Bigg boss:ಬಿಗ್ ಬಾಸ್‌ ಶೋಗೆ ಎದುರಾಯ್ತು ಮತ್ತೊಂದು ಸಂಕಷ್ಟ

(Bigg boss:) ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ಶೋವನ್ನು ಸೀಸನ್ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಕೆ ಎಲ್ ಭೋಜರಾಜ್ ಅವರು ವ್ಯವಹಾರ ಪ್ರಕ್ರಿಯಾ ಸಂಹಿತೆ ಆದೇಶ 39 ನಿಯಮ 1 ಮತ್ತು 2 ರೆಡ್ ವಿತ್ ಸೆಕ್ಷನ್ 151ರ ಪ್ರಕಾರ ಅರ್ಜಿ ಸಲ್ಲಿಕೆ ಮಾಡಿದ್ದು, ನ್ಯಾಯಾಧೀಶರಾದ ಚಾಂದಿನಿ ಜಿ ಯು ಅವರು ಅರ್ಜಿ ಕೈಗೆತ್ತಿಕೊಂಡಿದ್ದಾರೆ. ಸಿವಿಲ್ ಕಾರ್ಯವಿಧಾನದ ಕೋಡ್ ಕಾಯಿದೆ U/sec.26,order7,rule1 ಅಡಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರು ಮತ್ತು ಸಂಪಾದಕರಿಗೆ ತುರ್ತು ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ಸಂಬಂಧ ಅ.28 ರಂದು ಅರ್ಜಿ ವಿಚಾರಣೆ ನಡೆಯಲಿದೆಯಂತೆ.


ಇದನ್ನೂ ಓದಿ; ಆಧಾರ್ ಕಾರ್ಡ್ ಕುರಿತು ಮುಖ್ಯ ಮಾಹಿತಿ; ಆಧಾರ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ


ಅಸಲಿಗೆ ಈ ಶೋ ಆರಂಭವಾದ ಕೆಲವೇ ದಿನಗಳಲ್ಲಿ ವಕೀಲ ಕೆ ಎಲ್ ಭೋಜರಾಜ್ ಅವರು ಎಚ್ಚರಿಕೆಯನ್ನು ನೀಡಿದ್ದರು. ಸಾಗರದಲ್ಲಿ ಅಕ್ಟೋಬರ್ 4ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಈ ಶೋನಲ್ಲಿ 17 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅದರಲ್ಲಿ ಚೈತ್ರಾ ಕುಂದಾಪುರದ ಕೂಡ ಒಬ್ಬರು. ಅವರ ವಿರುದ್ಧ ವಿವಿಧ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈವರೆಗೂ 11 ಕೇಸ್‌ಗಳು ದಾಖಲಾಗಿದ್ದು, ಇಂತಹ ಚೈತ್ರಾ ಕುಂದಾಪುರ ಬಿಗ್ ಬಾಸ್ ಶೋ ಬಂದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದರು.


ಇದನ್ನೂ ಓದಿ; SBI ಯಿಂದ ವಿದ್ಯಾರ್ಥಿವೇತನ; 6 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ


ಕಲರ್ಸ್ ಕನ್ನಡ ವಾಹಿನಿಯ ತಂಡವು ತಕ್ಷಣವೇ ಚೈತ್ರಾ ಕುಂದಾಪುರ ಅವರನ್ನು ಶೋನಿಂದ ಹೊರಗೆ ಕಳುಹಿಸಬೇಕು. ಈ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿದೆ. ಇನ್ನು 2-3 ದಿನಗಳಲ್ಲಿ ನಮ್ಮ ನೋಟಿಸ್‌ಗೆ ಉತ್ತರ ನೀಡದೇ ಇದ್ದಲ್ಲಿ ಹೈಕೋರ್ಟ್ ಮತ್ತು ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಬಿಗ್ ಬಾಸ್ ಕನ್ನಡ ಸೀಸನ್ 11 ಶೋವನ್ನು ಸ್ಥಗಿತ ಮಾಡಿಸಲಾಗುವುದು ಎಂದು ಕೆ ಎಲ್ ಭೋಜರಾಜ್ ಎಚ್ಚರಿಕೆ ನೀಡಿದ್ದರು.


ಇದನ್ನೂ ಓದಿ; ಬೋರ್ವೆಲ್ ಕೊರೆಸಲು ಸಿಗುತ್ತೆ ಸಹಾಯಧನ; ಈ ರೀತಿ ಅರ್ಜಿ ಸಲ್ಲಿಸಿ


ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ ಎಲ್ ಭೋಜರಾಜ್, ಬಿಗ್ ಬಾಸ್ ಶೋಗೆ ಚೈತ್ರಾ ಕುಂದಾಪುರ ಅವರನ್ನು ಹಿಂದೂ ಫೈರ್ ಬ್ರ್ಯಾಂಡ್ ಎಂದು ಸ್ವಾಗತ ಕೋರಿದ್ದಾರೆ. ಇವರು ಶೋಗೆ ಬರುವಾಗ, ನಾನು ಕಳೆದ ವರ್ಷ ಈ ಶೋವನ್ನು ಜೈಲಿನಲ್ಲಿ ನೋಡಿದ್ದೆ ಎನ್ನುತ್ತಾರೆ. ಇದನ್ನು ಕೇಳಿಯೇ ನನಗೆ ಆಘಾತವಾಯಿತು. ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು 5 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪ ಇವರ ಮೇಲಿದೆ. 3.75 ಕೋಟಿ ರೂ. ಹಣ ರಿಕವರಿ ಆಗಿದೆ. ಚಾರ್ಜ್‌ಶೀಟ್ ಕೂಡ ಫೈಲ್ ಆಗಿದೆ. ಅದರೆ ಇಂಥವರನ್ನು ಶೋಗೆ ಕರೆತಂದಿದ್ದಾರೆ. ಇದರಿಂದ ಸಮಾಜಕ್ಕೆ ಏನು ಸಂದೇಶ ಹೋಗಲಿದೆ? ಈ ಶೋವನ್ನು ಎಲ್ಲಾ ವಯೋಮಾನದವರು ನೋಡುತ್ತಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ; ಬಿಗ್​ ಬಾಸ್ ಕನ್ನಡ ಶೋಗೆ ಸಂಕಷ್ಟ; ಕೋರ್ಟ್ ನಿಂದ ತುರ್ತು ನೋಟಿಸ್ ಜಾರಿ​; ಬಂದ್ ಆಗುತ್ತಾ ರಿಯಾಲಿಟಿ ಶೋ…?


(Bigg boss:) ನಾನು ನೋಟಿಸ್ ನೀಡಿ 10 ದಿನದ ಮೇಲಾಗಿದೆ. ಆದರೂ ಅವರನ್ನು ಶೋನಿಂದ ಹೊರಗೆ ಹಾಕಿಲ್ಲ. ಚೈತ್ರಾ ಕುಂದಾಪುರ ಅವರೇ ನನ್ನ ಮೇಲೆ 50 ಕೇಸ್ ಇದೆ, 100 ಕೇಸ್ ಇದೆ, ನನ್ನ ಯಾರು ಕೇಳೋರು ಅಂತ ಹೇಳ್ತಾರೆ. ಇದು ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಹಾಗಾಗಿ, ನಾನು ನ್ಯಾಯಾಲಯದಲ್ಲಿ ಕೇಸ್ ದಾಖಲು ಮಾಡಿದ್ದೇನೆ ಎಂದು ಕೆ ಎಲ್ ಭೋಜರಾಜ್ ತಿಳಿಸಿದ್ದಾರೆ.

Bigg boss:ಬಿಗ್ ಬಾಸ್‌ ಶೋಗೆ ಎದುರಾಯ್ತು ಮತ್ತೊಂದು ಸಂಕಷ್ಟ
Bigg boss:ಬಿಗ್ ಬಾಸ್‌ ಶೋಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
    16. ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!