Ashadeepa Yojane:ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ/ಪಂಗಡದ ಯುವಕರಿಗೆ ಖಾಸಗಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸಲು ‘ಆಶಾದೀಪ’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಉದ್ಯೋಗ ನೀಡುವ ಖಾಸಗಿ ಸಂಸ್ಥೆಗಳಿಗೆ ಇಎಸ್ಐ, ಇಪಿಎಫ್ ಮರುಪಾವತಿ ಹಾಗೂ ಅಪ್ರೆಂಟಿಸ್‌ಶಿಪ್‌ಗೆ ವೇತನ ಸಹಾಯಧನ ಲಭಿಸಲಿದೆ. ಇದು ಹಿಂದುಳಿದ ವರ್ಗದವರ ಆರ್ಥಿಕ ಮತ್ತು ಉದ್ಯೋಗ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ “ಆಶಾದೀಪ” ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಉದ್ಯೋಗದಾತರಿಗೆ ಆರ್ಥಿಕ ಪ್ರೋತ್ಸಾಹ ನೀಡುವ ಮೂಲಕ ಅಭ್ಯರ್ಥಿಗಳ ನೇಮಕಾತಿಯನ್ನು ಉತ್ತೇಜಿಸುತ್ತದೆ. ಈ ಯೋಜನೆಯಡಿ ಪಾವತಿಸಿದ ಇಎಸ್ಐ ಮತ್ತು ಇಪಿಎಫ್ ವಂತಿಕೆಯನ್ನು ಸರ್ಕಾರವೇ ಪಾವತಿ ಮಾಡಲಿದೆ. ಜೊತೆಗೆ ಅಪ್ರಂಟೈಸ್ ಶಿಪ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಶಿಷ್ಯವೇತನವನ್ನು ಮರುಪಾವತಿ ಮಾಡುವ ಎರಡು ಪ್ರಮುಖ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಆರ್ಥಿಕವಾಗಿ ಹಿಂದುಳಿದಿರುವ ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ಮೂಲಕ ಅವರ ಸಾಮಾಜಿಕ ಗೌರವ ಮತ್ತು ಆರ್ಥಿಕ ಜೀವನಮಟ್ಟವನ್ನು ಉತ್ತಮಪಡಿಸಲು ಸರ್ಕಾರ ಶ್ರಮಿಸುತ್ತಿದೆ.
ಸೌಲಭ್ಯಗಳು:
* ESI ಮತ್ತು EPF ಮರುಪಾವತಿ: ಖಾಸಗಿ ಸಂಸ್ಥೆಗಳು ಹೊಸದಾಗಿ ನೇಮಕ ಮಾಡಿಕೊಳ್ಳುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳ ಪರವಾಗಿ ಪಾವತಿಸುವ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆಯನ್ನು ಪ್ರತಿ ನೌಕರನಿಗೆ ಮಾಸಿಕ ಗರಿಷ್ಠ 3,000 ರೂ.ಗಳ ಮಿತಿಯೊಳಗೆ 2 ವರ್ಷಗಳ ಅವಧಿಗೆ ಸರ್ಕಾರವು ಮರುಪಾವತಿಸುತ್ತದೆ.
* ಅಪ್ರೆಂಟಿಸ್ ಶಿಷ್ಯವೇತನ: ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಮಾಲೀಕರು ನೀಡುವ ಮಾಸಿಕ ಶಿಷ್ಯವೇತನದಲ್ಲಿ 2/3 ರಷ್ಟು ಮೊತ್ತವನ್ನು (ತಿಂಗಳಿಗೆ ಗರಿಷ್ಠ 5,000 ರೂ. ವರೆಗೆ), ಅವರು ಪಡೆಯುವ ತರಬೇತಿಯ ಅವಧಿಗೆ ಅನುಗುಣವಾಗಿ 1 ಅಥವಾ 2 ವರ್ಷಗಳವರೆಗೆ ಮರುಪಾವತಿ ಮಾಡಲಾಗುತ್ತದೆ.
* ಅಪ್ರೆಂಟಿಸ್ ನಂತರ ಖಾಯಂ ನೇಮಕಾತಿ: ಅಪ್ರೆಂಟಿಸ್ ತರಬೇತಿ ಪೂರೈಸಿದ ಅಭ್ಯರ್ಥಿಗಳನ್ನು ಅದೇ ಸಂಸ್ಥೆಯಲ್ಲಿ ಖಾಯಂ ಆಗಿ ನೇಮಿಸಿಕೊಂಡರೆ, ಅಂತಹ ನೌಕರರಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನದ 50% ರಷ್ಟು ಮೊತ್ತವನ್ನು 2 ವರ್ಷಗಳ ಅವಧಿಗೆ ಉದ್ಯೋಗದಾತರಿಗೆ ನೀಡಲಾಗುತ್ತದೆ.
* ನೇರ ಹೊಸ ನೇಮಕಾತಿ: ದಿನಾಂಕ 12 ಜೂನ್ 2024 ರ ನಂತರ ಖಾಸಗಿ ಸಂಸ್ಥೆಗಳಲ್ಲಿ ನೇರವಾಗಿ ಹೊಸದಾಗಿ ನೇಮಕಗೊಳ್ಳುವ ಎಸ್‌ಸಿ/ಎಸ್‌ಟಿ ಉದ್ಯೋಗಿಗಳಿಗೆ ಮಾಲೀಕರು ಪಾವತಿಸುವ ವೇತನದ ಮೇಲೆ, ಮಾಸಿಕ ಗರಿಷ್ಠ 6,000 ರೂ. ವರೆಗಿನ ಮೊತ್ತವನ್ನು 2 ವರ್ಷಗಳ ಅವಧಿಗೆ ಸರ್ಕಾರ ಮರುಪಾವತಿಸುತ್ತದೆ.
ಅಗತ್ಯ ದಾಖಲೆಗಳು:
* ಸಂಸ್ಥೆ ಮತ್ತು ಅಭ್ಯರ್ಥಿಯಿಂದ ಭರ್ತಿ ಮಾಡಿದ ನಿಗದಿತ ನಮೂನೆ.
* ಅಭ್ಯರ್ಥಿಯ ಆಧಾರ್ ಕಾರ್ಡ್
* ಸಕ್ಷಮ ಪ್ರಾಧಿಕಾರದಿಂದ ನೀಡಿದ ಎಸ್‌ಸಿ/ಎಸ್‌ಟಿ ಪ್ರಮಾಣ ಪತ್ರ.
* ಖಾಸಗಿ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ.
* ಶಿಷ್ಯವೇತನ ಪಾವತಿ ಚೀಟಿ
* ಅಭ್ಯರ್ಥಿಯ ಅಪ್ರೆಂಟಿಸ್ ಒಪ್ಪಂದದ ಪ್ರಮಾಣ ಪತ್ರ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Ashadeepa Yojane:)





