2nd puc: ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ ಪ್ರಕಟ

2nd puc: ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ ಪ್ರಕಟ

(2nd puc:) 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ಪ್ರಕಟಿಸಲಾಗಿದೆ.


ನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ


ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾದಂತ 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡವಾರು ಪ್ರಮಾಣ 73.45ರಷ್ಟು ಆಗಿದೆ. ಇದರ ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ಹಾಗೂ ಪರೀಕ್ಷೆ-3ಕ್ಕೆ ದಿನಾಂಕವನ್ನು ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ:
24-4-25: ಕನ್ನಡ, ಅರೇಬಿಕ್
25-4-25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
26-4-25: ಇತಿಹಾಸ, ಭೌತಶಾಸ್ತ್ರ
27-4-25: ಭಾನುವಾರ (ರಜಾ ದಿನ)
28-4-25: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
29-4-25: ಇಂಗ್ಲೀಷ್
30-4-25: ಬಸವ ಜಯಂತಿ (ರಜಾ ದಿನ)
01-05-25: ಕಾರ್ಮಿಕ ದಿನಾಚರಣೆ (ರಜಾ ದಿನ)
02-05-25: ತರ್ಕಶಾಸತ್ರ, ವ್ಯವಹಾರ ಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ.
03-05-25: ಸಮಾಜಶಾಸ್ತ್ರ, ಭೂರ್ಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕಶಾಸ್ತ್ರ
04-05-25: ಭಾನುವಾರ (ರಜಾ ದಿನ)
05-05-25: ಅರ್ಥಶಾಸ್ತ್ರ
06-05-25: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
07-5-25: ಹಿಂದಿ
08-05-25: ತಮಿಳು, ತೆಲುಗು,ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.

 


ನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 2000 ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ!; ಏನದು? ಇಲ್ಲಿದೆ ನೋಡಿ


ಪರೀಕ್ಷೆ ನೋಂದಣಿ ಯಾವಾಗ? ಎಲ್ಲಿ?:(2nd puc:) 
ವಿದ್ಯಾರ್ಥಿಗಳು ಪರೀಕ್ಷೆ 2ಕ್ಕೆ ದಿನಾಂಕ 08-04-2025 ರಿಂದ 17-04-2025 ರ ನೊಂದಾಯಿಸಿಕೊಳ್ಳಬೇಕು. ದಂಡ ಸಹಿತ – 16-04-2025 ರಿಂದ 17-04-2025. ಇನ್ನು ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು, 2025 ರ ದ್ವಿತೀಯ ಪಿಯುಸಿ ಪರೀಕ್ಷೆ 2 ಕ್ಕೆ ಮಂಡಲಿಯು ಒದಗಿಸಿದ ಫಲಿತಾಂಶ ಪಟ್ಟಿಯ ಆಧಾರದ ಮೇಲೆ ನೊಂದಾವಣೆ ಮಾಡಿಕೊಳ್ಳಬಹುದು. ಇನ್ನು 2022ನೇ ಸಾಲಿನ ಅಥವಾ ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2025 ರ ದ್ವಿತೀಯ ಪಿಯುಸಿ ಪರೀಕ್ಷೆ 2 ಕ್ಕೆ ‘MCA’ ಆಧಾರದ ಮೇಲೆ ಮಾತ್ರ ನೋಂದಾವಣೆ ಮಾಡಿಕೊಳ್ಳಬಹುದು.


ನ್ನೂ ಓದಿ: ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?


2nd puc: ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ ಪ್ರಕಟ
2nd puc: ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ ಪ್ರಕಟ