Bamboo Shoots: ಮಲೆನಾಡು ಮಂದಿಗೆ ಕಳಲೆ ಅಂದ್ರೆನೆ ಅಚ್ಚುಮೆಚ್ಚು

(Bamboo Shoots) ನೀವೇನಾದ್ರೂ ಮಲೆನಾಡ ಮಂದಿಯ ಬಳಿ ಹೋಗಿ ನಿಮ್ಮ ಮಲ್ನಾಡಲ್ಲಿ ಏನು ಫೇಮಸ್ ಅಂತ ಕೇಳಿದ್ರೆ ಅವರು ಹೇಳುವ ಹಲವಾರು ವಿಶೇಷ ಹಣ್ಣು, ತರಕಾರಿಗಳ ಜೊತೆಗೆ ‘ಕಳಲೆ’ ಅಂತೂ ಇದ್ದೇ ಇರುತ್ತದೆ. ಅಷ್ಟೊಂದು ಫೇಮಸ್ ಈ ಕಳಲೆ. ಮಳೆಗಾಲದಲ್ಲಿ ಅಂತೂ ಮಲೆನಾಡಿಗರು ಮಿಸ್ ಮಾಡದೆ ಸೇವಿಸುವ ಒಂದು ಪದಾರ್ಥ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 6000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಈಗಂತೂ ಮಳೆಗಾಲ ಪ್ರಾರಂಭವಾಗಿದೆ. ಹೊರಗಡೆ ಜೋರಾಗಿ ಮಳೆ ಸುರಿಯುತ್ತಿದ್ದರೆ ಮನೆ ಒಳಗೆ ಕುಳಿತು ಬಿಸಿ ಬಿಸಿಯಾಗಿ ಏನಾದರೂ ಸವಿಯೋಣ ಅನಿಸುವುದು ಮನೆಯ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಕೂಡ ಅದರಲ್ಲಿಯೂ ಮಳೆಗಾಲದಲ್ಲಿ ಸ್ವಲ್ಪ ಹಸಿವು ಜಾಸ್ತಿಯೇ ಬಿಡಿ. ಇಂತಹ ಸಮಯದಲ್ಲಿ ನೀವು ಕಳಲೆಯ ಖಾದ್ಯವನ್ನು ತಯಾರಿಸಿ ಮನೆ ಮಂದಿಗೆ ಗುಣ ಬಡಿಸಿದರೆ ನಿಮಗೆ ಹೆಚ್ಚಿನ ಹೊಗಳಿಕೆಯೇ ಸಿಗುತ್ತದೆ.

ಹೌದು ಕಳಲೆ ಅಂದ್ರೆ ಏನು ಗೊತ್ತಾ?:
ಕಡಲೆ ಬೆಳೆಯುವುದು ಬಿದಿರಿನ ಮೊಗ್ಗಾಗಿ. ಇದು ಮಳೆಗಾಲದ ಆರಂಭದಲ್ಲಿ ಕಾಡುಗಳಲ್ಲಿ ಹೇರಳವಾಗಿ ಬೆಳೆದಿರುವ ಬಿದಿರುಗಳ ನಡುವೆ ಸಿಗುವುದೇ ಈ ಕಳಲೆ!. ಇದನ್ನು ಬೆಳಗಿನ ಜಾವದಲ್ಲಿಯೇ ಕಡಿದು ತರೋಣ ಎಂದು ಕಾಡಿಗೆ ಹೊರಟರೆ ಅಲ್ಲಿ ಹಳ್ಳಿಯ ಜನರ ದೊಡ್ಡ ಹಿಂಡೇ ಕಾಣಿಸುತ್ತದೆ.


ಇದನ್ನೂ ಓದಿ: ಪಿಯುಸಿ-ಐಟಿಐ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಸಿಂಪಲ್ ಆಗಿ ಅರ್ಜಿ ಸಲ್ಲಿಸಿ


(Bamboo Shoots) ಕಳಲೆಯಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಬಹುದು:
ಹೆಚ್ಚಾಗಿ ಇದರಿಂದ ಪಲ್ಯ ಹಾಗೂ ಸಾಂಬಾರ್ ಅನ್ನು ತಯಾರಿಸುತ್ತಾರೆ. ಇನ್ನು ಕೆಲವು ಜನರು ಕಳಲೆಯ ಉಪ್ಪಿನಕಾಯಿಯನ್ನು ಕೂಡ ಹಾಕಿ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇದು ಮಳೆಗಾಲ ಮುಗಿಯುವವರೆಗೂ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಕಳಲೆಯನ್ನು ಬೇರೆ ತರಕಾರಿ ಖಾದ್ಯ ತಯಾರಿಸುವಂತೆ ಸುಲಭವಾಗಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ಕತ್ತರಿಸುವುದು ಇದರ ಖಾದ್ಯ ತಯಾರಿಸುವುದು ಮಲೆನಾಡ ಮಂದಿಗೆ ಹಾಗೂ ಉತ್ತರ ಕರ್ನಾಟಕದ ಮಂದಿಗೆ ಒಂದು ರೀತಿಯ ವಿಶೇಷವೇ ಸರಿ. ಮನೆಯಲ್ಲಿ ಕಳಲೆಯ ಪಲ್ಯ ಮಾಡಿದ್ದಾರೆ ಎಂದರೆ ಮನೆ ಮಂದಿ ಆ ದಿನ ಒಂದು ತುತ್ತು ಹೆಚ್ಚಿಗೇ ತಿನ್ನುತ್ತಾರೆ.


ಇದನ್ನೂ ಓದಿ: SSLC & PUCಯಲ್ಲಿ 65% ಪಡೆದಿದ್ದರೆ ₹30,000 ಸ್ಕಾಲರ್ಶಿಪ್; ಆದರೆ ಈ ಷರತ್ತು ಅನ್ವಯ.!


ತುದಿಗೆ ಸ್ವಲ್ಪ ಮನಚಾರಿಸಿ ಬುಡದಲ್ಲಿ ವೃತ್ತಾಕಾರದಲ್ಲಿರುವ ಎಲೆ ಬಿದಿರಿನ ಒಂದು ಸಣ್ಣ ಗುಂಡಿ ಒಳಗೆ ದುಂಡಗೆ ಇರುವ ಉದ್ದನೆಯ ಈ ಕಳಲೆಯ ಮುಂದಿನ ಭಾಗ ಮಾತ್ರವೇ ತಿನ್ನಲು ಉಪಯುಕ್ತ. ಅದರಲ್ಲಿಯೂ ಆ ಭಾಗ ಎಳೆಯದಾಗಿದ್ದರೆ ಆ ಕಳಲೆ ರುಚಿ ಹೆಚ್ಚು. ಹೀಗೆ ಕತ್ತರಿಸಿದ ಮೇಲೆ ನೀರಿನಲ್ಲಿ ಹಾಕಿ ಮೂರರಿಂದ ನಾಲ್ಕು ದಿನಗಳ ಕಾಲ ನೆನೆಸಿಡುತ್ತಾರೆ. ಅಷ್ಟಾದರೂ 8-10 ಬಾರಿ ಬೇಯಿಸುತ್ತಾರೆ. ಆಗ ಮಾತ್ರವೇ ಕಳಲೆಯ ನಿಜವಾದ ಸ್ವಾದ ಸಿಗುವುದು. ಇಲ್ಲವಾದರೆ ಇದು ಸ್ವಲ್ಪ ಕಹಿ ರುಚಿ ನೀಡುತ್ತದೆ. ನೀವು ಮಾಂಸಹಾರಿಗಳಾಗಿದ್ದರೆ ತಯಾರಿಸುವ ಚಿಕನ್ ಐಟಂಗಳಲ್ಲಿ ಇದನ್ನು ಉಪಯೋಗಿಸಬಹುದು. ಇಲ್ಲವಾದರೆ ಅಚ್ಚುಕಟ್ಟಾಗಿ ಬಟಾಣಿ ಅಥವಾ ಕಡಲೆ ಕಾಳುಗಳನ್ನು ಹಾಕಿ ಸಾಂಬಾರು ಮಾಡಿಕೊಂಡು ಸವಿಯಬಹುದು. ಇದು ರುಚಿಕರ ಮಾತ್ರವಲ್ಲ ಔಷಧೀಯ ಗುಣವು ಇದರಲ್ಲಿದೆ. ಅದಕ್ಕಾಗಿಯೇ ಎಷ್ಟು ಕಷ್ಟವಾದರೂ ಸರಿಯೇ ಎಂದು ಮಳೆಯ ನಡುವೆಯೂ ಹೋಗಿ ಕಳಲೆಯನ್ನು ತಂದು ವರುಷಕ್ಕೆ ಒಮ್ಮೆಯಾದರೂ ಸೇವನೆ ಮಾಡುತ್ತಾರೆ.


ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಸಿಗಲಿದೆ 50,000 ವರೆಗೆ ಸ್ಕಾಲರ್ ಶಿಪ್;ಈ ರೀತಿ ಅರ್ಜಿ ಸಲ್ಲಿಸಿ


ನೀವೇನಾದರೂ ಈ ಮುಂಚೆ ಕಳಲೆಯನ್ನು ಸವಿದಿದ್ದರೆ ಈಗಾಗಲೇ ನಿಮ್ಮ ಬಾಯಲ್ಲಿ ನೀರೂರುತ್ತಿರಬಹುದು, ಆದರೆ ಈ ಮುಂಚೆ ನೀವು ಕಳಲೆಯನ್ನು ನೋಡಿಯೇ ಇಲ್ಲ ಎಂದಾದರೆ ಒಮ್ಮೆ ಇದರ ರುಚಿ ಸವಿಯಲೇ ಬೇಕು. ರುಚಿ ಬಿಡಿ, ಆ ಖಾದ್ಯದ ಪರಿಮಳವೇ ಎಲ್ಲರ ಹಸಿವು ಹೆಚ್ಚಾಗುವಂತೆ ಮಾಡುತ್ತೆ.

ಮಾರುಕಟ್ಟೆಯಲ್ಲಿ ಕಳಲೆಯ ಬೆಲೆ:
ಇದು ಮಲೆನಾಡಿನಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿಯೂ ಕಳಲೆ ಫೇಮಸ್ ಆಗಿದೆ. ಉತ್ತರ ಕನ್ನಡದ ಶಿರಸಿ ತಾಲೂಕಿನ ಬಿಡಕಬೈಲು ಎಂಬ ಊರಿನಲ್ಲಿ ಕಳಲೆ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಒಂದು ಕಳಲೆಯ ತುಂಡಿನ ಬೆಲೆ ಬರೋಬ್ಬರಿ ಐವತ್ತು ರೂಪಾಯಿ. ಇನ್ನೂ ನೂರು ರೂಪಾಯಿಗೆ ಎರಡು ಮೂರು ಚಿಕ್ಕ ಚಿಕ್ಕ ಕಳಲೆಯನ್ನು ಮಾರಾಟ ಮಾಡುತ್ತಾರೆ. ಬರೀ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಆನ್ಲೈನ್ ವೆಬ್ಸೈಟ್ಗಳಲ್ಲಿ ಕೂಡ ಕಳಲೆ ಮಾರಾಟಕ್ಕಿದೆ. ಬಿಗ್ ಬಾಸ್ಕೆಟ್ ನಲ್ಲಿ ಅಂತೂ ಒಂದು ಸಣ್ಣ ತುಂಡಿಗೆ 40 ರೂಪಾಯಿ ಇದೆ. ಸಾಧ್ಯವಾದರೆ ಒಮ್ಮೆ ಖರೀದಿಸಿ ಇದರ ರುಚಿ ನೋಡಿ.

ಕಳಲೆ ಆರೋಗ್ಯ ಪ್ರಯೋಜನಗಳು:
* ಕಳಲೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಂಕ್ರಾಮಿಕ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ರಕ್ಷಿಸುವ ಗುಣ ಕಳಲೆಯಲ್ಲಿದೆ.
* ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ದೇಹಕ್ಕೆ ಅಗತ್ಯವಿಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.
* ಕಳಲೆಯಲ್ಲಿ ಪೊಟ್ಯಾಸಿಯಮ್ ಮತ್ತು ರಂಜಕ ಹೇರಳವಾಗಿರುವುದರಿಂದ ಮೂಳೆಗಳನ್ನು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ
* ಸಿಲಿಕಾ ಅಂಶವನ್ನು ಹೊಂದಿರುವ ಕಳಲೆಯು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.
* ಕಳಲೆಯು ಉರಿನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

Bamboo Shoots: ಮಲೆನಾಡು ಮಂದಿಗೆ ಕಳಲೆ ಅಂದ್ರೆನೆ ಅಚ್ಚುಮೆಚ್ಚು
Bamboo Shoots: ಮಲೆನಾಡು ಮಂದಿಗೆ ಕಳಲೆ ಅಂದ್ರೆನೆ ಅಚ್ಚುಮೆಚ್ಚು

ಇದನ್ನೂ ಓದಿ: ಆಧಾರ್ ಕೌಶಲ್ಯದಿಂದ ಇಂತಹ ವಿದ್ಯಾರ್ಥಿಗಳಿಗೆ 10,000 ದಿಂದ ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    7. ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ
    8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆ | 25,000 ವರೆಗೂ ಸಂಬಳ
    9. ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!
    10. ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    11. ಆರು ವರ್ಷದ ಬಳಿಕ ಕಾಳುಮೆಣಸು ಬೆಲೆಯಲ್ಲಿ ಭಾರೀ ಏರಿಕೆ; 2018 ರ ದಾಖಲೆ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು
    12. ಮದ್ಯ ದರದಲ್ಲಿ ಭಾರೀ ಇಳಿಕೆ!;ಯಾವ ಬ್ರ್ಯಾಂಡ್ ಗೆ ಎಷ್ಟು ಕಡಿಮೆ..? ಸಂಪೂರ್ಣ ಮಾಹಿತಿ
    13. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ; ಹೆಸರು ಸೇರ್ಪಡೆಯ ಪಟ್ಟಿ ಬಿಡುಗಡೆ ಮಾಡಿದ ಆಹಾರ ಇಲಾಖೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಹೀಗೆ ಚೆಕ್ ಮಾಡಿ