Zodiac Signs; ಈ 3 ರಾಶಿಯವರು ಅತ್ಯಂತ ಕ್ರೂರಿಗಳಂತೆ..!

(Zodiac Signs;) ಜ್ಯೋತಿಷ್ಯ ಶಾಸ್ತ್ರದ ಮೂಲಕ ವ್ಯಕ್ತಿಯ ಸ್ವಭಾವ, ಗುಣಗಳು ಮತ್ತು ದೋಷಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಭವಿಷ್ಯದ ಬಗ್ಗೆಯೂ ತಿಳಿದುಕೊಳ್ಳಬಹುದು. ಅಂತೆಯೇ 12 ರಾಶಿಚಕ್ರ ಚಿಹ್ನೆಗಳು ಅವುಗಳ ಸ್ವಭಾವಕ್ಕೆ ಹೆಸರುವಾಸಿಯಾಗಿವೆ. ಇವುಗಳಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳು ತುಂಬಾ ದಯಾಳುಗಳಾದರೆ ಮತ್ತು ಕೆಲವು ತುಂಬಾ ನಿರ್ದಯವಾಗಿರುತ್ತವೆ. ನಿರ್ದಯ ರಾಶಿಯವರು ಯಾವುದೇ ರೀತಿಯ ತಪ್ಪನ್ನು ಕ್ಷಮಿಸವುದಿಲ್ಲ ಅಥವಾ ಸಹಿಸುವುದಿಲ್ಲ. ದಯೆ ಇರದ ಇವರು ಕ್ರೂರವಾಗಿ ವರ್ತಿಸುವುದಕ್ಕೂ ಸಿದ್ದರಿರುತ್ತಾರೆ. ಹೀಗಾಗಿ 12 ರಾಶಿಚಕ್ರ ಚಿಹ್ನೆಗಳಲ್ಲಿ ಅಂತಹ 3 ರಾಶಿಚಕ್ರ ಚಿಹ್ನೆಗಳ ಬಗ್ಗೆ ಇಲ್ಲಿದೆ ನೋಡಿ.


ನ್ನೂ ಓದಿ: ರೇಷನ್‌ ಕಾರ್ಡ್‌ ಹೊಂದಿದ್ರೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ


(Zodiac Signs;) ಮೇಷ ರಾಶಿ:
ಅತ್ಯಂತ ಕೋಪಿಷ್ಟರಲ್ಲಿ ಮೇಷ ರಾಶಿಯವರಿಗೆ ಮೊದಲನೇ ಸ್ಥಾನ. ಧೈರ್ಯಶಾಲಿಗಳು ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುವ ಮೇಷ ರಾಶಿಯವರಿಗೆ ತುಸು ಹೆಚ್ಚೇ ದುರಹಂಕಾರವಿರುತ್ತದೆ. ಇವರನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಇತರರ ಭಾವನೆಗಳಿಗೆ ಬೆಲೆ ಕೊಡದ ಇವರ ನೇರ ಮಾತು.. ನೇರ ಸ್ವಭಾವ ಇತರರಿಗೆ ಕೆಟ್ಟದಾಗಿ ಕಾಣಿಸಬಹುದು. ಇನ್ನು ಯಾರಾದರೂ ಈ ರಾಶಿಯವರನ್ನು ಕೆಣಕಿದರೆ, ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅಥವಾ ಬೆನ್ನಿನ ಹಿಂದೆ ಅವರ ವಿರುದ್ಧವೇ ಸಂಚು ರೂಪಿಸಿದರೆ ಮುಗೀತು, ಇವರ ಒಳಗಿರುವ ಕ್ರೂರತ್ವ ಥಟ್ ಅಂತ ಹೊರಬರುತ್ತದೆ. ಕೋಪದಲ್ಲಿ ಏನನ್ನೂ ಯೋಚಿಸದೆ ಮಾತನಾಡುವುದರ ಜೊತೆಗೆ, ಅವರಿಗೆ ನೋಯಿಸುವವವರೆಗೂ ಇವರಿಗೆ ತೃಪ್ತಿಯಾಗದು. ಒಟ್ಟಾರೆ ಯಾರಾದರೂ ಇವರಿಗೆ ದ್ರೋಹ ಮಾಡಿದರೆ, ಎಂದಿಗೂ ಅವರನ್ನು ಬಿಡುವುದಿಲ್ಲ.


ನ್ನೂ ಓದಿ: ಗೃಹಲಕ್ಷ್ಮಿ ಬಾಕಿ ಹಣ ಈ ದಿನ ಜಮೆ!; ಇಲ್ಲಿದೆ ನೋಡಿ ಡಿಟೈಲ್ಸ್


ಸಿಂಹ ರಾಶಿ:
ಸಿಂಹ ರಾಶಿಯವರು ನಿರ್ದಯ ರಾಶಿಗಳಲ್ಲಿ ಒಬ್ಬರು. ಸಾಮಾನ್ಯವಾಗಿ ಇವರು ಮೋಸ ಮಾಡುವ ಜನರಿಂದ ದೂರವಿರುತ್ತಾರೆ. ಆದರೆ ಯಾರಾದರೂ ಇವರಿಗೆ ಮೋಸ ಮಾಡಿದರೆ, ಅವರ ಕಥೆ ಮುಗಿದಂತೆ. ಅವರ ಕಣ್ಣಲ್ಲಿ ನೀರು ಹಾಕಿಸುವವರೆಗೂ ಬಿಡುವುದಿಲ್ಲ. ಹಾಗಂತ ಸಿಂಹ ರಾಶಿಯವರು ತಕ್ಷಣ ಕೋಪವನ್ನು ತೋರಿಸುವುದಿಲ್ಲ. ತನ್ನ ವಿರೋಧಿಗಳನ್ನು ಅವಮಾನಿಸಲು ಮತ್ತು ನೋಯಿಸಲು ಸರಿಯಾದ ಸಮಯ ಮತ್ತು ಸಂದರ್ಭ ಬರುವವರೆಗೆ ಕಾಯುತ್ತಾರೆ.


ನ್ನೂ ಓದಿ:  ರಾಜ್ಯದ ಜನತೆಗೆ ಗುಡ್ ನ್ಯೂಸ್; ಭೂ ಒಡೆತನ ಸೇರಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ


(Zodiac Signs;) ಕುಂಭ ರಾಶಿ:
ಅತೀ ಕ್ರೂರ ರಾಶಿಗಳಲ್ಲಿ ಕುಂಭ ರಾಶಿಯವರದ್ದು ಮೂರನೇ ಸ್ಥಾನ. ಹೆಚ್ಚಾಗಿ ಸ್ವಾತಂತ್ರ್ಯವನ್ನು ಬಯಸುವ ಕುಂಭ ರಾಶಿಯವರು ಅತ್ಯಂತ ಸ್ನೇಹಪರ ಮತ್ತು ವಿನೋದ ಸ್ವಭಾವದವರು. ಇವರು ಅಸಮಾಧಾನಗೊಳ್ಳುವುದು ತುಂಬಾ ವಿರಳ. ಆದರೆ ಒಮ್ಮೆ ಇವರು ಕೋಪ ಮಾಡಿಕೊಂಡರೆ ಮುಗೀತು, ತಮ್ಮ ಮುಂದೆ ಯಾರಿದ್ದಾರೆ ಅಂತ ಕೂಡ ನೋಡುವುದಿಲ್ಲ.

(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್‌ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್‌ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ)

Zodiac Signs; ಈ 3 ರಾಶಿಯವರು ಅತ್ಯಂತ ಕ್ರೂರಿಗಳಂತೆ..!
Zodiac Signs; ಈ 3 ರಾಶಿಯವರು ಅತ್ಯಂತ ಕ್ರೂರಿಗಳಂತೆ..!

ಇತ್ತೀಚಿನ ಜನಪ್ರಿಯ ಸುದ್ದಿಗಳು (Zodiac Signs;)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ