Central Budget: ಇಂದು ಕೇಂದ್ರ ಸರಕಾರದಿಂದ 2026-27 ನೇ ಸಾಲಿನಲ್ಲಿ ಅನುಷ್ಥಾನ ಮಾಡಲಿರುವ ಎಲ್ಲಾ ಅಭಿವೃದ್ದಿ ಯೋಜನೆಗಳಿಗೆ ಅನುದಾನವನ್ನು ಒದಗಿಸಲು ಬಜೆಟ್ ಅನ್ನು ಮಂಡನೆ ಮಾಡಲಾಗಿದೆ.
2026ರ ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್, ದೇಶದ ಬೆನ್ನೆಲುಬಾದ ಕೃಷಿ ವಲಯಮತ್ತು ಸಾಮಾನ್ಯ ವರ್ಗದ ಜನರ ನಿರೀಕ್ಷೆಗಳಿಗೆ ಹೊಸ ಆಯಾಮ ನೀಡಿದೆ. “ವಿಕಸಿತ ಭಾರತ”ದ ಗುರಿಯತ್ತ ಸಾಗುತ್ತಿರುವ ಈ ಬಜೆಟ್‌ನಲ್ಲಿ ರೈತರಿಗೆ ತಂತ್ರಜ್ಞಾನದ ಸ್ಪರ್ಶ ನೀಡುವ ಜೊತೆಗೆ ಮಧ್ಯಮ ವರ್ಗದವರಿಗೆ ತೆರಿಗೆ ಸರಳೀಕರಣದ ಭರವಸೆ ನೀಡಲಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಆಧುನೀಕರಣ, ಮತ್ತು ಸಣ್ಣ ಮಧ್ಯಮ ಕೈಗಾರಿಕೆ ಸೇರಿದಂತೆ ಕರಾವಳಿ ಕೃಷಿ ಮತ್ತು ಸಾಮಾನ್ಯ ಜನರ ಜೀವನ ಮಟ್ಟ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಭಾರತ್ ವಿಸ್ತಾರ್:
ಇದು ಬಜೆಟ್‌ನ ಅತ್ಯಂತ ಮಹತ್ವದ ಘೋಷಣೆ. ಇದು ಬಹುಭಾಷಾ AI ಸಾಧನವಾಗಿದ್ದು, ರೈತರಿಗೆ ಹವಾಮಾನ ವರದಿ, ಬೆಳೆಗಳ ಮಾಹಿತಿ ಮತ್ತು ಮಾರುಕಟ್ಟೆ ದರವನ್ನು ಅವರದ್ದೇ ಭಾಷೆಯಲ್ಲಿ ನೀಡಲಿದೆ.
ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ:
ತೆಂಗು, ಶ್ರೀಗಂಧ, ಗೊಡಂಬಿ,ಕೋಕೋ ಮತ್ತು ಅಗರ್‌ವುಡ್‌ನಂತಹ ಅಧಿಕ ಲಾಭ ತರುವ ಬೆಳೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗಿದೆ. ಪ್ರಮುಖವಾಗಿ ಹಳೆಯ ತೋಟಗಳ ಪುನರುಜ್ಜಿವನಕ್ಕೆ ಆದ್ಯತೆ ನೀಡಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್:
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲದ ಮಿತಿಯನ್ನು ರೂ.3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ.
ಬೆಳೆ ವೈವಿಧ್ಯೀಕರಣ:
ಕಡಿಮೆ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳಲ್ಲಿ ಉತ್ಪಾದಕತೆ ಹೆಚ್ಚಿಸಲು ‘ಪ್ರಧಾನ ಮಂತ್ರಿ ಧಾನ್ಯ-ಧಾನ್ಯ ಕೃಷಿ ಯೋಜನೆ’ ಜಾರಿಗೊಳಿಸಲಾಗುತ್ತಿದೆ.
* ಒಟ್ಟು ವಲಯದ ಹಂಚಿಕೆ: ರೂ.1,62,671 ಕೋಟಿ
* ರಸಗೊಬ್ಬರ ಸಹಾಯಧನ:ರೂ.1.71 ಲಕ್ಷ ಕೋಟಿ
* ಪಿಎಂ ಕಿಸಾನ್: 60,000 ಕೋಟಿಗಿಂತ ಅಧಿಕ
* ಕೃಷಿ ಮೂಲಸೌಕರ್ಯ ಮತ್ತು ಸಂಶೋಧನೆ: ಗಮನಾರ್ಹ ಏರಿಕೆ
ಒಟ್ಟಾರೆಯಾಗಿ, 2026ರ ಬಜೆಟ್ ಕೃಷಿಯಲ್ಲಿ ಆಧುನಿಕತೆ ಮತ್ತು ಸಾಮಾನ್ಯ ಜೀವನದಲ್ಲಿ ಸ್ಥಿರತೆಯನ್ನು ತರುವ ಪ್ರಯತ್ನ ಮಾಡಿದೆ. ರೈತರಿಗೆ ತಂತ್ರಜ್ಞಾನದ ಸಾಥ್ ಸಿಕ್ಕರೆ, ಮಧ್ಯಮ ವರ್ಗದವರಿಗೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಿಂದ ತುಸು ನಿರಾಳತೆ ಸಿಕ್ಕಿದೆ. ಈ ಯೋಜನೆಗಳು ಹಂತ-ಹಂತವಾಗಿ ಜಾರಿಗೆ ಬಂದಾಗ ದೇಶದ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಬಹುದು.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Central Budget:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





