pu result 2025:ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?

pu result 2025:ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?

(pu result 2025:) 2025 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಇಂದು ಪ್ರಕಟವಾಗಿದೆ.


ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ


ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಡಳಿಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.

ಫಲಿತಾಂಶದ ಪ್ರಕಾರ ಒಟ್ಟಾರೆ ಹಾಜರಾದವರ ಪೈಕಿ ಶೇ 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಿರೀಕ್ಷೆಯಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 77.88 ರಷ್ಟು ಬಾಲಕಿಯರು ತೇರ್ಗಡೆಯಾದರೆ ಶೇ 68.22 ರಷ್ಟು ಬಾಲಕರು ಪಾಸಾಗಿದ್ದಾರೆ. ಶೇ 69.33 ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಪಾಸಾಗಿದ್ದರೆ ಶೇ 74.55 ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸಾಗಿದ್ದಾರೆ.


ಇದನ್ನೂ ಓದಿ: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ರೂಲ್ಸ್‌ ಕಡ್ಡಾಯ: ಕಲಿಕಾ ಸಾಮರ್ಥ್ಯ ವೃದ್ಧಿಗೆ ಮಹತ್ವದ ಕ್ರಮ


ಫಲಿತಾಂಶದ ಪ್ರಕಾರ ಉಡುಪಿ ಜಿಲ್ಲೆ ಪ್ರಥಮ ಸ್ಥಾನ (ಶೇ 93.90) ಪಡೆದಿದೆ. ಯಾದಗಿರಿ ಕೊನೆಯ ಸ್ಥಾನ (ಶೇ 48.45) ಪಡೆದಿದೆ. ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಶೇ 93.57ರಷ್ಟು ಫಲಿತಾಂಶ ಲಭಿಸಿದೆ. ಮೂರನೇ ಸ್ಥಾನ ಬೆಂಗಳೂರು ದಕ್ಷಿಣ ಶೇ.85.36. ಅದೇ ರೀತಿ ಶೇ. 83.84 ಫಲಿತಾಂಶ ಪಡೆದಿರುವ ಕೊಡಗು ಜಿಲ್ಲೆ 4ನೇ ಸ್ಥಾನಕ್ಕೇರಿದೆ. ಐದನೇ ಸ್ಥಾನ ಬೆಂಗಳೂರು ಉತ್ತರ ಶೇ 83.31, ಆರನೇ ಸ್ಥಾನ ಉತ್ತರ ಕನ್ನಡ ಶೇ 82.93, ಏಳನೇ ಸ್ಥಾನ ಶಿವಮೊಗ್ಗ ಶೇ 79.91, ಎಂಟನೇ ಸ್ಥಾನ ಬೆಂಗಳೂರು ಗ್ರಾಮಾಂತರ ಶೇ 79.70, ಒಂಭತ್ತನೇ ಸ್ಥಾನ ಚಿಕ್ಕಮಗಳೂರು ಶೇ 79.56, ಹತ್ತನೇ ಸ್ಥಾನ ಹಾಸನ ಶೇ 77.56 ಪಡೆದಿದೆ.

ಕನ್ನಡದಲ್ಲಿ 100ಕ್ಕೆ 100 ಅಂಕಗಳಿಸಿದವರು 5,414 ವಿದ್ಯಾರ್ಥಿಗಳು
ಈ ವರ್ಷದ ಪಿಯು ಫಲಿತಾಂಶದಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕಗಳಿಸಿದವರು 5,414 ವಿದ್ಯಾರ್ಥಿಗಳು. ಹಾಗೆಯೇ ಇಂಗ್ಲಿಷ್‌ ವಿಷಯದಲ್ಲಿ 11 ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು, ಗಣಿತದಲ್ಲಿ 4,038 ವಿದ್ಯಾರ್ಥಿಗಳು 100ಕ್ಕೆ 100 ಅಂಕವನ್ನು, ಭೌತಶಾಸ್ತ್ರದಲ್ಲಿ 496 ವಿದ್ಯಾರ್ಥಿಗಳು, ಇತಿಹಾಸದಲ್ಲಿ 958 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 613 ವಿದ್ಯಾರ್ಥಿಗಳು, ಗಣಕ ವಿಜ್ಞಾನದಲ್ಲಿ 1137 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ 1,00,571 ವಿದ್ಯಾರ್ಥಿಗಳು ಶೇಕಡ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಹಾಗೆಯೇ ಪ್ರಥಮ ದರ್ಜೆಯಲ್ಲಿ 2,78,054 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 70,969 ವಿದ್ಯಾರ್ಥಿಗಳು, ತೃತೀಯ ದರ್ಜೆಯಲ್ಲಿ 18,845 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

2025ರ ದ್ವಿತೀಯ ಪಿಯುಸಿ ಪರೀಕ್ಷೆ 2 ಅನ್ನು 24-04-2025 ರಿಂದ 08-05-2025 ರವರೆಗೆ ನಡೆಸಲಿದ್ದು, ಅನುತ್ತೀರ್ಣರಾದವರು, ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

2025ರ ದ್ವಿತೀಯ ಪಿಯುಸಿ ಪರೀಕ್ಷೆ 2/ ಪರೀಕ್ಷೆ 3 ಎಲ್ಲಾ ವರ್ಗದ ಬಾಲಕಿಯರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವರ್ಗ-1 ರ ಬಾಲಕರಿಗೆ ಪುನರಾವರ್ತಿತ / ಅಪೂರ್ಣ ಅಭ್ಯರ್ಥಿಗಳಿಗಾಗಿ ನೋಂದಾಯಿಸಿಕೊಳ್ಳಲು ಪರೀಕ್ಷಾ ಶುಲ್ಕ ಇರುವುದಿಲ್ಲ.

pu result 2025:ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?
pu result 2025:ದ್ವಿತೀಯ PU ಫಲಿತಾಂಶದಲ್ಲಿ ನಿಮ್ಮ ಜಿಲ್ಲೆಗೆ ಯಾವ ಸ್ಥಾನ?