Aghori Lifestyle: ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನದಲ್ಲಿ ಕುಂಭಮೇಳ ಕೂಡ ಒಂದಾಗಿದೆ. ಕೋಟ್ಯಂತರ ಮಂದಿ ಈ ಕುಂಭಮೇಳದಲ್ಲಿ ಭಾಗಿಯಾಗುತ್ತಾರೆ. ಹಾಗೆಯೇ ಈ ಕುಂಭಮೇಳ ಹಲವು ಕಾರಣಗಳಿಗೆ ಸುದ್ದಿಯಾಗುತ್ತದೆ. ಒಂದು ತ್ರಿವೇಣಿ ಸಂಗಮದಲ್ಲಿ ಸೇರುವಂತಹ ಜನರು ಮತ್ತು ದೂರ ದೂರದಿಂದ ಬರುವ ಅಘೋರಿಗಳು. ವರ್ಷದ ಬಹುತೇಕ ಎಲ್ಲಾ ದಿನದಲ್ಲೂ ಜನರ ಸಂಪರ್ಕದಿಂದ ದೂರವೇ ಉಳಿದಿರುವ ಈ ಅಘೋರಿಗಳು ಈ ಕುಂಭಮೇಳದ ಸಮಯದಲ್ಲಿ ಉತ್ತರ ಪ್ರದೇಶದ ಬೀದಿ ಬೀದಿಯಲ್ಲಿ ನೋಡಲು ಸಿಗುತ್ತಾರೆ.
144 ವರ್ಷಗಳ ನಂತರ ನಡೆಯುವ ಮಹಾ ಕುಂಭಮೇಳದಲ್ಲಿ ಅಪಾರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಅಘೋರಿಗಳು ಎಲ್ಲಿ ವಾಸವಿರುತ್ತಾರೆ ಅವರ ಜೀವನ ಶೈಲಿ ಹೇಗಿರುತ್ತದೆ. ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ತಮ್ಮ ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ ಆದ್ದರಿಂದ ಅಘೋರಿಗಳು ಮಹಾ ಕುಂಭಮೇಳದಲ್ಲಿ ಸ್ನಾನ ಮಾಡುತ್ತಾರೆ.
ಇದನ್ನೂ ಓದಿ: BOB:1267 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ ಅಪ್ಲೈಮಾಡಲು ಇಲ್ಲಿ ಕ್ಲಿಕ್ ಮಾಡಿ
ಹಾಗಾದರೆ ಅಘೋರಿಗಳೆಂದರೆ ಯಾರು..?
ಅಘೋರಿಗಳು ಹಿಂದೂ ಧರ್ಮದ ಒಂದು ಭಾಗವಾಗಿದ್ದಾರೆ. ಅದಕ್ಕಾಗಿಯೇ ಅವರನ್ನು ಅಘೋರಿ ಪಂಥ ಅಥವಾ ಅಘೋರ ಪಂತ ಎಂದು ಕರೆಯಲಾಗುತ್ತದೆ. ಅಘೋರ ಪಂಥದವರು ಶಿವನ ಅನುಯಾಯಿಗಳು. ಅವರ ಪ್ರಕಾರ, ಶಿವನು ತನ್ನಲ್ಲಿಯೇ ಸಂಪೂರ್ಣನಾಗಿದ್ದಾನೆ ಮತ್ತು ಎಲ್ಲಾ ರೂಪಗಳಲ್ಲಿ ಅಸ್ತಿತ್ವದಲ್ಲಿದ್ದಾನೆ ಎನ್ನುವ ನಂಬಿಕೆಯನ್ನಿಟ್ಟುಕೊಂಡಿರುತ್ತಾರೆ. ಅವರಿಗೆ ಪ್ರಪಂಚದ ಉಳಿದ ಭಾಗಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ಪ್ರಾಣಿಗಳಲ್ಲಿ ನಾಯಿಗಳನ್ನು ಮಾತ್ರ ಸಾಕುತ್ತಾರೆ. ಅಘೋರಿ ಸಾಧುಗಳು ಏಕಾಂತದಲ್ಲಿ ವಾಸಿಸುತ್ತಾರೆ ಮತ್ತು ಅವರು ಕುಂಬಮೇಳದಂತಹ ಮಾತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ.
ಶಿವನ ಐದು ರೂಪಗಳಲ್ಲಿ ‘ಅಘೋರ’ ಕೂಡ ಇದೆ. ಅಘೋರಿಗಳೂ ಶಿವನ ಆರಾಧಕರು ಮತ್ತು ಶಿವನ ಆರಾಧನೆಯಲ್ಲಿ ಮಗ್ನರಾಗಿರುತ್ತಾರೆ ಇದರೊಂದಿಗೆ ಮೃತದೇಹದ ಬಳಿ ಕುಳಿತು ತಪಸ್ಸು ಮಾಡುತ್ತಾರೆ. ಏಕೆಂದರೆ ಈ ಮೃತ ದೇಹವನ್ನು ಶಿವಪ್ರಾಪ್ತಿಗೆ ದಾರಿ ಎನ್ನುತ್ತಾರೆ. ಅವರು ತಮ್ಮ ಧ್ಯಾನದಲ್ಲಿ ಶಿವನಿಗೆ ಮೃತದೇಹದ ಮಾಂಸವನ್ನು ಅರ್ಪಿಸುತ್ತಾರೆ. ಒಂದೇ ಕಾಲಿನ ಮೇಲೆ ನಿಂತು, ಶಿವನನ್ನು ಪೂಜಿಸುತ್ತಾರೆ ಮತ್ತು ಸ್ಮಶಾನದಲ್ಲಿ ಕುಳಿತು ಹವನ ಮಾಡುತ್ತಾರೆ.

ಇದನ್ನೂ ಓದಿ:50,000 ರೂ ವರೆಗೆ ಸ್ಕಾಲರ್ಶಿಪ್ ಲಭ್ಯ, ಯಾರು ಅರ್ಹರು ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಓದಲು ಇಲ್ಲಿ ಕ್ಲಿಕ್ ಮಾಡಿ
ಅಘೋರಿಗಳು ಎಲ್ಲಿ ವಾಸಿಸುತ್ತಾರೆ:
ಅಘೋರಿಗಳು ದೇಶದೆಲ್ಲೆಡೆ ಇದ್ದಾರೆ. ಆದರೆ, ಕಾಶಿ ಮತ್ತು ವಾರಣಾಸಿಯಲ್ಲಿ ಗರಿಷ್ಠ ಸಂಖ್ಯೆಯ ಅಘೋರಿಗಳು ಕಂಡುಬರುತ್ತಾರೆ. ಇವರು ಸ್ಮಶಾನಗಳಲ್ಲಿ ವಾಸಿಸುತ್ತಾರೆ.
ಅಘೋರಿಗಳ ಆಹಾರ ಕ್ರಮ ಹೇಗಿರುತ್ತದೆ ಗೊತ್ತಾ?:
ಅಘೋರಿಗಳು ಅರ್ಧ ಸುಟ್ಟ ಮೃತ ದೇಹಗಳ ಮಾಂಸವನ್ನು ತಿನ್ನುತ್ತಾರೆ ಅವರು ಮೃತ ದೇಹಗಳೊಂದಿಗೆ ದೈಹಿಕ ಸಂಬಂಧದಲ್ಲಿ ತೊಡಗುತ್ತಾರೆ. ಇದನ್ನು ಅವರ ಸಾಧನದ ಭಾಗವೆಂದು ಪರಿಗಣಿಸಲಾಗುತ್ತದೆ. ಅಘೋರಿಗಳು ಯಾವಾಗಲೂ ತಲೆಬುರುಡೆಯನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಅದನ್ನು’ಕಾಪಾಲಿಕಾ’ ಎಂದು ಕರೆಯಲಾಗುತ್ತದೆ. ಅಘೋರಿಗಳು ತಲೆಬುರುಡೆಯನ್ನೇ ತಮ್ಮ ಆಹಾರದ ಪಾತ್ರೆಯಾಗಿ ಬಳಸುತ್ತಾರೆ.
ಇದನ್ನೂ ಓದಿ: ಮನೆ ನಿರ್ಮಾಣಕ್ಕೆ ಸಿಗಲಿದೆ 2.50 ಲಕ್ಷ! ಸಂಪೂರ್ಣ ಓದಲು ಕ್ಲಿಕ್ ಮಾಡಿ
ಅಘೋರಿಗಳು ತಲೆಬುರುಡೆಯಲ್ಲೇ ಯಾಕೆ ಆಹಾರ ಸೇವಿಸ್ತಾರೆ?:
ಒಂದು ದಂತಕಥೆಯ ಪ್ರಕಾರ ಶಿವ ಒಮ್ಮೆ ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದ. ಆ ತಲೆಯಿಂದಲೇ ಸಮಾಜ ಹೊರವಲಯದಲ್ಲಿ ಅಲೆಯಬೇಕಿತ್ತು. ಆದ್ದರಿಂದ ಅಘೋರಿಗಳು ಶಿವನನ್ನು ಅನುಕರಿಸಲು ಮಾನವ ತಲೆಬುರುಡೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ.
ಏಕೆಂದರೆ ಸತ್ತವರ ಜೀವ ಶಕ್ತಿಯು ಸಾವಿನ ನಂತರ ತಲೆಬುರುಡೆಯ ಮೇಲ್ಭಾಗದಲ್ಲಿ ನೆಲೆಸುತ್ತದೆ. ಆದರೂ ಅಘೋರಿಗಳು ಕೆಲವು ಮಂತ್ರಗಳು ಬಳಸುವುದರ ಮೂಲಕ ಅವರು ಸತ್ತವರ ಆತ್ಮವನ್ನು ಕರೆದು ಅದರ ಮೇಲೆ ನಿಯಂತ್ರಣವನ್ನು ಪಡೆಯಬಹುದು ಎಂದು ನಂಬಿದ್ದರು.
ಕೆಲವು ಮೃತದೇಹಗಳನ್ನು ಶವಸಂಸ್ಕಾರ ಮಾಡದೆ ವಿಲೇವಾರಿ ಮಾಡಲಾಗುತ್ತದೆ. ಅಘೋರಿಗಳು ಈ ಅವಶೇಷಗಳನ್ನು ಸಂಗ್ರಹಿಸುತ್ತಾರೆ ಎಂದು ಹೇಳಲಾಗುತ್ತದೆ. ಮಾನವ ಮಾಂಸವನ್ನು ತಿನ್ನುವುದರ ಜೊತೆಗೆ, ಅವರು ಮಾನವ ತಲೆಬುರುಡೆಗಳನ್ನು ಸಹ ಬಳಸುತ್ತಾರೆ.
ಅಘೋರಿಗಳು ಮೃತಪಟ್ರೆ ಅವರ ಶವಗಳನ್ನು ಸುಡೋದಿಲ್ಲ ಯಾಕೆ ಗೊತ್ತಾ?
ಅಘೋರಿಗಳು ತಮ್ಮ ಸಾವನ್ನು ತಾವೇ ನಿಶ್ಚಯ ಮಾಡುತ್ತಾರೆ ಅಘೋರಿ ಸತ್ತಾಗ. ಅವನ ಅಂತಿಮ ಸಂಸ್ಕಾರವನ್ನು ಅವರು ಮಾಡುವುದಿಲ್ಲ. ಅಘೋರಿಯ ಮೃತ ದೇಹವನ್ನು ತಲೆಕೆಳಗಾಗಿ ಇಡಲಾಗುತ್ತದೆ. ಮೃತ ದೇಹದಲ್ಲಿ ಕ್ರಿಮಿಗಳು ಉತ್ಪತ್ತಿಯಾಗುವವರೆಗೆ ಕಾವಲು ಕಾಯುತ್ತಾರೆ. ನಂತರ ದೇಹವನ್ನು ಅಲ್ಲಿಂದ ತೆಗೆಯಲಾಗುತ್ತದೆ. ಬಳಿಕ ತಲೆಯನ್ನು ಬೇರ್ಪಡಿಸಿ ದೇಹದ ಉಳಿದ ಭಾಗವನ್ನು ಗಂಗಾ ನದಿಯಲ್ಲಿ ಎಸೆಯಲಾಗುತ್ತದೆ. ಒಂದೂವರೆ ತಿಂಗಳ ಕಾಲ ಸಮಾಧಿ ಮಾಡಿದ ಅಘೋರಿಯ ದೇಹವನ್ನು ಹೊರತೆಗೆದ ನಂತರ, ಮುಂಡಿ ಎಂಬ ಪ್ರಕ್ರಿಯೆಯು 40 ದಿನಗಳವರೆಗೆ ಮುಂದುವರೆಯುತ್ತದೆ.





