Dialysis Center Closed: ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್

Dialysis Center Closed: ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಆಗಸ್ಟ್ 02 ರಿಂದ (ಬುಧವಾರ) ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್ ಮಾಡಲು ರಾಜ್ಯ ಡಯಾಲಿಸಿಸ್ ನೌಕರರ ಸಂಘ ನಿರ್ಧರಿಸಿದೆ. ಇದರಿಂದಾಗಿ ಡಯಾಲಿಸಿಸ್ ರೋಗಿಗಳಿಗೆ ಆಪತ್ತು ಉಂಟಾಗುವ ಆತಂಕ ಶುರುವಾಗಿದೆ. ಕಳೆದ ಎರಡು ವರ್ಷಗಳಿಂದ ಸರಿಯಾದ ವೇತನ ನೀಡದಿರುವುದು ಹಾಗೂ ಕೆಲ ಸೌಲಭ್ಯಗಳನ್ನು ನೀಡದ ಹಿನ್ನೆಲೆ, ರಾಜ್ಯಾದ್ಯಂತ ಡಯಾಲಿಸಿಸ್ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ನಗರದ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಕೇದಾರನಾಥ ಯಾತ್ರೆ ವೇಳೆ ಅಸ್ವಸ್ಥ; ಚಿಕ್ಕಮಗಳೂರು ಮೂಲದ ಯುವಕ ಸಾವು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಯಾಲಿಸಿಸ್ ಘಟಕದ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿರುವುದರಿಂದ ರಾಜ್ಯದ ಹಲವು ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ರೋಗಿಗಳು ತೀವ್ರ ಪರದಾಡುವಂತಹ ಪರಿಸ್ಥಿತಿ ಎದುರಾಗಲಿದೆ. ಪ್ರತಿಭಟನೆ ಹಿನ್ನೆಲೆ ಜಿಲ್ಲಾ ಕೇಂದ್ರಗಳಿಂದ ಡಯಾಲಿಸಿಸ್ ಘಟಕದ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಡಯಾಲಿಸಿಸ್ ಮಾಡುವವರು ಇಲ್ಲದೆ ರೋಗಿಗಳು ನರಳುವಂತಾಗಲಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-01.08.2023

ಸಿಬ್ಬದಿಂಗಳ ಮುಷ್ಕರದಿಂದಾಗಿ ರೋಗಿಗಳಿಗೆ ಸಮಸ್ಯೆ:
* ಕೊಪ್ಪ ಪಟ್ಟಣದ ಡಯಾಲಿಸಿಸ್ ಕೇಂದ್ರದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 1 ಡಯಾಲಿಸಿಸ್ ಯಂತ್ರದ ಮೂಲಕ ತಿಂಗಳಿಗೆ 60 ಡಯಾಲಿಸಿಸ್ ನಡೆಸಲಾಗುತ್ತಿದೆ.
* ಮೂಡಿಗೆರೆ ಪಟ್ಟಣದ ಡಯಾಲಿಸಿಸ್ ಕೇಂದ್ರದಲ್ಲಿ 18 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 2 ಡಯಾಲಿಸಿಸ್ ಯಂತ್ರಗಳ ಮೂಲಕ ತಿಂಗಳಿಗೆ 160 ಡಯಾಲಿಸಿಸ್ ನಡೆಸಲಾಗುತ್ತಿದೆ.
* ಎನ್ ಆರ್ ಪುರ ಪಟ್ಟಣದ ಡಯಾಲಿಸಿಸ್ ಕೇಂದ್ರದಲ್ಲಿ 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು,2 ಡಯಾಲಿಸಿಸ್ ಯಂತ್ರದ ಮೂಲಕ ತಿಂಗಳಿಗೆ 102 ಡಯಾಲಿಸಿಸ್ ನಡೆಸಲಾಗುತ್ತಿದೆ.
* ತರಿಕೆರೆ ಪಟ್ಟಣದ ಡಯಾಲಿಸಿಸ್ ಕೇಂದ್ರದಲ್ಲಿ 18 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು,3 ಡಯಾಲಿಸಿಸ್ ಯಂತ್ರದ ಮೂಲಕ ತಿಂಗಳಿಗೆ 150 ಡಯಾಲಿಸಿಸ್ ನಡೆಸಲಾಗುತ್ತಿದೆ.
* ಕಡೂರು ಪಟ್ಟಣದ ಡಯಾಲಿಸಿಸ್ ಕೇಂದ್ರದಲ್ಲಿ 18 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು,2 ಡಯಾಲಿಸಿಸ್ ಯಂತ್ರದ ಮೂಲಕ ತಿಂಗಳಿಗೆ 152 ಡಯಾಲಿಸಿಸ್ ನಡೆಸಲಾಗುತ್ತಿದೆ.
* ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನ ಡಯಾಲಿಸಿಸ್ ಕೇಂದ್ರದಲ್ಲಿ 62 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 15 ಡಯಾಲಿಸಿಸ್ ಯಂತ್ರದ ಮೂಲಕ ತಿಂಗಳಿಗೆ 600 ಡಯಾಲಿಸಿಸ್ ನಡೆಸಲಾಗುತ್ತಿದ್ದು,


ಇತ್ತೀಚಿನ ಜನಪ್ರಿಯ ಸುದ್ದಿಗಳು   

ಪ್ರತೀ ರೋಗಿಗೆ ನಿಗದಿತ ವೇಳಾಪಟ್ಟಿಯಂತೆ ವಾರಕ್ಕೆ ಕನಿಷ್ಠ ಎರಡರಿಂದ ಮೂರು ಡಯಾಲಿಸಿಸ್ ಮಾಡಿಸಲೇಬೇಕಾಗಿದ್ದು, ಸರ್ಕಾರ ಹಾಗೂ ಗುತ್ತಿಗೆ ಪಡೆದ ಸಂಜೀವಿನಿ ಸಂಸ್ಥೆ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಖಾಸಗಿ ಡಯಾಲಿಸಿಸ್ ಕೇಂದ್ರಗಳಲ್ಲಿ 1500 ಸಾವಿರದಿಂದ 2000 ರೂಗಳ ದುಬಾರಿ ಶುಲ್ಕ ನೀಡಿ ಡಯಾಲಿಸಿಸ್ ಮಾಡಿಸಿಕೊಂಡು ಜೀವ ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ರೋಗಿಗಳಿಗೆ ಬರಲಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ಸಿಬ್ಬಂದಿಗಳ ಸಮಸ್ಯೆ ಬಗೆ ಹರಿಸಿ ರೋಗಿಗಳ ಹಿತ ಕಾಪಾಡಬೇಕಿದೆ.

ಇದನ್ನೂ ಓದಿ; ಮಲೆನಾಡಲ್ಲಿ ತಗ್ಗಿದ ಮಳೆ ಅಬ್ಬರ; ಮುಳ್ಳಯ್ಯನಗಿರಿ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ತೆರವು

Dialysis Center Closed: ಇನ್ನು ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ. ಅಶ್ವಥ್ ಬಾಬು ಮಾತನಾಡಿ, ಜಿಲ್ಲೆಯ ಏಳು ಡಯಾಲಿಸಿಸ್ ಕೇಂದ್ರಗಳಲ್ಲಿ ಸುಮಾರು 166 ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು, ಡಯಾಲಿಸಿಸ್ ಸಿಬ್ಬಂದಿಗಳ ಮುಷ್ಕರದಿಂದಾಗುವ ಸಮಸ್ಯೆ ಪರಿಹಾರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಹಾಗೂ ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಇನ್ನು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ, ಕೊಪ್ಪ ಮಾತನಾಡಿ, ಕಳೆದ ಕೆಲವು ತಿಂಗಳಿನಿAದ ಕೊಪ್ಪದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಇಲ್ಲಿಯ ಯಂತ್ರದಲ್ಲಿ ಕೆಲವು ನ್ಯೂನ್ಯತೆಗಳಿದ್ದು, ಹಳೆಯ ಸಿಬ್ಬಂದಿಗಳು ಅದನ್ನು ಹೇಗೋ ನಿಭಾಯಿಸುತ್ತಿದ್ದರು. ಅಲ್ಲದೆ ರೋಗಿಗಳ ಆರೋಗ್ಯ ಸ್ಥಿತಿಯ ಬಗೆಗೂ ಅವರಿಗೆ ಸಂಪೂರ್ಣ ಮಾಹಿತಿ ಇರುತ್ತಿತ್ತು. ಆದರೆ ಹೊಸ ಸಿಬ್ಬಂದಿಗಳಿಗೆ ಅದು ಗೊತ್ತಾಗದೆ ರೋಗಿಗಳ ಮೇಲೆ ದುಷ್ಪರಿಣಾಮವಾದರೆ ಯಾರು ಹೋಣೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕ ಎಂದರು.