E Swathu Online: ಗ್ರಾಮೀಣ ಕೃಷಿಯೇತರ ಆಸ್ತಿಗೆ ಇ-ಸ್ವತ್ತು ಕಡ್ಡಾಯ

(E Swathu Online:) ಆಸ್ತಿ ವಂಚನೆ ಮತ್ತು ನಕಲಿ ಪ್ರಕರಣಗಳು ತಪ್ಪಿಸಲು ಇ-ಸ್ವತ್ತು ತಂತ್ರಾಂಶವನ್ನು ಪ್ರಾರಂಭಿಸಿದ್ದು, ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಿರ್ವಹಿಸಲ್ಪಡುವ ಇ-ಸತ್ತು ನಿಖರವಾದ ಆಸ್ತಿ ದಾಖಲೆಗಳನ್ನು ನಿರ್ವಹಿಸಲು, ಮಾಲೀಕತ್ವದ ವಿವರಗಳನ್ನು ಸ್ಪಷ್ಟಪಡಿಸಲು ಮತ್ತು ಮಾಲೀಕತ್ವ ವರ್ಗಾವಣೆಯನ್ನು ಸುಗಮಗೊಳಿಸಲು ಡಿಜಿಟಲ್ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ಮಹತ್ವದ ಆದೇಶ!


ಗ್ರಾಮೀಣ ಭಾಗದ ಕೃಷಿಯೇತರ ಖಾಲಿ ಜಾಗಕ್ಕೆ ಮತ್ತು ಮನೆ ನಿರ್ಮಾಣ ಮಾಡಿಕೊಂಡಿರುವ ಜಾಗಕ್ಕೆ ಅಧಿಕೃತ ಮಾಲೀಕತ್ವ ಪ್ರಮಾಣ ಪತ್ರವನ್ನು ಡಿಜಿಟಲ್ ಮಾದರಿಯಲ್ಲಿ ಹೊಂದುವುದಕ್ಕೆ ಇ-ಸ್ವತ್ತು ಎನ್ನುತ್ತಾರೆ. ಇನ್ನು ಇ-ಸ್ವತ್ತು ಪ್ರಮಾಣ ಪತ್ರದಲ್ಲಿ ಆ ಜಾಗದ ಜಿಪಿಎಸ್ ಪೋಟೋ, ಒಟ್ಟು ವಿಸ್ತೀರ್ಣ, ಮಾಲೀಕರ ವಿವರ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗಿರುತ್ತದೆ. ಇದನ್ನು ಇ-ಸ್ವತ್ತು ಎನ್ನುತ್ತಾರೆ.

(E Swathu Online:) ಹಾಗಾದರೆ ಇ-ಸ್ವತ್ತು ಪ್ರಮಾಣ ಪತ್ರದ ಪ್ರಯೋಜನಗಳೇನು?:
* ಆಸ್ತಿಯ ಮೇಲಿನ ಮಾಲೀಕತ್ವವನ್ನು ಖಚಿತವಾಗಿ/ನಿಖರವಾಗಿ ಗುರುತಿಸುವ ದಾಖಲಾತಿ ಇದಾಗಿರುತ್ತದೆ.
* ಇ-ಸ್ವತ್ತು ಪ್ರಮಾಣ ಪತ್ರ ಇದ್ದರೆ ಮಾತ್ರ ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.
* ಆಸ್ತಿಯನ್ನು ಮಾರಾಟ ಮಾಡಲು ಈ ಪತ್ರ ಕಡ್ಡಾಯವಾಗಿ ಹೊಂದಿರಬೇಕು.


ಇದನ್ನೂ ಓದಿ: ಶೃಂಗೇರಿಯ ಟ್ರಿಲಿಯಂಟ್ ಡಿಜಿಟಲ್ ಕಂಪನಿಯಲ್ಲಿ ಭರ್ಜರಿ ಜಾಬ್ ಆಫರ್!; ವಾಕ್-ಇನ್ ಸಂದರ್ಶನ, ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ


ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಕೆ ಹೇಗೆ?:
ಇ-ಸ್ವತ್ತು ಪಡೆಯಲು ಗ್ರಾಮ ಪಂಚಾಯತಿಯಲ್ಲೇ ಇ-ಸ್ವತ್ತು ಪ್ರಮಾಣ ಪತ್ರದ ಸಂಪೂರ್ಣ ಅರ್ಜಿ ವಿಲೇವಾರಿಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಹಳ್ಳಿ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಬೇಕಾಗುವ ಅಗತ್ಯ ದಾಖಲೆಗಳು ಯಾವುದು?:
* ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
* ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ
* ಅರ್ಜಿದಾರರ ಪೋಟೋ
* ಮನೆ ಅಥವಾ ಖಾಲಿ ಖಾಗದ ಪೋಟೋ ಕಾಪಿ
* ಕಂದಾಯ ರಶೀದಿ
* ವಿದ್ಯುತ್ ಬಿಲ್
* ಕೈಬರಹದ ಅರ್ಜಿ


ಇದನ್ನೂ ಓದಿ: ಪಾಕ್ ವಿರುದ್ಧ ಆಪರೇಷನ್ ಸಿಂಧೂರ್..; ಭಾರತೀಯ ಸೇನೆಯಿಂದ ಏರ್ಸ್ಟ್ರೈಕ್..!


(E Swathu Online:) ಇ- ಸ್ವತ್ತು ಆನ್‌ಲೈನ್‌ನಲ್ಲಿ ಪ್ರವೇಶಿಸುವುದು ಹೇಗೆ?:
ಕರ್ನಾಟಕದಲ್ಲಿ ಇ-ಸ್ವತ್ತು ಅರ್ಜಿ ಸಲ್ಲಿಸಲು, ನೀವು ಅಧಿಕೃತ ಇ-ಸ್ವತ್ತು ಪೋರ್ಟಲ್‌ https://eswathu.karnataka.gov.in/ ಗೆ ಭೇಟಿ ನೀಡಿ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

E Swathu Online: ಗ್ರಾಮೀಣ ಕೃಷಿಯೇತರ ಆಸ್ತಿಗೆ ಇ-ಸ್ವತ್ತು ಕಡ್ಡಾಯ
E Swathu Online: ಗ್ರಾಮೀಣ ಕೃಷಿಯೇತರ ಆಸ್ತಿಗೆ ಇ-ಸ್ವತ್ತು ಕಡ್ಡಾಯ

ಇದನ್ನೂ ಓದಿ: ಮಹಿಳಾ ವಿದ್ಯಾರ್ಥಿಗಳಿಗೆ $2,000 ಸ್ಕಾಲರ್‌ ಶಿಪ್


ಇತ್ತೀಚಿನ ಜನಪ್ರಿಯ ಸುದ್ದಿಗಳು (E Swathu Online:) 

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?