C.T Ravi: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಸರಕಾರ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಮೇಲೆ ಮಾಜಿ ಸಚಿವ ಸಿ ಟಿ ರವಿ ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ದೇಶ ಮತ್ತು ರಾಜ್ಯದಲ್ಲಿ ನಡೆದಿರುವ ಪ್ರಮುಖ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90 ರಷ್ಟು ಹಗರಣಗಳು ಕಾಂಗ್ರೆಸ್ ಅವಧಿಯಲ್ಲಿ ನಡೆದಿದೆ ಎಂದು ಸಿ ಟಿ ರವಿ ಹೇಳಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ, ಇದೀಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಕೈ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ; ಮೂಡಿಗೆರೆ: ಸರ್ಕಾರಿ ಬಸ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು: ಇನ್ನೋರ್ವನ ಸ್ಥಿತಿ ಗಂಭೀರ
“ನಾವು ಚುನಾವಣೆ ಗೆಲ್ಲಲು ಎಷ್ಟೆಲ್ಲಾ ಖರ್ಚು ಮಾಡಿದ್ದೇವೆ, ದಾನ-ಧರ್ಮಕ್ಕೆ ರಾಜಕಾರಣ ಮಾಡ್ತಿದ್ದೀವಾ?, ಖರ್ಚು ಮಾಡಿರೋದು ವಸೂಲಾಗ್ಬೇಕು, ಇಲ್ಲಾಂದ್ರೆ ನಮ್ಮ ಹೆಂಡ್ತಿ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸ್ಬೇಕಾ..?” ಅಂತ ಮಾತನಾಡುವ ಸ್ಥಿತಿ ಅವರದ್ದಾಗಿದೆ ಎಂದು ರವಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಸರಕಾರದ ಅವಧಿಯಲ್ಲಿದ್ದ 40% ಕಮಿಷನ್ ದಂಧೆ ಈಗ 15% ಆಗಿರಬಹುದು ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ಗಮನಿಸಿದ್ದೇನೆ, ಆದರೆ ನೀವು ಹೇಳುತ್ತಿರುವ 15% ಹಳೆಯ ವಿಚಾರ ಈಗ ಅದು 50% ದಾಟಿರಬಹುದು ಎಂದು ಸಿ ಟಿ ರವಿ ಪ್ರತ್ಯುತ್ತರ ನೀಡಿದ್ದಾರೆ.
ಇದನ್ನೂ ಓದಿ; ಸ್ಮಾರ್ಟ್ಫೋನ್ ಹ್ಯಾಕ್ ಆಗಿದೆಯೇ? ತಿಳಿಯುವುದು ಹೇಗೆ..?; ಹ್ಯಾಕ್ ಆಗಿದ್ದರೆ ಏನು ಮಾಡಬೇಕು?
C.T Ravi: ಪ್ರಮಾಣಿಕ ಸರ್ಕಾರ ಅನ್ನೋದಾದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡ್ಲಿ:
ಅವರ ಸರಕಾರ ಪ್ರಾಮಾಣಿಕ ಅನ್ನೋದಾಗಿದ್ರೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸಿ ಟಿ ರವಿ ಇದೇ ಸಂದರ್ಭದಲ್ಲಿ ಸವಾಲು ಹಾಕಿದ್ದಾರೆ.
ಗುತ್ತಿಗೆದಾರರ ಬಳಿಯಿಂದ ನನಗೆ ಬಂದಿರವ ಮಾಹಿತಿ ಪ್ರಕಾರ, ಮೊದಲಿಗೆ 7% ಕಮಿಷನ್ ನಿಗದಿಪಡಿಸಿದ್ರು, ಆದರೆ ಮಧ್ಯವರ್ತಿಗಳು 10%ಗೆ ಪಟ್ಟು ಹಿಡಿದ ಬಳಿಕ ಇದೀಗ 15% ಫಿಕ್ಸ್ ಮಾಡಿ, ಅಷ್ಟು ಕೊಟ್ಟರೆ ಮಾತ್ರ ಬಿಲ್ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ ಎಂದು ಸಿ ಟಿ ರವಿ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬ್ರಿಟಿಷ್ ಕಾಲದ ಕಾನೂನು ಬದಲು; ಹೊಸ ಕಾನೂನಿನಲ್ಲಿ ಲವ್ ಜಿಹಾದ್ ಗೆ ಬ್ರೇಕ್ ಬೀಳುತ್ತಾ?
- ಚಿಕ್ಕಮಗಳೂರು: ಕೈ ಶಾಸಕನಿಂದ ಮಹಿಳಾ ಪೊಲೀಸ್ ಪೇದೆಯ ಮೇಲೆ ದೌರ್ಜನ್ಯ; ಯಾರು ಈ ಕೈ ಶಾಸಕ
- ಸೋಂಪು-ಕಲ್ಲುಸಕ್ಕರೆ ಕಾಂಬಿನೇಷನ್; ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ಗೊತ್ತಾ?
ಇದು ನಾವು ಹೇಳುತ್ತಿರುವುದಲ್ಲ, ಬದಲಾಗಿ ಗುತ್ತಿಗೆದಾರರ ಸಂಘದವರೇ ನೀಡಿರುವ ಮಾಹಿತಿ. ಇದು ಸುಳ್ಳು ಅನ್ನೋದಾಗಿದ್ರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ, ಮತ್ತು ಹೀಗೆ ಸತ್ಯ ಪ್ರಮಾಣ ಮಾಡುವಾಗ ‘ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ..’ ಎಂದು ಹೇಳಿದ್ರೆ ಬೇರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಮಾಜಿ ಸಚಿವರು ರಾಜ್ಯ ಸರಕಾರಕ್ಕೆ ಮಾತಿನ ಬಿಸಿ ಮುಟ್ಟಿಸಿದ್ದಾರೆ.





ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ನೀವು ಅತಿಯಾಗಿ ನಿದ್ದೆ ಮಾಡುತ್ತೀರಾ?; ಹಾಗದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು
- ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಭೀಕರ ಅಪಘಾತ; ಒಬ್ಬನ ಸ್ಥಿತಿ ಗಂಭೀರ
- ಕೊಪ್ಪ: ಮರಕ್ಕೆ ಡಿಕ್ಕಿಯಾದ ಕಾರು | ಸ್ಥಳದಲ್ಲೇ ವ್ಯಕ್ತಿ ಸಾವು
- ಚಿಕ್ಕಮಗಳೂರು: ಕೈ ಶಾಸಕನಿಂದ ಮಹಿಳಾ ಪೊಲೀಸ್ ಪೇದೆಯ ಮೇಲೆ ದೌರ್ಜನ್ಯ; ಯಾರು ಈ ಕೈ ಶಾಸಕ
- ಚಿಕ್ಕಮಗಳೂರು: ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ; ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು
- ಬ್ರಿಟಿಷ್ ಕಾಲದ ಕಾನೂನು ಬದಲು; ಹೊಸ ಕಾನೂನಿನಲ್ಲಿ ಲವ್ ಜಿಹಾದ್ ಗೆ ಬ್ರೇಕ್ ಬೀಳುತ್ತಾ?
- ರೇಪಿಸ್ಟ್ಗಳಿಗೆ ಎಷ್ಟು ವರ್ಷ ಜೈಲು ಗ್ಯಾರಂಟಿ?; ಕೇಂದ್ರದಿಂದ ಮಹತ್ವದ ನಿರ್ಧಾರ
- ಮೂಡಿಗೆರೆ: ಸರ್ಕಾರಿ ಬಸ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು: ಇನ್ನೋರ್ವನ ಸ್ಥಿತಿ ಗಂಭೀರ
- ಸ್ಮಾರ್ಟ್ಫೋನ್ ಹ್ಯಾಕ್ ಆಗಿದೆಯೇ? ತಿಳಿಯುವುದು ಹೇಗೆ..?; ಹ್ಯಾಕ್ ಆಗಿದ್ದರೆ ಏನು ಮಾಡಬೇಕು?
- ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಕಿಡ್ನಿ ಸಮಸ್ಯೆ ಶುರುವಾಗಿದೆ ಎಂದರ್ಥ!; ಕಿಡ್ನಿ ಸಮಸ್ಯೆಯ ಈ ಆರಂಭಿಕ ಲಕ್ಷಣಗಳನ್ನು ತಿಳಿಯಿರಿ
- ಸೋಂಪು-ಕಲ್ಲುಸಕ್ಕರೆ ಕಾಂಬಿನೇಷನ್; ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ಗೊತ್ತಾ?
intresting story ಓದಲು ಇಲ್ಲಿ ಕ್ಲಿಕ್ ಮಾಡಿ





Leave a Reply