(Cucumber Farming Kannada) ಬೇಸಿಗೆಯಲ್ಲಿ ಬೆಳೆಯುವ ಬೆಳೆ ಎಂದೇ ಪ್ರಖ್ಯಾತವಾಗಿರುವ ಸೌತೆಕಾಯಿ, ಬೇಸಿಗೆ ಕಾಲದಲ್ಲಿ ಅತಿ ಬೇಡಿಕೆಯಲ್ಲಿ ಇರುತ್ತದೆ. ಬಿಸಿಲಿನ ವಾತಾವರಣದಲ್ಲಿ ನೀರಿನ ಅಂಶದಿಂದ ಕೂಡಿದ ಸೌತೆಕಾಯಿಯ ಸೇವನೆ ಹಿತವಾಗಿರುತ್ತದೆ. ಹೀಗಾಗಿ ಹೆಚ್ಚು ಜನ ಇದನ್ನು ಅಪೇಕ್ಷೆ ಪಡುತ್ತಾರೆ. ಇದರ ವೈಜ್ಞಾನಿಕ ಹೆಸರು “ಕ್ಯೂಕುಮಿಸ್ ಸ್ಯ್ ಟಿವಸ್” ಇದರಲ್ಲಿ ಹಲವಾರು ವಿಧದ ಸೌತೆಕಾಯಿಗಳು ಇರುತ್ತವೆ. ಮುಖ್ಯವಾಗಿ ಇದು ಬಳ್ಳಿಯ ಜಾತಿಯ ತರಕಾರಿ ಬೆಳೆಯಾಗಿದೆ. ಇದರಲ್ಲಿ ಶೇಕಡ 96 ರಷ್ಟು ನೀರಿನ ಅಂಶದಿಂದ ಕೂಡಿರುವ ತರಕಾರಿಯಾಗಿದೆ. ಇದನ್ನು ಭಾರತದಲ್ಲಿ ಬೇಸಿಗೆ ಬೆಳೆಯಾಗಿ ಹೆಚ್ಚು ಬೆಳೆಯಲಾಗುತ್ತದೆ. ಇದರ ಸೇವನೆಯಿಂದ ದೇಹದ ತಾಪಮಾನ ಕಡಿಮೆಯಾಗಿ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ದಾಹವನ್ನು ತಣಿಸಿ ದೇಹಕ್ಕೆ ಚೇತನ ನೀಡುವ ತರಕಾರಿಯಾಗಿದೆ. ಹೀಗಾಗಿ ಬೇಸಿಗೆ ಕಾಲಕ್ಕೆ ಅತ್ಯುತ್ತಮ ತರಕಾರಿಯಾದ ಸೌತೆಕಾಯಿಯನ್ನು ಎಲ್ಲರೂ ಹೆಚ್ಚು ಸೇವನೆ ಮಾಡುತ್ತಾರೆ.
ಇದನ್ನೂ ಓದಿ: ನವ ಮಂಗಳೂರು ಬಂದರು ಟ್ರಸ್ಟ್ ನಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
ಸೌತೆಕಾಯಿ ಬೆಳೆಯಬೇಕೆಂದರೆ ಮುಖ್ಯವಾಗಿ ಬೀಜಗಳ ಅಗತ್ಯ ಇರುತ್ತದೆ. ಇದು ಎಲ್ಲ ರೀತಿಯ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ಲಘು ಮರುಳ ಮಿಶ್ರಿತ ಮಣ್ಣಿನಿಂದ ಹಿಡಿದು ಜೇಡಿ ಮಣ್ಣಿನಲ್ಲೂ ಬೆಳೆಯುತ್ತದೆ. ಇದನ್ನು ಬೆಳೆಯಲು ಮಣ್ಣಿನ ಸಾರ 5.8 ರಿಂದ 7.5 ರಷ್ಟು ಇತರೆ ಉತ್ತಮ ಬೆಳೆ ಬರುತ್ತದೆ. ಇದರ ಬೀಜ ಮೊಳಕೆ ಬರಲು ಸರಿಯಾದ ಉಷ್ಣಾಂಶ ಅಗತ್ಯವಾಗಿದ್ದು, ಇದರ ಬೀಜಗಳು ಮೊಳಕೆ ಬರೆಸಿ ಕೂಡ ನೆಡಬಹುದಾಗಿದೆ.
ಇದನ್ನೂ ಓದಿ: ರೈತರೇ ಗಮನಿಸಿ; ಈ ಕೆಲಸ ಮಾಡದಿದ್ದರೆ ಜಮೆ ಆಗಲ್ಲ ಬರ ಪರಿಹಾರ ಹಣ!
ಮುಖ್ಯವಾಗಿ ಸೂರ್ಯನ ಕಿರಣ ಉಷ್ಣಾಂಶದ ವಾತಾವರಣ ಅಗತ್ಯವಾಗಿದ್ದು, ಅತಿಯಾದ ಬಿಸಿ ವಾತಾವರಣ ಕೂಡ ಗಿಡಗಳು ಒಣಗಲು ಪ್ರಾರಂಭವಾಗುತ್ತದೆ. ಹೀಗಾಗಿ ಸೂಕ್ತ ವಾತಾವರಣವಿದ್ದರೆ ಉತ್ತಮ ಬೆಳೆ ತೆಗೆಯಬಹುದಾಗಿದೆ. ಇನ್ನು ಇದನ್ನು ಬೆಳೆಯಲು ಮೊದಲು ನೆಲ ಹದ ಮಾಡಬೇಕಾಗುತ್ತದೆ. ನೀರಿನಲ್ಲಿ ಕರಗುವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ಹಾಕಿ ಜೊತೆಗೆ ಉತ್ತಮ ನೀರಿನ ವ್ಯವಸ್ಥೆ, ಹನಿ ನೀರಾವರಿ ಅಥವಾ ಪೈಪುಗಳ ಮೂಲಕ ನೀರು ಹರಿಸಲು ಅನುವು ಮಾಡಿಕೊಳ್ಳಬೇಕು. ಹಾಗೆಯೇ ನೀರು ಹರಿದು ಹೋಗಲು ಕೂಡ ತಳವಕಾಶದ ಅವಶ್ಯಕತೆ ಇರುತ್ತದೆ. ಫಲವತ್ತಾದ ಮಣ್ಣಿನಲ್ಲಿ ಉತ್ತಮ ಬೆಳೆಯನ್ನು ತೆಗೆಯಬಹುದಾಗಿದೆ.

ಇದನ್ನೂ ಓದಿ: ಸಾಲಗಾರರಿಗೆ ಗುಡ್ ನ್ಯೂಸ್; ಹೆಚ್ಚಿನ ಬಡ್ಡಿ ವಸೂಲಿ ಮಾಡಿ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ
ನೆಲವನ್ನು ಹದ ಮಾಡಿಕೊಂಡ ನಂತರ ಗುಂಡಿಗಳನ್ನು ತೆಗೆಯಬೇಕಾಗಿದ್ದು, ಕನಿಷ್ಠಪಕ್ಷ ಸಸಿಯಿಂದ ಸಸಿಗೆ 2.5 ಅಡಿ ಹಾಗೂ ಸಾಲಿನಿಂದ ಸಾಲಿಗೆ 3.5 ಅಡಿ ಅಂತರವಿರಬೇಕಾಗುತ್ತದೆ. 0.5 ಇಂಚು ಆಳ ಗುಂಡಿ ತೋಡಿ ಬೀಜ ಬಿತ್ತನೆ ಮಾಡಬೇಕಾಗುತ್ತದೆ. ಬಿತ್ತನೆ ಮಾಡುವ ಮೊದಲು ಬೀಜಗಳು ನೆನೆಸಿ ಇಡಬೇಕಾಗುತ್ತದೆ. ಈ ಗಿಡದ ಎಲೆಗಳು ದೊಡ್ಡದಾಗಿ ತ್ರಿಕೋನ ಆಕಾರದಲ್ಲಿ ಹಾಗೂ ರೋಮಗಳಿಂದ ಕೂಡಿರುತ್ತವೆ.
ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ಯೋಜನೆ; 17 ನೇ ಕಂತಿನ ಹಣ ಜಮಾ ಯಾವಾಗ?; ರೈತರಿಗೆ ಇಲ್ಲಿದೆ ಮಾಹಿತಿ
ಇದು ನೆಲದಲ್ಲಿ ಬೆಳೆಯಬೇಕಾದರೆ ಅಗಲವಾದ ಜಾಗದ ಅವಶ್ಯಕತೆ ಇರುತ್ತದೆ. ಜಾಗ ಕಮ್ಮಿ ಇದ್ದರೆ ಬೇಲಿಗಳು ಅಥವಾ ಕಂಬಗಳು ನೆಟ್ಟು ಅದರ ಮೇಲೆ ಹರಡಬಹುದಾಗಿದೆ. ಇದು ಬಳ್ಳಿಯಾದರಿಂದ ಸುಲಭವಾಗಿ ಹಬ್ಬುತ್ತದೆ. ಇದರಲ್ಲಿ ಹಳದಿ ಬಣ್ಣದ ಹೂವುಗಳು ಬಿಡುತ್ತವೆ. ನಂತರ ಕಾಯಿಗಳಾಗುತ್ತವೆ. ಬಿತ್ತನೆ ಮಾಡಿದ 40 ರಿಂದ 50 ದಿನಗಳಲ್ಲಿ ಕೊಹ್ಲಿ ಗೆ ಬರುತ್ತದೆ. ಕಾಯಿ ಬಿಟ್ಟು ಹಸಿರು ಬಣ್ಣದಲಿದ್ದಾಗ ಎಳೆಯ ಕಾಯಿ ಕಟಾವು ಮಾಡಬೇಕಾಗುತ್ತದೆ. ಇದರ ಕೊಯ್ಲಿಗೆ ಸಂಜೆಯ ಸಮಯ ಸೂಕ್ತವಾಗಿದೆ. ಯಾಕೆಂದರೆ ಬಿಸಿಲಿನಲ್ಲಿ ಕೊಯ್ದರೆ ನೀರಿನ ಅಂಶ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಸೌತೆಕಾಯಿ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇದ್ದು, ಸಮೃದ್ಧವಾಗಿ ನೀರಿನ ವ್ಯವಸ್ಥೆ ಮೊದಲು ಮಾಡಿಕೊಳ್ಳಬೇಕಾಗುತ್ತದೆ ಹಾಗೂ ಗಿಡದ ಆರೋಗ್ಯವಾಗಿ ಆಗಾಗ ಗೊಬ್ಬರಗಳ ಅವಶ್ಯಕತೆ ಜೊತೆಗೆ ಕೀಟಗಳ ಭಾದೆಯಿಂದ ತಪ್ಪಿಸಲು ಕೀಟನಾಶಕ ಸಿಂಪಡಿಸಬೇಕಾಗುತ್ತದೆ. ಸೂಕ್ತವಾದ ಆರೈಕೆ ಇದ್ದರೆ ಉತ್ತಮ ಫಲದ ಜೊತೆಗೆ ಹೆಚ್ಚಿನ ಬೆಳೆ ಪಡೆಯಬಹುದಾಗಿದೆ.
ಸೌತೆಕಾಯಿಯನ್ನು ಪ್ರಮುಖ ಆಹಾರವಾಗಿ ಬಳಸಲಾಗುತ್ತದೆ. ಇದರಿಂದ ಹಲವಾರು ಅಡುಗೆ ತಿಂಡಿಗಳು ಮಾಡಬಹುದು, ಹಸಿಯಾಗಿ ಸೇವಿಸಬಹುದು, ಜ್ಯೂಸುಗಳು ಮಾಡಬಹುದು, ಅಷ್ಟೇ ಅಲ್ಲದೆ ಔಷಧಿಗಳಲ್ಲಿ ಕೂಡ ಬಳಸಲಾಗುತ್ತದೆ. ಸುಲಭವಾಗಿ ಎಲ್ಲಾ ಮಣ್ಣುಗಳಲ್ಲಿ ಬೆಳೆಯಲು ಸಾಧ್ಯ ಇರುವಂತಹ, ಬೇಡಿಕೆ ಇರುವಂತಹ, ತರಕಾರಿ ಇದಾಗಿದೆ. ಬೇಸಿಗೆ ಕಾಲದ ತರಕಾರಿ ಎಂದೆ ಪ್ರಖ್ಯಾತಿ ಪಡೆದ ಇದು ಪ್ರತಿಯೊಬ್ಬರ ಅಚ್ಚುಮೆಚ್ಚಿನ ತರಕಾರಿಯಾಗಿದ್ದು, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಸೌತೆಕಾಯಿ ಅಪಾರ ಬೇಡಿಕೆಯಲ್ಲಿ ಇರುವಂತಹ ತರಕಾರಿಯಾಗಿದೆ. – ಎಸ್ ಪೂರ್ಣಿಮಾ ಬಾಬು, ಶಿರಾ (- (D/o ಲಕ್ಷ್ಮಿ ಶಾಮರಾವ್, ಚಿಕ್ಕಮಗಳೂರು)

ಇದನ್ನೂ ಓದಿ: ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ; 10th ಪಾಸಾದವರಿಗೆ ಭರ್ಜರಿ ಜಾಬ್ ಆಫರ್
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
- ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
- ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್; ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್






