Health tips : ತೂಕ ಇಳಿಸಲು ಊಟ ಬಿಡುವ ಹವ್ಯಾಸ ನಿಮಗಿದ್ಯಾ?

Health tips : ಆಧುನಿಕ ಯುಗದಲ್ಲಿ ಹೆಚ್ಚಿನವರಿಗೆ ತಮ್ಮ ಆಹಾರದ ಬಗ್ಗೆ ಗಮನಹರಿಸಲು ಹೆಚ್ಚಿನ ಜನರಿಗೆ ಸಮಯವೇ ಸಿಗದು. ಇದಕ್ಕಾಗಿ ಅವರು ಕೈ ಸಿಕ್ಕಿದೆಲ್ಲವನ್ನು ತಿನ್ನುವರು. ಅದು ಕೂಡ ಊಟ ಮಾಡುವ ಸಮಯದಲ್ಲೂ ಅವರು ಊಟ ಮಾಡದೆ ಕಡೆಗಣಿಸುವರು.

ಇದನ್ನೂ ಓದಿ; ಮೂಡಿಗೆರೆ: ಸರ್ಕಾರಿ ಬಸ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು: ಇನ್ನೋರ್ವನ ಸ್ಥಿತಿ ಗಂಭೀರ

ಕೆಲವರಿಗೆ ಮೀಟಿಂಗ್, ಕಚೇರಿ ಕೆಲಸ ಇತ್ಯಾದಿಗಳು ಇರುವ ಕಾರಣದಿಂದಾಗಿ ಸರಿಯಾದ ಸಮಯಕ್ಕೆ ಊಟ ಮಾಡಲು ಆಗದು. ಮನೆಗೆ ಬಂದ ಬಳಿಕವೂ ಕೆಲವರು ತಮ್ಮ ಊಟವನ್ನು ಕಡೆಗಣಿಸುವುದು ಇದೆ. ಆದರೆ ಊಟ ಮಾಡುವುದನ್ನು ಕಡೆಗಣಿಸಬಾರದು, ಯಾಕೆಂದರೆ ಇದು ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುವುದು. ಊಟ ಕಡೆಗಣಿಸಿದರೆ ಅದರಿಂದ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಲಭ್ಯವಾಗದು ಮತ್ತು ಆರೋಗ್ಯದ ಮೇಲೂ ಇದರಿಂದ ಪರಿಣಾಮವಾಗುವುದು. ಊಟ ತ್ಯಜಿಸಿದರೆ ಅದರಿಂದ ಯಾವೆಲ್ಲಾ ಪರಿಣಾಮಗಳು ಆಗುವುದು ಎಂದು ತಿಳಿಯಿರಿ.

ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಕೆಲಸದ ಒತ್ತಡ ಮತ್ತು ರಾತ್ರಿಯ ಜೀವನದಿಂದಾಗಿ ಬೆಳಿಗ್ಗೆ ಟಿಫಿನ್’ನ್ನ ಬಿಟ್ಟು ಬಿಡುತ್ತಾರೆ. ಇನ್ನು ಸ್ತ್ರೀಯರು ಪೂಜೆಯ ಹೆಸರಲ್ಲಿ ರಾತ್ರಿ ಉಪವಾಸ ಮಾಡುತ್ತಾರೆ. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು ಬಯಸುವ ಕೆಲವರು ಬೆಳಿಗ್ಗೆ ಅಥವಾ ರಾತ್ರಿ ಏನನ್ನಾದರೂ ತಿನ್ನುವುದನ್ನ ಸಹ ನಿಲ್ಲಿಸುತ್ತಾರೆ. ಹಾಗಂತ, ಉಪವಾಸವು ಕೆಟ್ಟದ್ದಲ್ಲದ ಕೆಲವು ಒಳ್ಳೆಯದನ್ನೂ ಮಾಡುತ್ತೆ. ಆದರೆ ಹೆಚ್ಚು ಉಪವಾಸ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹೃದ್ರೋಗದ ಅಪಾಯವನ್ನ ಹೆಚ್ಚಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ; ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ? ತಿಳಿಯುವುದು ಹೇಗೆ..?;  ಹ್ಯಾಕ್ ಆಗಿದ್ದರೆ ಏನು ಮಾಡಬೇಕು?

Health tips : ಉಪವಾಸದ ಹೆಸ್ರಲ್ಲಿ ಊಟ ಬಿಟ್ರೆ ಏನು ಆಗುತ್ತೇ:
ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆ:
ನಾವು ಸೇವಿಸುವ ಆಹಾರದಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ಸ್ ನಲ್ಲಿ ಇರುವ ಸಕ್ಕರೆಯು ದೇಹಕ್ಕೆ ಇಂಧನವಾಗಿ ಕೆಲಸ ಮಾಡುವುದು. ಇದು ದೇಹವು ಸಾಮಾನ್ಯ ರೀತಿ ಕೆಲಸ ಮಾಡಲು ಸಹಕಾರಿ. ಆಹಾರ ಕಡೆಗಣಿಸಿದರೆ ಆಗ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ರಕ್ತದಲ್ಲಿನ ಸಕ್ಕರೆ ಮಟ್ಟವು ಗಣನೀಯವಾಗಿ ಕಡಿಮೆ ಆಗುವುದು.

ಮನಸ್ಥಿತಿ ಹಾಗೂ ಏಕಾಗ್ರತೆ:
ಆಹಾರದಿಂದ ಪಡೆದಿರುವಂತಹ ಗ್ಲುಕೋಸ್ ಅಂಶವು ನಮ್ಮ ಮೆದುಳಿಗೆ ಶಕ್ತಿ ನೀಡುವುದು. ಊಟ ಬಿಟ್ಟರೆ ಆಗ ಮೆದುಳಿಗೆ ಸರಿಯಾದ ರೀತಿಯಲ್ಲಿ ಗ್ಲುಕೋಸ್ ಸಿಗದು. ಇದರ ಪರಿಣಾಮವಾಗಿ ಬಳಲಿಕೆ, ನಿಶ್ಯಕ್ತಿ, ಮನಸ್ಥಿತಿ ಬದಲಾವಣೆ ಮತ್ತು ಕಿರಿಕಿರಿ ಉಂಟಾಗ ಬಹುದು. ಇದು ಏಕಾಗ್ರತೆ ಮೇಲೆ ಪರಿಣಾಮ ಬೀರುವುದು. ಇದರಿಂದ ನಿಮ್ಮ ಕಚೇರಿ ಮತ್ತು ಶಾಲೆಯಲ್ಲಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವುದು.


ಇತ್ತೀಚಿನ ಜನಪ್ರಿಯ ಸುದ್ದಿಗಳು   


ಚಯಾಪಚಯದ ಎಚ್ಚರಿಕೆ:
ಪದೇ ಪದೇ ಊಟ ಮಾಡದೆ ಇದ್ದರೆ ಆಗ ದೇಹವು ಉಪವಾಸದ ಕ್ರಿಯೆಗೆ ಬದಲಾಗುವುದು. ಇದರಿಂದ ದೇಹವು ಸರಿಯಾಗಿ ಶಕ್ತಿಯನ್ನು ಶೇಖರಿಸಲು ಆಗದು. ಉಪಾಹಾರ ಅಥವಾ ರಾತ್ರಿ ಊಟ ಮಾಡದೆ ಇದ್ದರೆ ಅದರಿಂದ ಸಂಪೂರ್ಣ ಚಯಾಪಚಯದ ಮೇಳೆ ಪರಿಣಾಮ ಬೀರುವುದು ಮತ್ತು ತೂಕ ಇಳಿಸುವ ಕ್ರಿಯೆಯನ್ನು ಇದು ನಿಧಾನವಾಗಿಸುವುದು.

Health tips :
Health tips :

ಮಧುಮೇಹದ ಅಪಾಯ ಹೆಚ್ಚು:
ರಾತ್ರಿ ವೇಳೆ ಊಟ ಮಾಡದೆ ಇರುವುದು ಅಥವಾ ಅತಿಯಾಗಿ ತಿನ್ನುವ ಪರಿಣಾಮದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇದು ಇನ್ಸುಲಿನ್ ಪ್ರತಿಕ್ರಿಯೆಯನ್ನು ವಿಳಂಬ ಮಾಡುವುದು. ಪದೇ ಪದೇ ಊಟ ಬಿಡುತ್ತಲಿದ್ದರೆ, ಅದು ದೀರ್ಘಕಾಲಕ್ಕೆ ಮಧುಮೇಹಕ್ಕೆ ಆಹ್ವಾನ ನೀಡಬಹುದು. ಮಧುಮೇಹ ಪುರುಷ ಮತ್ತು ಮಹಿಳೆಯರ ಲೈಂಗಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಪೋಷಕಾಂಶಗಳ ಕೊರತೆ:
ಬೆಳಗ್ಗೆ ಉಪಾಹಾರ ಮಾಡದೆ ಮನೆಯಿಂದ ಹೊರಗೆ ಹೋದರೆ, ಆಗ ಖಂಡಿತವಾಗಿಯೂ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಸಿಗದೆ ಇರಬಹುದು ಮತ್ತು ಪೋಷಕಾಂಶಗಳ ಕೊರತೆ ಕಾಡುವುದು. ಅದರಲ್ಲೂ ವಿಟಮಿನ್ ಬಿ ಸಂಕೀರ್ಣದ ಕೊರತೆ ಕಾಡಬಹುದು.

ಇದನ್ನೂ ಓದಿ; ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಕಿಡ್ನಿ ಸಮಸ್ಯೆ ಶುರುವಾಗಿದೆ ಎಂದರ್ಥ!; ಕಿಡ್ನಿ ಸಮಸ್ಯೆಯ ಈ ಆರಂಭಿಕ ಲಕ್ಷಣಗಳನ್ನು ತಿಳಿಯಿರಿ

ರಕ್ತದೊತ್ತಡದ ಮೇಲೆ ಪರಿಣಾಮ:
ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆ ಆಗುವ ಪರಿಣಾಮವಾಗಿ ದೇಹದಲ್ಲಿ ಹಾರ್ಮೋನ್ ಬಿಡುಗಡೆಯನ್ನು ವೃದ್ಧಿಸುವುದು ಹಾಗೂ ಗ್ಲುಕೋಸ್ ಮಟ್ಟವನ್ನು ಸರಿದೂಗಿಸುವುದು. ಇದರಿಂದಾಗಿ ರಕ್ತದೊತ್ತಡ ಮಟ್ಟವು ಹೆಚ್ಚಾಗುವುದು ಮತ್ತು ರಕ್ತನಾಳಗಳು ಕೂಡ ಕಿರಿದಾಗಬಹುದು. ಅಧಿಕ ರಕ್ತದೊತ್ತಡ ಸಮಸ್ಯೆಯ ನಿಯಂತ್ರಣಕ್ಕೆ ಆಯುರ್ವೇದ ಚಿಕಿತ್ಸೆ ಮಾಡಬಹುದು.

Health tips :ಅಜೀರ್ಣ ಸಮಸ್ಯೆ ಕಾಡಬಹುದು:
ಊಟ ಮಾಡದೆ ಇರುವುದು ಅಸಿಡಿಟಿ, ಆಮ್ಲೀಯ ಹಿಮ್ಮುಖ ಹರಿವು, ಹೊಟ್ಟೆ ನೋವು ಇತ್ಯಾದಿಗಳಿಗೆ ಕಾರಣವಾಗುವುದು. ದೀರ್ಘಕಾಲ ಹೊಟ್ಟೆಯು ಖಾಲಿ ಇದ್ದರೆ ಆಗ ಗ್ಯಾಸ್ಟ್ರಿಕ್ ಆಮ್ಲದ ಸ್ರವಿಸುವಿಕೆ ಹೆಚ್ಚಾಗುವುದು. ಪ್ರತೀ ಸಲ ನೀವು ಊಟ ಬಿಟ್ಟ ವೇಳೆ ಹೊಟ್ಟೆಯಲ್ಲಿ ಆಮ್ಲವು ಉತ್ಪತ್ತಿ ಆಗುವುದು ಮತ್ತು ಹೊಟ್ಟೆಯ ಪದರದ ಮೇಲೆ ದಾಳಿ ಮಾಡುವುದು. ಹೀಗಾಗಿ ಅಸಿಡಿಟಿ, ಅಲ್ಸರ್ ಮತ್ತು ಹೊಟ್ಟೆ ನೋವು ಬರುವುದು.

ಊಟ ಬಿಟ್ಟರೆ ಏನು ಮಾಡಬೇಕು?:
ಯಾರೂ ಊಟ ಬಿಡಲೇಬಾರದು. ಆದರೆ ಏನಾದರೂ ಸಮಸ್ಯೆಯಿದ್ದರೆ ಬಿಟ್ಟರೆ ಆಗ ಕೆಲಸವಾದ ಕೂಡಲೇ ಊಟ ಮಾಡಬೇಕು. ಊಟ ಮಾಡಲು ಸಾಧ್ಯವಿಲ್ಲ ಎಂದಾದರೆ ಆಗ ಹಣ್ಣಿನ ಜ್ಯೂಸ್, ಮಜ್ಜಿಗೆ, ಎಳನೀರು ಅಥವಾ ಯಾವುದೇ ಹಣ್ಣು ಸೇವನೆ ಮಾಡಬಹುದು. ಯಾವಾಗಲೊಮ್ಮೆ ಊಟ ಬಿಡುತ್ತಲಿದ್ದರೆ ಆಗ ನೀವು ಸರಿಯಾಗಿ ನೀರು ಕುಡಿಯಿರಿ.

ಉಪವಾಸವು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನ ಅರ್ಥಮಾಡಿಕೊಳ್ಳಲು, ಸಂಶೋಧಕರು ಇಲಿಗಳ ಎರಡು ಗುಂಪುಗಳನ್ನ ವಿಶ್ಲೇಷಿಸಿದ್ದಾರೆ. ಒಂದು ಗುಂಪಿಗೆ ಎದ್ದ ತಕ್ಷಣ ಉಪಹಾರ ನೀಡಲಾಯಿತು. ಬೇರೆ ಗುಂಪಿಗೆ ನೀಡಿಲಿಲ್ಲ. ಅದರ ನಂತರ, ನಾಲ್ಕು ಗಂಟೆಗಳ ನಂತ್ರ ಮತ್ತು ಎಂಟು ಗಂಟೆಗಳ ನಂತರ ಎರಡೂ ಗುಂಪಿನಿಂದ ರಕ್ತದ ಮಾದರಿಗಳನ್ನ ಸಂಗ್ರಹಿಸಲಾಯಿತು. ಈ ರಕ್ತದ ವರದಿಗಳ ನೋಟವು ಮೊನೊಸೈಟ್ಗಳ ಸಂಖ್ಯೆಯಲ್ಲಿ ವ್ಯತ್ಯಾಸವನ್ನ ತೋರಿಸಿದೆ. ಈ ಸೋಂಕುಗಳು, ಹೃದ್ರೋಗಗಳು ಮತ್ತು ನಿರ್ದಿಷ್ಟವಾಗಿ ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಬಿಳಿ ರಕ್ತ ಕಣಗಳು ಪ್ರಮುಖ ಪಾತ್ರವಹಿಸುತ್ತವೆ.

ಇನ್ನು ಮೂಳೆ ಮಜ್ಜೆಯಲ್ಲಿ ಮೊನೊಸೈಟ್ಗಳು ಉತ್ಪತ್ತಿಯಾಗುತ್ತವೆ. ಅಲ್ಲಿಂದ ಅವರು ದೇಹದ ಮೂಲಕ ಪ್ರಯಾಣಿಸುತ್ತಾರೆ. ಎಲ್ಲಾ ಇಲಿಗಳು ಬೇಸ್ಲೈನ್’ನಲ್ಲಿ ಒಂದೇ ಸಂಖ್ಯೆಯ ಮೊನೊಸೈಟ್ಗಳನ್ನ ಹೊಂದಿದ್ದವು. ಆದ್ರೆ, ನಾಲ್ಕು ಗಂಟೆಗಳ ನಂತರ, ಉಪವಾಸ ಮಾಡಿದ ಇಲಿಗಳಲ್ಲಿನ 90 ಪ್ರತಿಶತ ಮೊನೊಸೈಟ್ಗಳು ರಕ್ತಪ್ರವಾಹದಿಂದ ಕಣ್ಮರೆಯಾಯಿತು. ಎಂಟು ಗಂಟೆಗಳ ಹೊತ್ತಿಗೆ ಸಂಖ್ಯೆ ಮತ್ತಷ್ಟು ಕುಸಿಯಿತು. ಆದಾಗ್ಯೂ, ಸಂಶೋಧಕರ ಪ್ರಕಾರ, ಉಪವಾಸವಿಲ್ಲದ ಗುಂಪಿನಲ್ಲಿ ಮೊನೊಸೈಟ್ಗಳ ಸಂಖ್ಯೆಯು ಪರಿಣಾಮ ಬೀರುವುದಿಲ್ಲ. ಹೊಸ ಕೋಶಗಳ ಉತ್ಪಾದನೆಯು ಕಡಿಮೆಯಾದಾಗ ಮೊನೊಸೈಟ್ಗಳು ವೇಗವಾಗಿ ಇಲಿಗಳಲ್ಲಿ ಸುಪ್ತವಾಗಿ ಉಳಿಯಲು ಮೂಳೆ ಮಜ್ಜೆಗೆ ಹಿಂತಿರುಗುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 24 ಗಂಟೆಗಳ ಉಪವಾಸದ ನಂತರ ಇಲಿಗಳಿಗೆ ಆಹಾರವನ್ನ ನೀಡಿದಾಗ, ಮೂಳೆ ಮಜ್ಜೆಯಲ್ಲಿ ಅಡಗಿರುವ ಮೊನೊಸೈಟ್ಗಳು ಗಂಟೆಗಳೊಳಗೆ ರಕ್ತಪ್ರವಾಹಕ್ಕೆ ಮರಳಿದವು. ಆದ್ರೆ, ಈ ಮೊನೊಸೈಟ್ಗಳು ಸೋಂಕಿನಿಂದ ರಕ್ಷಿಸುವುದಿಲ್ಲ.