Aadhaar card for cattle: ಜಾನುವಾರುಗಳಿಗೂ ಆಧಾರ್ ಕಾರ್ಡ್

(Aadhaar card for cattle:) ಬೆಂಗಳೂರು: ಕರ್ನಾಟಕದ ಪಶುಸಂಗೋಪನಾ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಮಹತ್ವದ ಹೆಜ್ಜೆಯಾಗಿ, ದೇಶದಲ್ಲೇ ಮೊದಲ ಬಾರಿಗೆ ಜಾನುವಾರುಗಳಿಗೆ ಆಧಾರ್ ಮಾದರಿಯ ವಿಶಿಷ್ಟ ಬಯೋಮೆಟ್ರಿಕ್ ಗುರುತಿನ ಚೀಟಿ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಹಸು, ಎಮ್ಮೆ ಹಾಗೂ ಕರುಗಳಿಗೆ ಡಿಜಿಟಲ್ ಐಡೆಂಟಿಟಿ ಸೃಷ್ಟಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಪಶುಸಂಗೋಪನಾ ಇಲಾಖೆಯಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ.

ಇದುವರೆಗೆ ಜಾನುವಾರುಗಳನ್ನು ಗುರುತಿಸಲು ಕಿವಿಗೆ ಪ್ಲಾಸ್ಟಿಕ್ ಟ್ಯಾಗ್ ಅಳವಡಿಸುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಹೊಸ ತಂತ್ರಜ್ಞಾನದಲ್ಲಿ ಪ್ರತಿ ಜಾನುವಾರಿನ ಮೂಗಿನ ಮೇಲಿರುವ ರೇಖೆಗಳು ಮತ್ತು ಮಡಿಕೆಗಳನ್ನು (Muzzle Prints) ಬಯೋಮೆಟ್ರಿಕ್ ಗುರುತಾಗಿ ಬಳಸಲಾಗುತ್ತದೆ. ಮನುಷ್ಯರ ಬೆರಳಚ್ಚಿನಂತೆ ಪ್ರತಿಯೊಂದು ಜಾನುವಾರಿನ ಮೂಗಿನ ಗುರುತು ಕೂಡ ವಿಭಿನ್ನವಾಗಿರುವುದರಿಂದ, ಮೂಗಿನ ಭಾಗವನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಐಡಿ ಸೃಷ್ಟಿಸಲಾಗುತ್ತದೆ.

ರಾಜ್ಯ ಸರ್ಕಾರದ ಇ-ಆಡಳಿತ ಕೇಂದ್ರ (CeG) ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಸಹಯೋಗದಲ್ಲಿ ಈ ಹೈಟೆಕ್ ಯೋಜನೆ ರೂಪುಗೊಂಡಿದ್ದು, ಪ್ರಾಯೋಗಿಕ ಹಂತದಲ್ಲಿ ಜಾರಿಗೆ ತರಲು ತಜ್ಞರ ತಂಡ ಸಿದ್ಧತೆ ನಡೆಸಿದೆ.

ಈ ವ್ಯವಸ್ಥೆಯಿಂದ ಜಾನುವಾರುಗಳ ಸಂಪೂರ್ಣ ಮಾಹಿತಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದ್ದು, ಸರ್ಕಾರದ ಯೋಜನೆಗಳು, ವಿಮೆ ಪಾವತಿ ಹಾಗೂ ಪರಿಹಾರ ವಿತರಣೆಯಲ್ಲಿ ನಡೆಯುವ ಅಕ್ರಮ ಮತ್ತು ನಕಲಿ ದಾಖಲೆಗಳಿಗೆ ತಡೆ ಬೀಳಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ ವಿಭಾಗದ ಯೋಜನಾ ನಿರ್ದೇಶಕ ಶ್ರೀವ್ಯಾಸ್ ಎಚ್‌.ಎಂ. ಅವರ ಪ್ರಕಾರ, ಈ ಡಿಜಿಟಲ್ ವ್ಯವಸ್ಥೆಯಿಂದ ಜಾನುವಾರುಗಳ ಲಸಿಕೆ, ಆರೋಗ್ಯದ ಮಾಹಿತಿ, ವಿಮೆ ವಿವರ ಹಾಗೂ ಮೃತಪಟ್ಟ ಪ್ರಾಣಿಗಳ ಪರಿಹಾರ ಅರ್ಜಿಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಲಸಿಕೆ ಹಾಕುವ ದಿನಾಂಕದ ಬಗ್ಗೆ ರೈತರ ಮೊಬೈಲ್‌ಗೆ ಮುಂಚಿತವಾಗಿಯೇ ಎಸ್‌ಎಂಎಸ್ ಅಲರ್ಟ್ ಸಂದೇಶಗಳು ರವಾನೆಯಾಗಲಿವೆ.

ಹೊಸದಾಗಿ ಹುಟ್ಟುವ ಕರುಗಳಿಗೆ ಕೂಡ ಜನನದ ತಕ್ಷಣವೇ ಡಿಜಿಟಲ್ ದಾಖಲೆ ಸೃಷ್ಟಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳ ಮೂಗಿನ ಫೋಟೋ ಸ್ಕ್ಯಾನ್ ಮೂಲಕವೇ ಆರೋಗ್ಯ ಸ್ಥಿತಿ ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಉದ್ದೇಶವೂ ಸರ್ಕಾರ ಹೊಂದಿದೆ.

ಪ್ರಸ್ತುತ ರಾಜ್ಯದಲ್ಲಿ 1 ಕೋಟಿಗೂ ಅಧಿಕ ಜಾನುವಾರುಗಳಿದ್ದು, ಪ್ರತಿವರ್ಷ ಸುಮಾರು 10 ಲಕ್ಷದಷ್ಟು ದನ-ಕರುಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಬೃಹತ್ ಪ್ರಮಾಣದ ಜಾನುವಾರುಗಳ ಮಾಹಿತಿಯನ್ನು ಪಾರದರ್ಶಕವಾಗಿ ನಿರ್ವಹಿಸಲು ಎಐ ಆಧಾರಿತ ಈ ಡಿಜಿಟಲ್ ವ್ಯವಸ್ಥೆ ನೆರವಾಗಲಿದೆ.

Aadhaar card for cattle: ಜಾನುವಾರುಗಳಿಗೂ ಆಧಾರ್ ಕಾರ್ಡ್
Aadhaar card for cattle: ಜಾನುವಾರುಗಳಿಗೂ ಆಧಾರ್ ಕಾರ್ಡ್

ಇತ್ತೀಚಿನ ಜನಪ್ರಿಯ ಸುದ್ದಿಗಳು (Aadhaar card for cattle: )

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?