CHAITHRA KUNDAPURA: ಉಡುಪಿ; (ನ್ಯೂಸ್ ಮಲ್ನಾಡ್ ವರದಿ) ಉದ್ಯಮಿಯೊಬ್ಬರಿಗೆ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹೇಳಿ ಏಳು ಕೋಟಿ ರೂಪಾಯಿ ಪಡೆದು ವಂಚನೆ ಎಸಗಿದ ಆರೋಪದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಹಿಂದು ಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ; ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; 60,000 ರವರೆಗೆ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ
ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವರು ದೂರು ನೀಡಿದ್ದರು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ ಗೋವಿಂದ ಬಾಬು, ಚೈತ್ರಾ ವಿರುದ್ಧ ಆರೋಪಿಸಿದ್ದಾರೆ. ಉದ್ಯಮಿಯ ಮುಗ್ಧತೆಯನ್ನು ಬಳಸಿಕೊಂಡು ಮಹಾವಂಚನೆ ಮಾಡಿದ್ದಾರೆ. ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಆ್ಯಂಡ್ ಟೀಂ ವಂಚಿಸಿತ್ತು. ಸುಮಾರು ಮೂರು ಹಂತದಲ್ಲಿ ಏಳು ಕೋಟಿ ರೂಪಾಯಿ ಯನ್ನು ಪೀಕಿದ್ದರು ಎನ್ನಲಾಗಿದೆ. ಸದ್ಯ ನಿನ್ನೆ ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ; ಗೌರಿ ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಗುಡ್ ನ್ಯೂಸ್; 1200 ವಿಶೇಷ ಬಸ್‌ಗಳ ವ್ಯವಸ್ಥೆ; ಮಾರ್ಗ ಕುರಿತು ಮಾಹಿತಿ ಇಲ್ಲಿದೆ
ಕೈತುಂಬಾ ಕೇಸರಿ ನೂಲು, ಕುತ್ತಿಗೆಯಲ್ಲಿ ಸದಾ ಕೇಸರಿ ಶಾಲು, ಬಾಯಿ ತುಂಬಾ ಹಿಂದುತ್ವದ ಭಾಷಣ ಬಿಗಿಯುತ್ತಿದ್ದ ಚೈತ್ರ ಕುಂದಾಪುರ ಮಾಡಿದ್ದು ಮಾತ್ರ ಛತ್ರಿ ಕೆಲಸ(CHAITHRA KUNDAPURA:).
ಒಂದೆಡೆ ಹಿಂದೂ ಪರ ಕಾರ್ಯಕರ್ತರು ತಮ್ಮ ಕೈಯಿಂದ ನೂರಿನ್ನೂರು ರೂಪಾಯಿ ಹಾಕಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿ ಈಕೆಗೆ ಕಾರಿನ ಬಾಡಿಗೆಯನ್ನೂ ಕೊಟ್ಟು ಕರೆಸಿ ಹಿಂದುತ್ವದ ಕೆಲಸ ಮಾಡುತ್ತಿದ್ಜರೆ ಮತ್ತೊಂದೆಡೆ ಈ ಸೋಗಲಾಡಿ ಚೈತ್ರಾ ತನ್ನ ಸ್ವಾರ್ಥಕ್ಕಾಗಿ ಅವಳಂತಹದ್ದೇ ವಂಚಕರ ಗ್ಯಾಂಗ್ ಒಂದನ್ನು ಸೈಲೆಂಟ್ ಆಗಿ ಕಟ್ಟಿಕೊಂಡು ಡೀಲ್ ಕುದುರಿಸುತ್ತಿದ್ದಳು.
ಈಕೆಯ ಗ್ಯಾಂಗ್ ಬೈಂದೂರಿನ ಗೋವಿಂದ ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡಿಸುತ್ತೇವೆ ಎಂದು ಕಥೆ ಹೆಣೆದು ಕೋಟಿ ಕೋಟಿ ಉಂಡೆನಾಮ ತಿಕ್ಕಿದ ಸ್ಟೋರಿ ಕೇಳಿದರೆ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ ಎನಿಸುತ್ತದೆ.
ಗೋವಿಂದ ಪೂಜಾರಿ ಓರ್ವ ಬ್ಯುಸಿನೆಸ್ ಮ್ಯಾನ್ ಹೊಟೇಲ್ ಉದ್ಯಮ ಸೇರಿದಂತೆ ಕೆಲವು ಕಂಪನಿಗಳ ಒಡೆತನ ಹೊಂದಿರುವ ಈತ ತಮ್ಮದೇ ಟ್ರಸ್ಟ್ ಒಂದರ ಮೂಲಕ ಸಾಮಾಜಿಕ ಕಾರ್ಯ ಮಾಡಿಕೊಂಡು ಬರುತ್ತಿದ್ದರು, ಆದರೆ ಅದ್ಯಾವ ಗಳಿಗೆಯಲ್ಲಿ ರಾಜಕೀಯದ ಚಟ ಅಂಟಿಕೊಂಡಿತೋ ಏನೋ ತಾನು ಎಂಎಲ್ಎ ಆಗಬೇಕು ಅಂತ ಟಿಕೆಟ್ ಗೆ ಟ್ರೈ ಮಾಡೋಕೆ ಶುರು ಮಾಡಿದ, ಆದರೆ ಈತನ ಗ್ರಹಚಾರಕ್ಕೆ ಆಗ ಈತನಿಗೆ ಕಾಂಟ್ಯಾಕ್ಟ್ ಗೆ ಸಿಕ್ಕಿದ್ದೇ ಚೈತ್ರಾ ಕುಂದಾಪುರ ಹಾಗೂ ಚಿಕ್ಕಮಗಳೂರಿನ ಫ್ರಾಡ್ ಗಗನ್ ಕಡೂರು ತಂಡ.
ಇದನ್ನೂ ಓದಿ; ಪೊಲೀಸರ ಮಿಂಚಿನ ಕಾರ್ಯಾಚರಣೆ; ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಬಂಧನ
ಈತ ಅಸಲಿಗೆ ಕಂಟ್ರಾಕ್ಟರ್ ಅಂತೆ, ಶಿಷ್ಯಕೋಟಿ ಎನ್ನುತ್ತಲೇ ಬಹುಕೋಟಿ ವಂಚನೆಗಿಳಿದ್ದಿದ್ದ ಫ್ರಾಡ್ ಗಗನ್ ಬಿಜೆಪಿಯಲ್ಲಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಈತನನ್ನು ಇವನ ಹಣೆಬರಹ ತಿಳಿದ ನಂತರ ಜವಾಬ್ದಾರಿಯಿಂದ ಕಿತ್ತೆಸೆದಿದ್ದಾರೆ. ಪಕ್ಷದಲ್ಲಿ ನಿಷ್ಠೆ ಇದ್ದವನಂತೆ ಬಿಲ್ಡಪ್ ಕೊಡುತ್ತಿದ್ದ ಗಗನ್ ಸಾಕಷ್ಟು ಜನರಿಗೆ ಹಣದ ವಿಷಯದಲ್ಲಿ ಯಾಮಾರಿಸಿದ್ದ.. ಅಸಲಿಗೆ ಆತನಿಗೆ ಪಕ್ಷ ಹಾಗೂ ಕೇಸರಿ ಶಾಲು ತೋರ್ಪಡಿಕೆಯ ವಸ್ತುವಾಗಿತ್ತು ಅಷ್ಟೇ.
ಕಾಶ್ಮೀರದ ಪ್ರಚಾರಕರಾದ ಕಬಾಬ್ ಮಾಡುವವ:
ಈ ಗ್ಯಾಂಗ್ ಮೊದಲಿಗೆ ಕಥೆ ಹಣೆದಿದ್ದು ಕಾಶ್ಮೀರದ ಪ್ರಚಾರಕರ ಕಥೆ, ಕಾಶ್ಮೀರದ ಪ್ರಚಾರಕರಾದ ವಿಶ್ವನಾಥ ಜಿ ಅವರು ನರೇಂದ್ರ ಮೋದಿಯವರು ಮಾಡಿರುವ ಟಿಕೆಟ್ ಸೆಲೆಕ್ಷನ್ ಕಮಿಟಿಯಲ್ಲಿ ಇದ್ದಾರೆ, ಅವರು ಟಿಕೆಟ್ ಕೊಡಿಸುತ್ತಾರೆ ಎಂದು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಮೀಟಿಂಗ್ ಆರೆಂಜ್ ಮಾಡುತ್ತಾರೆ, ಅಲ್ಲಿಗೆ ಕಬಾಬ್ ಮಾರುವವನೊಬ್ಬನಿಗೆ ಮೇಕಪ್ ಮಾಡಿಸಿ ಜುಬ್ಬಾ ತೊಡಿಸಿ ಗೋವಿಂದ ಪೂಜಾರಿ ಜೊತೆಗೆ ಮೀಟಿಂಗ್ ಫಿಕ್ಸ್ ಮಾಡುತ್ತಾರೆ, ಎಲ್ಲೂ ಅನುಮಾನ ಬರದಂತೆ ನಟಿಸಿದ ಕಬಾಬ್ ಮ್ಯಾನ್ ಕೊನೆಗೆ ಟಿಕೆಟ್ ಗೆ ಸಧ್ಯ 3 ಕೋಟಿ ಹಣ ನೀಡುವಂತೆ ತಿಳಿಸುತ್ತಾನೆ, ಗೋವಿಂದ ಪೂಜಾರಿ ಸಹ ನಂಬಿ ನಂತರದಲ್ಲಿ ಇವರ ತಂಡಕ್ಕೆ 3 ಕೋಟಿ ಹಣ ಪಾವತಿ ಮಾಡುತ್ತಾನೆ.
ಅದರಲ್ಲಿ ನಟಿಸಿದ ಕಬಾಬ್ ಮ್ಯಾನ್ ಗೆ ಎರಡು ಲಕ್ಷ ಪಾವತಿಸಿ, ಎಲ್ಲಾದರೂ ಬಾಯಿಬಿಟ್ಟರೆ ಹುಷಾರು ಎಂದು ಧಮ್ಕಿ ಸಹ ಹಾಕುತ್ತಾರೆ.
ಆನಂತರ ಹಾಲಶ್ರೀ ಸ್ವಾಮೀಜಿ ಎಂಬ ಸ್ವಾಮೀಜಿ ಓರ್ವರನ್ನು ಭೇಟಿ ಮಾಡಿಸಿ ಅವರು ನರೇಂದ್ರ ಮೋದಿ ಅವರ ಅತ್ಯಾಪ್ತರು, ಬಹಳಷ್ಟು ಜನರಿಗೆ ಟಿಕೆಟ್ ಕೊಡಿಸಿದ್ದಾರೆ, ಸಧ್ಯಕ್ಕೆ ದಕ್ಷಿಣ ಭಾರತವನ್ನು ಗಮನಿಸಲು ತಿಳಿಸಿದ್ದಾರೆ ಎಂದು ಪರಿಚಯಿಸಿ ಅವರ ಹೆಸರಿನಲ್ಲಿ ಸಹ ಈ ಗ್ಯಾಂಗ್ 50 ಲಕ್ಷ ಪೀಕಿಸಿದ್ದಾರೆ
ಸಾಯಿಸಿಯೇಬಿಟ್ಟರು ಪ್ರಚಾರಕರನ್ನು:
ಇನ್ನೇನು ಬಿಜೆಪಿ ಟಿಕೆಟ್ ಹಂಚಿಕೆ ಮುಗಿಯುತ್ತದೆ ಎನ್ನುವಾಗ ಚೈತ್ರಾ ಗ್ಯಾಂಗ್ ಹೊಸದೊಂದು ಟ್ವಿಸ್ಟ್ ಅನ್ನು ಸ್ಟೋರಿಗೆ ನೀಡುತ್ತದೆ, ಅದೇನೆಂದರೆ ಬಾಬು ಪೂಜಾರಿಗೆ ಕರೆ ಮಾಡಿ ಕಾಶ್ಮೀರದಲ್ಲಿ ಪ್ರಚಾರಕರಾಗಿದ್ದ ವಿಶ್ವನಾಥ್ ಜಿ ತೀರಿಕೊಂಡಿದ್ದಾರೆ ಎಂದು ಕಥೆ ಹೆಣೆದಿದ್ದಾರೆ, ಆಗ ಗೋವಿಂದ ಪೂಜಾರಿ ಛೇ ಹೀಗಾಯಿತಲ್ಲ ಎಂಬ ನೋವಲ್ಲಿ ಚೈತ್ರಾ, ಗಗನ್ ಗೂ ಸೇರಿಸಿ ಕಾಶ್ಮೀರಕ್ಕೆ ಹೋಗಿ ಅವರ ಪಾರ್ಥಿವ ಶರೀರ ನೋಡಿಕೊಂಡು ಬರೋಣ ಎಂದು ಟಿಕೆಟ್ ಬುಕ್ ಮಾಡಿದ್ದಾನೆ. ಆಗ ಚೈತ್ರಾ ಗ್ಯಾಂಗ್ ಸ್ವಲ್ಪ ಕಕ್ಕಾಬಿಕ್ಕಿಯಾಗಿದೆ, ಆದರೂ ಮ್ಯಾನೇಜ್ ಮಾಡಿ ಅವರ ದರ್ಶನಕ್ಕೆ ಅವಕಾಶ ಇಲ್ಲವಂತೆ, ಪ್ರಚಾರಕರಾದವರ ಸಂಸ್ಕಾರ ಬಹಿರಂಗವಾಗಿಯೂ ಮಾಡುವುದಿಲ್ಲ, ಬೆಂಗಳೂರಿಗೂ ತರುವುದಿಲ್ಲವಂತೆ ಹಾಗಾಗಿ ಹೋದರೂ ನಮಗೆ ಪಾರ್ಥೀವ ಶರೀರದ ದರ್ಶನ ಸಿಗುವುದಿಲ್ಲ, ನರೇಂದ್ರ ಮೋದಿ ಅವರು ಸಹ ಸೈಲೆಂಟಾಗಿ ಹೋಗಿ ದರ್ಶನ ಮಾಡಿ ಬರುತ್ತಾರೆ ಎಂದು ಗೋವಿಂದ ಪೂಜಾರಿ ಕಿವಿಗೆ ಚೈತ್ರಾ ದಾಸವಾಳ ಹೂ ಇಟ್ಟಿದ್ದಾಳೆ, ಅದೇ ಸಂದರ್ಭದಲ್ಲಿ ಇತ್ತ ಗಗನ್ ಕಡೂರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಗೋವಿಂದ ಪೂಜಾರಿಗೆ ಸಂಪರ್ಕಕ್ಕೆ ಸಿಗದೆ ಕಳ್ಳಾಟ ಶುರು ಮಾಡಿದ್ದಾನೆ.
ಮೊದಲಿಗೆ ಟಿಕೆಟ್ ಕನ್ಫರ್ಮ್ ಆಗದಿದ್ದರೆ ಹಣ ವಾಪಾಸ್ ಸಿಗುತ್ತದೆ ಎಂದು ಹೇಳಿದ್ದ ಚೈತ್ರಾ ಗ್ಯಾಂಗ್ ನಂತರ ಉಲ್ಟಾ ಹೊಡೆದಿದೆ, ಅದಲ್ಲದೇ ಗೋವಿಂದ ಪೂಜಾರಿಗೇ ಧಮ್ಕಿ ಹಾಕಲು ಪ್ರಾರಂಭಿಸಿತು. ವಿಶ್ವನಾಥ ಜಿ ಸಾವನ್ನಪ್ಪಿರುವುದರಿಂದ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸತೊಡಗಿತು.
ಆಗ ಸ್ವಲ್ಪ ಅನುಮಾನಗೊಂಡ ಗೋವಿಂದ ಪೂಜಾರಿ ರೈಲು ಹೋದಮೇಲೆ ಟಿಕೆಟ್ ಕೇಳಿದವನಂತೆ ಸಂಘದ ಪ್ರಚಾರಕರನ್ನು ಸಂಪರ್ಕಿಸಿ, ಆ ಮೂಲಕ ದೆಹಲಿಯಲ್ಲಿರುವ ಪ್ರಮುಖರನ್ನು ಸಂಪರ್ಕಿಸಿದಾಗ ವಿಶ್ವನಾಥ ಜಿ ಎಂಬುವವರು ಯಾರೂ ಅಸ್ತಿತ್ವದಲ್ಲೇ ಇಲ್ಲ, ಕಾಶ್ಮೀರದಲ್ಲಂತೂ ಇಲ್ಲವೇ ಇಲ್ಲ. ಇಲ್ಲದವರು ಸಾಯಲೂ ಸಾಧ್ಯವಿಲ್ಲ ಎಂದುಬಿಟ್ಟರು. ಆಗ ಗೋವಿಂದ ಪೂಜಾರಿಗೆ ಇವರ ಅಸಲಿ ಮುಖ ಅನಾವರಣ ಆಗಿದೆ.
ವೀಡಿಯೋ, ಆಡಿಯೋ ರೆಕಾರ್ಡ್:
ಕೊಟ್ಟವನು ಕೋಡಂಗಿ ಎಂಬಂತಾಗಿದ್ದ ಗೋವಿಂದ ಪೂಜಾರಿ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸ ಎಂದರೆ ತಾನು ಹಣದ ವ್ಯವಹಾರ ಮಾಡಿದ ಎಲ್ಲವನ್ನೂ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದು. ಅದೇ ಧೈರ್ಯದಿಂದ ಪೊಲೀಸ್ ದೂರು ನೀಡಿದ್ದಾರೆ. ಮೊದಲಿಗೆ ಉಲ್ಟಾ ಹೊಡೆದಿದ್ದ ಚೈತ್ರಾ ಗ್ಯಾಂಗ್ ವೀಡಿಯೋ ರೆಕಾರ್ಡ್ ಇದೆ ಎಂದು ತಿಳಿದ ಬಳಿಕ ಸ್ವಲ್ಪ ಮೆತ್ತಗೆ ಆಗಿತ್ತು.
ರಾಜಿ ಸಂಧಾನ:
ಈ ನಡುವೆ ವಿಡಿಯೋ ಇದೆ ಎಂದು ತಿಳಿದ ಬಳಿಕ ರಾಜಿ ಸಂಧಾನ ಮಾಡಿಕೊಳ್ಳಲು ಮಾತುಕತೆ ಮಾಡಿಕೊಂಡಿದ್ದ ಚೈತ್ರಾ ಟೀಂ ಒಂದೂವರೆ ಕೋಟಿ ಹಣ ವಾಪಾಸ್ ಕೊಡುತ್ತೇವೆ, ನಮ್ಮ ಬಳಿ ಈಗ ಇರುವುದೇ ಇಷ್ಟು ಹಣ. ಉಳಿದಿದ್ದನ್ನು ಹಂತಹಂತವಾಗಿ ನೀಡುತ್ತೇವೆ ಎಂದಿದ್ದರು. ಆದರೆ ಅದಕ್ಕೆ ಗೋವಿಂದ ಪೂಜಾರಿ ಬಿಲ್ ಕುಲ್ ಒಪ್ಪಿರಲಿಲ್ಲ.
ಯಾರ್ಯಾರ ಮೇಲೆ ಪ್ರಕರಣ?
ಎ೧.ಚೈತ್ರಾ ಕುಂದಾಪುರ, ಎ೨ ಗಗನ್ ಕಡೂರು, ಎ೩ ಅಭಿನವ ಹಾಲಾಶ್ರೀ, ಎ೪.ರಮೇಶ್, ಎ೫.ನಾಯ್ಕ್ , ಎ೬.ಧನರಾಜ್ , ಎ೭.ಶ್ರೀಕಾಂತ್, ಎ೮.ಪ್ರಸಾದ್ ಬೈಂದೂರು
ಪ್ರಮುಖ ಸುದ್ದಿಗಳನ್ನು ಓದಿ
- ಕೊಪ್ಪ: ಫೋಟೋ ವೈರಲ್ ಹಿನ್ನಲೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ; ಮುಸ್ಲಿಂ ಯುವಕರ ಜೊತೆ ಹೋಗಿದ್ದಾಳೆಂದು ನೈತಿಕ ಪೊಲೀಸ್ ಗಿರಿ
- ಜಿ20 ಶೃಂಗಸಭೆ, ಏನಿದು g20?; ಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ?
- ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ; ಶೃಂಗಸಭೆ ಮೂಲಕ ಈಡೇರಲಿದೆ ಭಾರತದ ಕನಸು
- ಗಣೇಶನಿಗೆ ಪ್ರಿಯವಾದ ಕರ್ಜಿಕಾಯಿ ತಯಾರಿಸುವುದು ಹೇಗೆ?; ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಈ ರೀತಿ ಮಾಡಿ ನೋಡಿ
- ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್; ಈ ಐಫೋನ್‌ಗೆ ಈಗ ಸಖತ್ ಡಿಸ್ಕೌಂಟ್..!; ಆಫರ್ ತಿಳಿದ್ರೆ ವಾವ್ ಅಂತೀರಾ!?
- ಬಾಯಲ್ಲಿ ನೀರು ತರಿಸುವ ರಸಗುಲ್ಲ; ಅತ್ಯಂತ ಸರಳ ವಿಧಾನ
- ಸಾರಿಗೆ ಸಿಬ್ಬಂದಿಗೆ ಗುಡ್ ನ್ಯೂಸ್; ಏನದು ಗುಡ್ ನ್ಯೂಸ್
- ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?; ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
- ಭಾರತದಲ್ಲಿ ಭರ್ಜರಿ ಹೂಡಿಕೆ ಮಾಡಲಿರುವ ಅಮೆಜಾನ್
- ಶವಸಂಸ್ಕಾರದ ವೇಳೆ ನೀರಿನ ಮಡಕೆಯನ್ನು ಒಡೆಯಲು ಕಾರಣವೇನು ಗೊತ್ತೇ…?; ಇಲ್ಲಿದೆ ನೋಡಿ ಅನೇಕರಿಗೆ ತಿಳಿಯದ ಮಾಹಿತಿ….
-
intresting story ಓದಲು ಇಲ್ಲಿ ಕ್ಲಿಕ್ ಮಾಡಿ