CHIKKAMAGALURU: ಕಲ್ಲತ್ತಿಗರಿ ಜಲಪಾತ ವೀಕ್ಷಣೆಗೆ ನಿರ್ಬಂಧ

CHIKKAMAGALURU: (ನ್ಯೂಸ್ ಮಲ್ನಾಡ್ ವರದಿ) ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ವರುಣನ ಆರ್ಭಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರಿ ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟಮೀರಿ ಹರಿಯುತ್ತಿರುವ ಪರಿಣಾಮ ಆಸುಪಾಸಿನ ತಗ್ಗಿನ ಪ್ರದೇಶಗಳು, ಹೊಲ, ಗದ್ದೆ, ತೋಟ, ರಸ್ತೆಗಳು ಜಲಾವೃತವಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಇದನ್ನೂ ಓದಿ; ಗೃಹಜ್ಯೋತಿ ಯೋಜನೆ; ಮೊದಲ ಎರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳು ತಿರಸ್ಕೃತ; ಹೀಗೆ ಮಾಡಿದರೆ ಆಗಸ್ಟ್ ತಿಂಗಳಿನಲ್ಲಿ ಸಿಗಲಿದೆ ಉಚಿತ ವಿದ್ಯುತ್

ಈ ನಿಟ್ಟಿನಲ್ಲಿ ಜಲಪಾತಗಳು ಕೂಡ ಅಪಾಯ ಮಟ್ಟ ಮೀರಿ ಧುಮ್ಮಿಕ್ಕುತ್ತಿರೋ ಕಾರಣ ಕೆಲವು ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ; ಚಿಕ್ಕಮಗಳೂರು: ಮಳೆಹಾನಿ ಪ್ರದೇಶಗಳಿಗೆ ಸಚಿವ ಕೆ.ಜೆ.ಜಾರ್ಜ್ ಭೇಟಿ, ಪರಿಶೀಲನೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಜಲಪಾತ ಅಪಾಯದ ಮಟ್ಟ ಮೀರಿ ಧುಮ್ಮಿಕ್ಕುತ್ತಿರೋ ಕಾರಣ ಜಲಪಾತ ವೀಕ್ಷಣೆಗೆ ಬಂದ್ ಮಾಡಲಾಗಿದೆ.

ಅಪಾಯದ ಸ್ಥಳಗಳಿರೋ ಕಲ್ಲತ್ತಿಗರಿ ಜಲಪಾತದಿಂದ ಬರೋ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕ ಕ್ರಮ ವಹಿಸಲಾಗಿದೆ.

ಪ್ರವಾಸವನ್ನು ಮುಂದೂಡಿ; ಚಿಕ್ಕಮಗಳೂರು ಎಸ್ಪಿ ಮನವಿ

ಒಂದುವೇಳೆ ನೀವು ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಪ್ಲಾನ್ ಮಾಡಿದ್ದರೆ ಅದನ್ನು ಮುಂದೂಡಿ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಉಮಾ ಪ್ರಶಾಂತ್ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ಸೇರಿದಂತೆ ಹಲವೆಡೆ ಧಾರಾಲಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಅನೇಕ ಜಲಪಾತಗಳು ವ್ಯಾಪಕ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿವೆ. ಪ್ರವಾಸಕ್ಕೆಂದು ಬಂದು ಫಾಲ್ಸ್ ಒಂದರಲ್ಲಿ ರೀಲ್ಸ್ ಮಾಡಲು ತೆರೆಳಿ ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದಿರುವ ಉದಾಹರಣೆಗೆ ಕಣ್ಮುಂದಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು 


gruha jyothi: how to check gruha jyothi application status

gruha jyothi: ಗೃಹಜ್ಯೋತಿ ಯೋಜನೆಗೆ ಮೊದಲ ಎರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳ ತಿರಸ್ಕೃತವಾಗಿದೆ ಎಂದು ತಿಳಿದುಬಂದಿದೆ. ತಾಂತ್ರಿಕ ಲೋಪ ಉಂಟಾಗಿರುವುದರಿಂದ ಈ ಅರ್ಜಿಗಳು ತಿರಸ್ಕೃತವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ; ಹವಾಮಾನ ಆಧಾರಿತ ಬೆಳೆವಿಮೆ; 23 ಜಿಲ್ಲೆಗಳ ರೈತರಿಗೆ ಕಂತು ಪಾವತಿಸಲು ಅವಕಾಶ

ಆರಂಭದಲ್ಲಿ ಸೇವಾ ಸಿಂಧು ಸರ್ವರ್ ಡೌನ್ ಇದ್ದ ಕಾರಣ ಅರ್ಜಿ ಲಿಂಕ್ ಆಗದಿರುವ ಸಾಧ್ಯತೆ ಇದೆ. ಒಂದು ವೇಳೆ ಈ ಎರಡು ದಿನ ಅರ್ಜಿ ಸಲ್ಲಿಸಿದ್ರೆ, ನಿಮ್ಮ ಸ್ಟೇಟಸ್‌ನನ್ನು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ತಿರಸ್ಕೃತವಾಗಿದೆ, ಮತ್ತೊಮ್ಮೆ ಅರ್ಜಿ ಸಲ್ಲಿಸಿ, ರಾಜ್ಯದಲ್ಲಿ ಈವರೆಗೂ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಒಂದು ಕೋಟಿಗೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ಉಚಿತ ವಿದ್ಯುತ್ ಯೋಜನೆ ಬೇಕೆಂದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಜುಲೈ 27 ರೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರವೇ ಮುಂದಿನ ತಿಂಗಳ ಬಿಲ್‌ನಲ್ಲಿ ಉಚಿತ ವಿದ್ಯುತ್ ಶುಲ್ಕವು ಕಡಿತವಾಗಲಿದೆ.

ಹಾಗಾದರೆ ಅರ್ಜಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?:
* ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ (https://sevasindhu.karnataka.gov.in/statuctrack/track_status)
* ಅಲ್ಲಿ track your application status ಎಂದು ಕಾಣುತ್ತದೆ.
* ಕೇಳಗೆ ಎರಡು ಬಾಕ್ಸ್ಗಳಿವೆ. ಮೊದಲನೇ ಬಾಕ್ಸ್ನಲ್ಲಿ select escom name ಅಂತ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ escom ಯಾವುದು ಎಂಬುದನ್ನು ಆಯ್ಕೆ ಮಾಡಿ.
* ಎರಡನೇ ಬಾಕ್ಸ್ನಲ್ಲಿ ಇಟಿಣeಡಿ enter your account id ಅಂತಿರುತ್ತದೆ. ಅಲ್ಲಿ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಿದ್ದaccount id ಯನ್ನು ಎಂಟರ್ ಮಾಡಿ.
* ಕೊನೆಯದಾಗಿ check status ಎಂಬ ಹಸಿರು ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ gruha jyothi application status ತಿಳಿಯುತ್ತದೆ.
* ಗೃಹ ಜ್ಯೋತಿ application status ನಲ್ಲಿ ನಿಮ್ಮ application ರೆಫರೆನ್ಸ್ ನಂಬರ್,account id, ಅರ್ಜಿ ಸಲ್ಲಿಸಿದ ದಿನಾಂಕ, ಮತ್ತು ಅರ್ಜಿ ಸ್ಥಿತಿ ಇರುತ್ತದೆ.

Gruha Jyothi:
gruha jyothi:

ಇದನ್ನೂ ಓದಿ; ನದಿಯಲ್ಲಿ ಮುಳುಗಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಶಾಸಕಿ ನಯನ ಮೋಟಮ್ಮ ಸಾಂತ್ವಾನ

gruha jyothi: ಗೃಹಜ್ಯೋತಿ ಅರ್ಜಿ ಸಲ್ಲಿಸುವುದು ಹೇಗೆ?;
* ಸೇವಾಸಿಂಧು ಪೋರ್ಟಲ್ https://sevasindhugs.karnataka.gov.in/# ಗೆ ಭೇಟಿಕೊಡಿ.
* ಅಲ್ಲಿ ಗೃಹ ಜ್ಯೋತಿ ಯೋಜನೆಗೆ ಮೀಸಲಿಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನೀವು ಈ ವೆಬ್‌ಸೈಟ್ ಅನ್ನು ನಿಮ್ಮಮೊಬೈಲ್/ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮೂಲಕ ತೆರೆಯಬಹುದು
* ಹೀಗೆ ಅರ್ಜಿ ಸಲ್ಲಿಸುವ ಹೊತ್ತಲ್ಲಿ ನಿಮ್ಮೊಂದಿಗೆ ಆಧಾರ್ ಕಾರ್ಡ್, ಆರ್‌ಆರ್‌ಕಾರ್ಡ್, ನಿಮ್ಮ ಮನೆಗೆ ಬರುವ ಕರೆಂಟ್ ಬಿಲ್‌ನಲ್ಲಿ ಇರುವ, ಗ್ರಾಹಕರ ಅಕೌಂಟ್ ಐಡಿ, ವೋಟರ್ ಐಡಿ ಕಾರ್ಡ್ ಗಳನ್ನೆಲ್ಲ ಸಿದ್ಧವಾಗಿಟ್ಟುಕೊಳ್ಳಿ,
* ಗೃಹಜ್ಯೋತಿ ಫಾರ್ಮ್ ನಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನೂ ತುಂಬಿ ಸಬ್‌ಮಿಟ್ ಕೊಡಿ.
* ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಫೋನ್‌ನಲ್ಲಿ ಸಹಾಯವಾಣಿ ಸಂಖ್ಯೆ 1912 ಗೆ ಕರೆ ಮಾಡಬಹುದಾಗಿದೆ


ಇತ್ತೀಚಿನ ಜನಪ್ರಿಯ ಸುದ್ದಿಗಳು 


ಯಾವೆಲ್ಲಾ ದಾಖಲೆಗಳು ಬೇಕು?:
ಅರ್ಜಿ ಸಲ್ಲಿಕೆ ಮಾಡುವವರು ಆಧಾರ್ ಕಾರ್ಡ್, ಆಧಾರ್ ನಂಬರ್, ಮೊಬೈಲ್ ಸಂಖ್ಯೆ ಮನೆ ಬಾಡಿಗೆ ಕರಾರು ಪತ್ರ ನೀಡುವುದು ಕಡ್ಡಾಯವಾಗಿದೆ. ವೋಟರ್ ಐಡಿ ಕೂಡ ಯಾವುದಕ್ಕೂ ಇಟ್ಟುಕೊಂಡಿರಿ. ಮನೆ ಬಾಡಿಗೆ ಕರಾರು ಪತ್ರ ಇಲ್ಲದವರಿಗೆ ವೋಟರ್ ಐಡಿ ಬೇಕಾಗುತ್ತದೆ.

ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿಸಬೇಕೆ?
ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಪಾವತಿಸಬೇಕಾಗಿರುವುದಿಲ್ಲ.