Gruha Jyothi Scheme: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಗ್ಯಾರಂಟಿಯಡಿ ಮೊದಲ ತಿಂಗಳು ಸುಮಾರು ಶೇ.60 ರಷ್ಟು ಗ್ರಾಹಕರು ಫಲಾನುಭವಿಗಳಾಗಲಿದ್ದಾರೆ. ಜುಲೈ ತಿಂಗಳ ಉಚಿತ ವಿದ್ಯುತ್ ಬಿಲ್ ಪಡೆಯಲು ಜುಲೈ 25 (ಇಂದು) ಕೊನೆಯ ದಿನಾಂಕ ಆಗಿದೆ.
ಇದನ್ನೂ ಓದಿ; ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್; ಯಜಮಾನನ ಹೆಸರು ಬದಲಾವಣೆ ಮಾಡಿಸಬೇಕಾ
ಇದುವರೆಗೆ ಅಂದಾಜು 1.18 ರಿಂದ 1.20 ಕೋಟಿ ಮಂದಿ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ. ಜುಲೈ ಅಂದರೆ ಮೊದಲ ತಿಂಗಳ ಫಲಾನುಭವಿಗಳಾಗಲು ಮಂಗಳವಾರ ಕೊನೆಯ ದಿನವಾಗಿದೆ. ನೋಂದಣಿ ಮಾಡಿಸಿಕೊಳ್ಳದವರು ಯೋಜನೆ ಅಡಿ ಫಲಾನುಭವಿಗಳಾಗಲು ಒಂದು ತಿಂಗಳು ಕಾಯಬೇಕಿದೆ. ಅಂದರೆ ಮುಂದಿನ ತಿಂಗಳು ನೋಂದಣಿ ಮಾಡಿಕೊಂಡವರಿಗೆ ಮುಂದಿನ ತಿಂಗಳ ಬಿಲ್ ಫ್ರೀ ಆಗಲಿದೆ.
ಗೃಹಜ್ಯೋತಿ ಅರ್ಜಿ ಸಲ್ಲಿಸುವುದು ಹೇಗೆ?;
* ಸೇವಾಸಿಂಧು ಪೋರ್ಟಲ್ https://sevasindhugs.karnataka.gov.in/# ಗೆ ಭೇಟಿಕೊಡಿ.
* ಅಲ್ಲಿ ಗೃಹ ಜ್ಯೋತಿ ಯೋಜನೆಗೆ ಮೀಸಲಿಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನೀವು ಈ ವೆಬ್‌ಸೈಟ್ ಅನ್ನು ನಿಮ್ಮಮೊಬೈಲ್/ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮೂಲಕ ತೆರೆಯಬಹುದು
* ಹೀಗೆ ಅರ್ಜಿ ಸಲ್ಲಿಸುವ ಹೊತ್ತಲ್ಲಿ ನಿಮ್ಮೊಂದಿಗೆ ಆಧಾರ್ ಕಾರ್ಡ್, ಆರ್‌ಆರ್‌ಕಾರ್ಡ್, ನಿಮ್ಮ ಮನೆಗೆ ಬರುವ ಕರೆಂಟ್ ಬಿಲ್‌ನಲ್ಲಿ ಇರುವ, ಗ್ರಾಹಕರ ಅಕೌಂಟ್ ಐಡಿ, ವೋಟರ್ ಐಡಿ ಕಾರ್ಡ್ ಗಳನ್ನೆಲ್ಲ ಸಿದ್ಧವಾಗಿಟ್ಟುಕೊಳ್ಳಿ,
* ಗೃಹಜ್ಯೋತಿ ಫಾರ್ಮ್ ನಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನೂ ತುಂಬಿ ಸಬ್‌ಮಿಟ್ ಕೊಡಿ.
* ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಫೋನ್‌ನಲ್ಲಿ ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಬಹುದಾಗಿದೆ

ಇದನ್ನೂ ಓದಿ; ಶೃಂಗೇರಿ: ನೂತನವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದ ರಸ್ತೆಯಲ್ಲಿ ಬಿರುಕು
ಯಾವೆಲ್ಲಾ ದಾಖಲೆಗಳು ಬೇಕು?:
ಅರ್ಜಿ ಸಲ್ಲಿಕೆ ಮಾಡುವವರು ಆಧಾರ್ ಕಾರ್ಡ್, ಆಧಾರ್ ನಂಬರ್, ಮೊಬೈಲ್ ಸಂಖ್ಯೆ ಮನೆ ಬಾಡಿಗೆ ಕರಾರು ಪತ್ರ ನೀಡುವುದು ಕಡ್ಡಾಯವಾಗಿದೆ. ವೋಟರ್ ಐಡಿ ಕೂಡ ಯಾವುದಕ್ಕೂ ಇಟ್ಟುಕೊಂಡಿರಿ. ಮನೆ ಬಾಡಿಗೆ ಕರಾರು ಪತ್ರ ಇಲ್ಲದವರಿಗೆ ವೋಟರ್ ಐಡಿ ಬೇಕಾಗುತ್ತದೆ.
ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿಸಬೇಕೆ?
ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಪಾವತಿಸಬೇಕಾಗಿರುವುದಿಲ್ಲ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರವಾಸಿಗರೇ ಗಮನಿಸಿ: ಚಿಕ್ಕಮಗಳೂರಿನ ಕಲ್ಲತ್ತಿಗರಿ ಜಲಪಾತ ವೀಕ್ಷಣೆಗೆ ನಿರ್ಬಂಧ
- ಜಲಪಾತದ ನಡುವೆ ‘ರೀಲ್ಸ್’ ಹುಚ್ಚು; ಆಯತಪ್ಪಿ ಬಿದ್ದು ನೀರುಪಾಲು
- ತರೀಕೆರೆ: ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬೆನ್ನಲ್ಲೇ ಬಿಗ್ ಫೈಟ್
ಹಾಗಾದರೆ ಅರ್ಜಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?:
* ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ (https://sevasindhu.karnataka.gov.in/statuctrack/track_status)
* ಅಲ್ಲಿ track your application status ಎಂದು ಕಾಣುತ್ತದೆ.
* ಕೇಳಗೆ ಎರಡು ಬಾಕ್ಸ್ಗಳಿವೆ. ಮೊದಲನೇ ಬಾಕ್ಸ್ನಲ್ಲಿ select escom name ಅಂತ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ escom ಯಾವುದು ಎಂಬುದನ್ನು ಆಯ್ಕೆ ಮಾಡಿ.
* ಎರಡನೇ ಬಾಕ್ಸ್ನಲ್ಲಿ ಇಟಿಣeಡಿ enter your account id ಅಂತಿರುತ್ತದೆ. ಅಲ್ಲಿ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಿದ್ದaccount id ಯನ್ನು ಎಂಟರ್ ಮಾಡಿ.
* ಕೊನೆಯದಾಗಿ check status ಎಂಬ ಹಸಿರು ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ gruha jyothi application status ತಿಳಿಯುತ್ತದೆ.
* ಗೃಹ ಜ್ಯೋತಿ application status ನಲ್ಲಿ ನಿಮ್ಮ application ರೆಫರೆನ್ಸ್ ನಂಬರ್,account id, ಅರ್ಜಿ ಸಲ್ಲಿಸಿದ ದಿನಾಂಕ, ಮತ್ತು ಅರ್ಜಿ ಸ್ಥಿತಿ ಇರುತ್ತದೆ.
Gruha Jyothi Scheme: ಸೂಚನೆ: ಜುಲೈ ಮೊದಲ ತಿಂಗಳ ಫಲಾನುಭವಿಗಳಾಗಲು ಮಂಗಳವಾರ ಕೊನೆಯ ದಿನವಾಗಿದೆ. ಇನ್ನು ನೋಂದಣಿ ಮಾಡಿಸಿಕೊಳ್ಳದವರು ಫಲಾನುಭವಿಗಳಾಗಲು ಒಂದು ತಿಂಗಳು ಕಾಯಬೇಕಿದೆ. ಅಂದರೆ ಮುಂದಿನ ತಿಂಗಳು ನೋಂದಣಿ ಮಾಡಿಕೊಂಡವರಿಗೆ ಮುಂದಿನ ತಿಂಗಳ ಬಿಲ್ ಫ್ರೀ ಆಗಲಿದೆ.






Leave a Reply