ ತಂತ್ರಜ್ಞಾನ ಅಳವಡಿಸಿರೋ ವಾಹನ ರಸ್ತೆಯಲ್ಲಿ ಸಂಚರಿಸುವಾಗಲೇ ವಾಹನವನ್ನು ಗುರುತಿಸಬಹುದು. ಇನ್ನೂ ಈ ನಂಬರ್ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಞಾನದ ಅಳವಡಿಕೆಯೂ ಮಾಡಲಾಗಿರುತ್ತದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-15.09.2023

HSRP Number Plate:
HSRP Number Plate:

ರಾಜ್ಯದ ಎಲ್ಲ ವಾಹನಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟೇಲರ್, ಟ್ರ‍್ಯಾಕ್ಟರ್ ಸೇರಿದಂತೆ ಎಲ್ಲಾ ವಾಹನಗಳ ಮೇಲೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಸುವಿಕೆ ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ; 14 ನ್ಯೂಸ್​ ಆ್ಯಂಕರ್​ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?

ಕರ್ನಾಟಕದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ನಂತರದಲ್ಲಿ ನೋಂದಾಯಿಸಲ್ಪಟ್ಟ ಬಹುತೇಕ ವಾಹನಗಳಲ್ಲಿ ಈ ನಂಬರ್ ಪ್ಲೇಟ್ ಇದೆ ಎನ್ನಲಾಗಿದೆ. ಆದರೆ, ಅದಕ್ಕೆ ಮೊದಲು ನೋಂದಾಯಿತವಾಗಿರುವ ಹಳೆಯ ಮತ್ತು ಅಸ್ತಿತ್ವದಲ್ಲಿರುವ ವಾಹನಗಳಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ನೀಡಲಾಗಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ಗಾಜಿನ ಸೇತುವೆ!

ಹಳೆಯ ವಾಹನಗಳ ಮೇಲೆ ಎಚ್.ಎಸ್.ಆರ್.ಪಿ ಅಳವಡಿಸಲು ಏನು ಮಾಡಬೇಕು:
* http://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ
* ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
* ನಿಮ್ಮ ವಾಹನದ ವಿವರಗಳನ್ನು ಭರ್ತಿ ಮಾಡಿ.
* ಎಚ್‌ಎಸ್‌ಆರ್‌ಪಿ ಜೋಡಣೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಡೀಲರ್‌ಗಳ ಸ್ಥಳವನ್ನು ಆಯ್ಕೆಮಾಡಿ.
* HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಮಾಡಬೇಕಾಗಿಲ್ಲ.
* ವಾಹನ ಮಾಲೀಕರ ಮೊಬೈಲ್‌ಗೆ OTP ಕಳುಹಿಸಲಾಗುತ್ತದೆ.
* ನಿಮ್ಮ ಅನುಕೂಲಕ್ಕೆ ತಕ್ಕಂತೆ ನಂಬರ್ ಪ್ಲೇಟ್ ಅಳವಡಿಸುವಿಕೆಯ ದಿನಾಂಕ ಮತ್ತು ಸಮಯ ಆಯ್ಕೆಮಾಡಿ.
* ನಿಮ್ಮ ಯಾವುದೇ ವಾಹನ ತಯಾರಕ ಅಥವಾ ನಂಬರ್ ಪ್ಲೇಟ್ ಮಾಡಿಸುವ ಡೀಲರ್‌ಗಳನ್ನೂ ಭೇಟಿ ಮಾಡಬಹುದು.
(HSRP ನಂಬರ್ ಪ್ಲೇಟ್ ಜೋಡಣೆಗಾಗಿ, ಆನೈನ್ ಕಚೇರಿ ಅಥವಾ ಮನೆಯಿಂದಲೂ ಅರ್ಜಿ ಸಲ್ಲಿಸಬಹುದು.)

ಇದನ್ನೂ ಓದಿ; arecanut price: 15 ಸೆಪ್ಟೆಂಬರ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಇನ್ನು ಈ ಬಗ್ಗೆ ಗಮನಿಸಬೇಕಾದ ಅಂಶಗಳು:(HSRP Number Plate:)
* ನಿಮ್ಮ http://transport.karnataka.gov.in ಅಥವಾ www.siam.in ಮೂಲಕ ಮಾತ್ರವೇ ಬುಕ್ ಮಾಡಿ,
* ಅನುಕರಣೆ HSRP / ಒಂದೇ ರೀತಿಯ ಪ್ಲೇಟ್‌ಗಳು / ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಂಟಿಸಬೇಡಿ. ಉದಾಹರಣೆಗೆ ನಕಲಿ ಹೊಲೊಗ್ರಾಮ್ / IND ಗುರುತು | INDIA ಅನ್ನುವ ಗುರುತುಗಳನ್ನು ಸರಿಯಾಗಿ ಗಮನಿಸಿ.
* ಯಾವುದೇ ಮುಕ್ತ ಮಾರುಕಟ್ಟೆ, ರಸ್ತೆ ಬದಿಯ ಮಾರಾಟಗಾರರಿಂದ ನಂಬರ್ ಪ್ಲೇಟ್ ಖರೀದಿಸಬೇಡಿ ಅದು ಖಂಡೀತಾ ಎಚ್‌ಎಸ್‌ಆರ್‌ಪಿ ಆಗಿರಲ್ಲಾ. ವಾಹನಗಳ ಮಾಲೀಕತ್ವ, ವಿಳಾಸ ಬದಲಾವಣೆ, HPA HPT, ಫಿಟ್ಟೆಸ್ ಸೇರಿದಂತೆ ಯಾವುದೇ ಬದಲಾವಣೆಗಳನ್ನು ಪ್ರಾದೇಶಿಕ ಆರ್‌ಟಿಓ ಕಚೇರಿಯಲ್ಲಿ ಮಾಹಿತಿ ನೀಡದೇ ಮಾಡಲು ಅನುಮತಿಸಲಾಗುವುದಿಲ್ಲ.
* ಎಚ್‌ಎಸ್‌ಆರ್‌ಪಿ ಅಳವಡಿಕೆಯು ನಿಮ್ಮ ಅಪಾಯಿಂಟ್ ಮೆಂಟ್ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ.
* ಎಚ್‌ಎಸ್.ಆರ್.ಪಿ ನಂಬರ್ ಪ್ಲೇಟ್ ಜೋಡಣೆಯ ಅಂತಿಮ ದಿನಾಂಕವು 17.11.2023 ಆಗಿದ್ದು ತಕ್ಷಣವೇ ಅರ್ಜಿ ಸಲ್ಲಿಸಲು ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

Most Popular

Recent Comments