Zodiac Sign 25: ಬುಧನ ಡಬಲ್ ಗೋಚಾರ: ಈ 4 ರಾಶಿಗೆ ಡಬಲ್ ಧಮಾಕ!

(Zodiac Sign 25:) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಗಸ್ಟ್ ಕೊನೆಯಲ್ಲಿ ಎರಡು ಬಾರಿ ತನ್ನ ಚಲನೆಯನ್ನು ಬದಲಾಯಿಸಲಿರುವ ಬುಧನಿಂದಾಗಿ ಕೆಲವು ರಾಶಿಯವರಿಗೆ ಅತ್ಯಂತ ಹೆಚ್ಚಿನ ಲಾಭದಾಯಕವಾಗಲಿದೆ. ಯಾವ ರಾಶಿಯವರಿಗೆ ಸಾಕಷ್ಟು ಲಾಭ ದೊರಕುವ ಯೋಗವಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ಮೇಷ ರಾಶಿ
ಮೇಷ ರಾಶಿಗೆ ಸೇರಿದ ಜನರಿಗೆ ಬುಧ ದೇವನ ಚಲನೆಯಲ್ಲಿ ಬದಲಾವಣೆಯಿಂದ ಲಾಭದ ನಂತರ ಲಾಭವಾಗುವುದು. ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಸಾಕಷ್ಟು ಗೌರವ, ಖ್ಯಾತಿ ದೊರಕುವುದು. ಹಾಗೆ ಬುಧನ ಶುಭ ಪ್ರಭಾವದಿಂದಾಗಿ ನಿಮಗೆ ಪ್ರಯಾಣಿಸುವ ಯೋಗ ದೊರಕಲಿದೆ. ಈ ಪ್ರಯಾಣವು ನಿಮಗೆ ಹೆಚ್ಚು ಲಾಭದಾಯಕವಾಗಿರಲಿದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ನಿಮ್ಮ ಆದಾಯದಲ್ಲಿ ಬಹಳಷ್ಟು ವೃದ್ದಿಯಾಗುವುದು. ಜೊತೆಗೆ ನೀವು ಮಾಡುವಂತಹ ಎಲ್ಲಾ ರೀತಿಯ ಕೆಲಸಗಳನ್ನು ಜನರು ಹೊಗಳುವರು. ಮೇಷ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ತಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವರು. ಹಾಗೆ ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಬುಧ ದೇವನ ಕೃಪೆಯಿಂದಾಗಿ ಈ ಸಮಯವು ನಿಮಗೆ ಶುಭವಾಗಿರುವುದು.

(Zodiac Sign 25:) ಮಿಥುನ ರಾಶಿ
ಎರಡು ಸಾರಿ ತನ್ನ ಚಲನೆಯನ್ನು ಬದಲಾಯಿಸುತ್ತಿರುವ ಬುಧನಿಂದಾಗಿ ಮಿಥುನ ರಾಶಿಗೆ ಸೇರಿದ ಜನರ ಅದೃಷ್ಟವೇ ಬದಲಾಗಲಿದೆ. ಈ ಅವಧಿಯಲ್ಲಿ ಕೆಲಸವನ್ನು ಮಾಡುವ ಜನರು ಸಾಕಷ್ಟು ಪ್ರಗತಿಯನ್ನು ಪಡೆಯುವ ಯೋಗ ದೊರಕುವುದು. ಜೊತೆಗೆ ನಿಮ್ಮ ಗೌರವ, ಖ್ಯಾತಿಯಲ್ಲಿ ಬಹಳಷ್ಟು ವೃದ್ದಿಯನ್ನು ಈ ಸಂದರ್ಭದಲ್ಲಿ ಹೊಂದುವಿರಿ.


ಇದನ್ನೂ ಓದಿ: 30,0000 ಸ್ಕಾಲರ್‌ ಶಿಪ್‌: ಯಾರು ಅರ್ಹರು…?


ಕನ್ಯಾ ರಾಶಿ
ಕನ್ಯಾ ರಾಶಿಗೆ ಸೇರಿದ ಜನರಿಗೆ ಈ ಆಗಸ್ಟ್ ತಿಂಗಳಲ್ಲಿ ಬುಧನ ಸಂಚಾರದಿಂದ ಸಾಕಷ್ಟು ಲಾಭ ದೊರಕುವುದು. ಜೊತೆಗೆ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವುದರೊಂದಿಗೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತಹ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಲಿದೆ. ಹಾಗೆ ಬುಧನ ಅನುಗ್ರಹದಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶ ಲಭಿಸುವುದು. ಜೊತೆಗೆ ನಿಮ್ಮ ವೈವಾಹಿಕ ಜೀವನ ಬಹಳಷ್ಟು ಸುಖಮಯವಾಗಿರಲಿದೆ.

(Zodiac Sign 25:) ವೃಶ್ಚಿಕ ರಾಶಿ
ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಬುಧನ ಚಲನೆಯಲ್ಲಿ ಬದಲಾವಣೆಯಿಂದ ಸಾಕಷ್ಟು ಲಾಭ ದೊರಕುವ ಯೋಗ ಲಭಿಸುವುದು.ಈ ಸಮಯದಲ್ಲಿ ಕೆಲಸವನ್ನು ಮಾಡುವ ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಪ್ರಗತಿಯನ್ನು ಪಡೆಯುವ ಯೋಗ ಕೂಡ ಲಭಿಸಲಿದೆ. ಹೊಸ ಕೆಲಸವನ್ನು ಶುರು ಮಾಡಬೇಕೆಂದಿರುವವರಿಗೆ ಈ ಅವಧಿಯು ಉತ್ತಮವಾಗಿರುವುದು.

(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್‌ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್‌ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ)

Zodiac Sign 25: ಬುಧನ ಡಬಲ್ ಗೋಚಾರ: ಈ 4 ರಾಶಿಗೆ ಡಬಲ್ ಧಮಾಕ!
Zodiac Sign 25: ಬುಧನ ಡಬಲ್ ಗೋಚಾರ: ಈ 4 ರಾಶಿಗೆ ಡಬಲ್ ಧಮಾಕ!

ಇತ್ತೀಚಿನ ಜನಪ್ರಿಯ ಸುದ್ದಿಗಳು (Zodiac Sign 25:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ