Birth week: ನೀವು ಹುಟ್ಟಿದ ವಾರದಲ್ಲಿ ಅಡಗಿದೆ ನಿಮ್ಮ ನಿಗೂಢ ವ್ಯಕ್ತಿತ್ವ

Birth week:ಸಾಮಾನ್ಯವಾಗಿ ನಾವು ಹುಟ್ಟಿದ ದಿನವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರಂತೆ ನಾವು ಯಾವ ನಕ್ಷತ್ರ, ರಾಶಿ, ಗೋತ್ರದಲ್ಲಿ ಜನಿಸಿದ್ದೇವೆ ಎಂಬುದು ನಮ್ಮ ಭವಿಷ್ಯವು ನಿರ್ಧಾರವಾಗುತ್ತದೆ. ಆದರೆ ಒಬ್ಬ ವ್ಯಕ್ತಿಯ ಹುಟ್ಟಿದ ವಾರ (Birth week) ಯಾವುದು? ಎನ್ನುವ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬಹುದು ಹಾಗಾದರೆ ಯಾವ ವಾರ ಹುಟ್ಟಿದರೆ ಏನು ಅರ್ಥ (Birth week) ಎಂದು ತಿಳಿಯೋಣ.


ಇದನ್ನೂ ಓದಿ: ಅಡುಗೆಗೆ ಬಳಸುವ ಮೆಣಸಿನ ಪುಡಿ ಅಸಲಿನ? ನಕಲಿನ? ಜಸ್ಟ್‌ ಹೀಗೆ ಪತ್ತೆ ಹಚ್ಚಿ..


ಸೋಮವಾರ:
ಯಾರು ಸೋಮವಾರದಂದು ಹುಟ್ಟಿರುತ್ತಾರೆಯೋ, ಆ ವ್ಯಕ್ತಿಗಳು ತಮ್ಮನ್ನು ತಾವೇ ಪ್ರಶಂಸಿಕೊಳ್ಳುತ್ತಾರೆ. ಉಳಿದವರನ್ನು ದ್ವೇಷಿಸುವ ಗುಣವನ್ನು ಹೊಂದಿರುತ್ತಾರೆ.ಸೋಮವಾರ ಜನಿಸಿದವರಲ್ಲಿ ಕಾಳಜಿ ವಹಿಸುವ ಗುಣ ಹೆಚ್ಚು ಇರಲಿದೆ. ಬೇರೆಯವರ ಅಭಿಪ್ರಾಯಗಳಿಗೆ ಹೆಚ್ಚು ಮನ್ನಣೆ ನೀಡದೇ ತಾವು ಹೇಳುವುದು ಹಾಗೂ ಮಾಡುವುದೇ ಸರಿ ಎನ್ನುವಂತೆ ನಡೆದುಕೊಳ್ಳುತ್ತಾರೆ. ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ರಹಸ್ಯಮಯ ವಿಷಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಯಶಸ್ಸಿಗಾಗಿ ಶ್ರಮಿಸುತ್ತಾರೆ, ಹಾಗೂ ಈ ವ್ಯಕ್ತಿಗಳಲ್ಲಿ ನಾಯಕತ್ವದ ಗುಣ ಹೆಚ್ಚಿರುತ್ತದೆ. ಆದರೆ ಕೆಲವರು ಅತ್ಯಂತ ಪ್ರೇಮಮಯಿ ಹಾಗೂ ಕರುಣಾಮಯಿಗಳಾಗಿರುತ್ತಾರೆ.

ಮಂಗಳವಾರ:
ಈ ದಿನ ಹುಟ್ಟಿದವರಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕಾತುರ ಹೆಚ್ಚಿರುತ್ತದೆ. ಕುತೂಹಲಕಾರಿ ವ್ಯಕ್ತಿಗಳಾಗಿದ್ದು, ಯಾವುದೇ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವ ಮೂಲಕ ಗಂಭೀರವಾಗಿ ಯೋಚಿಸುತ್ತಾರೆ. ತಮ್ಮ ಕೆಲಸ ಸಾಧಿಸಿಕೊಳ್ಳಲು ಸಮಯವನ್ನು ಪೂರ್ಣವಾಗಿ ವಿನಿಯೋಗಿಸುತ್ತಾರೆ. ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಎಷ್ಟೇ ಒತ್ತಡವಿದ್ದರೂ ಎಲ್ಲಾ ಕೆಲಸ ಸುಲಭವಾಗಿ ಮಾಡಿ ಮುಗಿಸುವ ಸಾಮರ್ಥ್ಯ ಈ ವ್ಯಕ್ತಿಗಳಲ್ಲಿರುತ್ತದೆ.


ಇದನ್ನೂ ಓದಿ: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಉದ್ಯೋಗವಕಾಶ 4000 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ


ಬುಧವಾರ:
ಬುಧವಾರ ಹುಟ್ಟಿದವರಲ್ಲಿ ತಮ್ಮ ಕೆಲಸವನ್ನು ಇಷ್ಟ ಪಟ್ಟು ಮಾಡುತ್ತಾರೆ. ತಾವು ಕೆಲಸ ಮಾಡುವುದಕ್ಕಿಂತ ಇತರರನ್ನು ಕೆಲಸ ಮಾಡಿಸುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ. ಎಲ್ಲಾ ಕೆಲಸ ಮಾಡಿ ಮುಗಿಸಲು ಸ್ನೇಹಿತರ ಸಹಾಯ ಬಯಸುತ್ತಾರೆ. ಸ್ನೇಹಪರರು ಆಗಿದ್ದು ಎಲ್ಲ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ.

ಗುರುವಾರ:
ಈ ದಿನ ಹುಟ್ಟಿದ ಜನರು ಸಾಮಾನ್ಯವಾಗಿ ಇತರರಿಂದ ಪ್ರಶಂಸೆ ಪಡೆಯುವವರಾಗಿರುತ್ತಾರೆ. ಆಕರ್ಷಕ ವ್ಯಕ್ತಿತ್ವದೊಂದಿಗೆ ಎಲ್ಲರನ್ನು ತಮ್ಮತ್ತ ಸೆಳೆಯುತ್ತಾರೆ. ಆಶಾವಾದಿಗಳಾಗಿದ್ದು, ಒಬ್ಬರೇ ಕೆಲಸ ಮಾಡಲು ಬಯಸುತ್ತಾರೆ. ಈ ಜನರಲ್ಲಿ ನಾಯಕತ್ವ ಗುಣವು ಹೆಚ್ಚಿರುತ್ತದೆ. ತನ್ನ ಸುತ್ತಮುತ್ತಲಿನವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವುದರ ಜೊತೆಗೆ ಎಲ್ಲರನ್ನು ಗೌರವದಿಂದ ಕಾಣುತ್ತಾರೆ.


ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ! ಈ ವಿಮೆ ಕಡ್ಡಾಯ..


ಶುಕ್ರವಾರ:
ಈ ದಿನ ಹುಟ್ಟಿದವರು ಕ್ರಿಯಾತ್ಮಕರಾಗಿದ್ದು, ಬುದ್ಧಿವಂತ ಜನರೆಂದು ಗುರುತಿಸಿಕೊಳ್ಳುತ್ತಾರೆ. ಸ್ನೇಹ ಬಳಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಎಲ್ಲರಿಗೂ ಬೇಕಾದ ವ್ಯಕ್ತಿ ಎಂದರೂ ತಪ್ಪಿಲ್ಲ. ಜೀವನದ ಪ್ರಮುಖ ಘಟ್ಟಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸನ್ನಿವೇಶಕ್ಕೆ ಅನುಗುಣವಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಗುಣ ಇವರಿಗೆ ಜನ್ಮದತ್ತವಾಗಿ ಬಂದಿರುತ್ತದೆ.

ಶನಿವಾರ:
ಈ ದಿನ ಹುಟ್ಟಿದವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ಕೆಲವೊಮ್ಮೆ ಸಂದರ್ಭದಲ್ಲಿ ಈ ವ್ಯಕ್ತಿಗಳು ಚಿಕ್ಕಪುಟ್ಟ ಸೋಲುಗಳಿಗೂ ತೀರಾ ಹತಾಶೆ ವ್ಯಕ್ತಪಡಿಸುತ್ತಾರೆ. ಆದರೆ ಎಲ್ಲವನ್ನು ಸುಲಭವಾಗಿ ಜಯಿಸುವ ಗುಣ ಹೊಂದಿರುತ್ತಾರೆ. ಆದರೆ ಈ ವ್ಯಕ್ತಿಗಳು ಹೊಸ ವಿಚಾರಗಳಿಗೆ ಋಣಾತ್ಮಕ ಸಲಹೆಗಳನ್ನೇ ನೀಡುವ ಸಂಭವವೇ ಹೆಚ್ಚು. ಅದಲ್ಲದೇ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ.


ಇದನ್ನೂ ಓದಿ: ಪೊಸ್ಟ್‌ ಆಫೀಸ್‌ ನಲ್ಲಿ 10,000 ಹೂಡಿಕೆ ಮಾಡಿ 20,000 ಪಡೆಯಿರಿ ಯಾವ ಯೋಜನೆ?


ಭಾನುವಾರ:
ಈ ದಿನ ಹುಟ್ಟಿದ ವ್ಯಕ್ತಿಗಳು ಅತಿ ಆಶಾವಾದಿಗಳಾಗಿದ್ದು, ಇವರ ಭಾವನೆಗಳು ತಟಸ್ಥವಾಗಿರುವುದಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಭಿನ್ನ ಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸದಾ ನಗುಮುಖ ಹೊಂದಿದ್ದು, ಎಲ್ಲರನ್ನು ನಗಿಸುವ ಸ್ವಭಾವ ಹೊಂದಿರುತ್ತಾರೆ. ಎಲ್ಲರೊಂದಿಗೆ ಬೆರೆಯುವುದಕ್ಕಿಂತ ಏಕಾಂತವಾಗಿರುವುದೆಂದರೆ ಈ ವ್ಯಕ್ತಿಗಳಿಗೆ ಇಷ್ಟ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಎಲ್ಲವನ್ನು ಮಾಡಿ ಮುಗಿಸುವ ಸಾಮರ್ಥ್ಯ ಹೊಂದಿರುತ್ತಾರೆ.

Birth week: ನೀವು ಹುಟ್ಟಿದ ವಾರದಲ್ಲಿ ಅಡಗಿದೆ ನಿಮ್ಮ ನಿಗೂಢ ವ್ಯಕ್ತಿತ್ವ
Birth week: ನೀವು ಹುಟ್ಟಿದ ವಾರದಲ್ಲಿ ಅಡಗಿದೆ ನಿಮ್ಮ ನಿಗೂಢ ವ್ಯಕ್ತಿತ್ವ

ಇದನ್ನೂ ಓದಿ: ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ 3 ಲಕ್ಷ ರೂ ಸಾಲ 50ರಷ್ಟು ಸಬ್ಸಿಡಿ.!


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ