Yellow Teeth: ಕೇವಲ ಒಂದು ನಿಮಿಷದಲ್ಲಿ ನಿಮ್ಮ ಹಳದಿ ಹಲ್ಲು ಬೆಳ್ಳಗಾಗಿಸಿ

Yellow Teeth: ನಿಮ್ಮ ಹಲ್ಲುಗಳು ಕೆಲವೊಮ್ಮೆ ಪ್ರತಿದಿನ ಬ್ರಷ್ ಮಾಡುತ್ತಿದ್ದರೂ ಸಹ ಹಳದಿ ಬಣ್ಣ ಆಗಿದ್ದರೆ ಮತ್ತು ದುರ್ವಾಸನೆ ಬರುತ್ತಿದ್ದರೆ, ಮನೆಯಲ್ಲಿರುವ ಕೆಲವು ಅಡುಗೆ ಸಾಮಗ್ರಿಗಳನ್ನೇ ಬಳಸಿಕೊಂಡು ಕೆಲವೇ ಕೆಲವು ನಿಮಿಷದಲ್ಲಿ ಈ ತೊಂದರೆಯನ್ನು ಬಗೆಹರಿಸಿಕೊಳ್ಳಬಹುದು. ಯಾವ ಸಾಮಗ್ರಿಗಳು ಬೇಕಾಗುತ್ತವೆ? ಅದನ್ನು ಉಪಯೋಗಿಸುವುದು ಹೇಗೆ ಎಂಬ ಸಂಪೂರ್ಣ ಹಲ್ಲು ಬೆಳ್ಳಗಾಗಿಸುವ ಟಿಪ್ ಅನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ..

Yellow Teeth: ಕೇವಲ ಒಂದು ನಿಮಿಷದಲ್ಲಿ ನಿಮ್ಮ ಹಳದಿ ಹಲ್ಲು ಬೆಳ್ಳಗಾಗಿಸಿ
Yellow Teeth: ಕೇವಲ ಒಂದು ನಿಮಿಷದಲ್ಲಿ ನಿಮ್ಮ ಹಳದಿ ಹಲ್ಲು ಬೆಳ್ಳಗಾಗಿಸಿ

ಆತ್ಮೀಯರೊಂದಿಗೆ ನೀವು ಮಾತನಾಡುವಾಗ ನಿಮ್ಮ ಹಲ್ಲು ಶುದ್ಧವಾಗಿ ಮತ್ತು ಶುಭ್ರವಾಗಿರದೆ ಇದ್ದರೆ, ಅವರ ಜೊತೆ ಮಾತನಾಡಲು ನಮಗೆ ಮುಜುಗರ ಅನ್ನಿಸುತ್ತದೆ. ಪ್ರತಿಯೊಬ್ಬರ ಈ ಒಂದು ಸಮಸ್ಯೆಗೆ ಸುಲಭ ಪರಿಹಾರ ಮನೆಯಲ್ಲಿಯೇ ಇದ್ದು ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ. ಈ ಮನೆ ಮದ್ದನ್ನು ತಯಾರಿಸಿಕೊಳ್ಳಲು ಈ ಕೆಳಗಿನ ಸಾಮಗ್ರಿಗಳು ಬೇಕಾಗುತ್ತವೆ.

1. ಬೌಲ್
2. ಅರಿಶಿಣ ಪುಡಿ
3. ಅಡುಗೆ ಉಪ್ಪು
4. ಅಡುಗೆ ಸೋಡಾ

ಮೊದಲು ಒಂದು ಬೌಲ್ ತೆಗೆದುಕೊಳ್ಳಿ. ಆ ಬೌಲ್ ನಲ್ಲಿ ಅರ್ಧ ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ. ಅರಿಶಿಣ ಪುಡಿಗೆ ಅರ್ಧ ಚಮಚದಷ್ಟು ಅಡಿಗೆ ಉಪ್ಪು ಮತ್ತು ಅಡಿಗೆ ಸೋಡವನ್ನು ಮಿಶ್ರಣ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮೂರು ಸಾಮಗ್ರಿಗಳ ಮಿಶ್ರಣವನ್ನು ಪ್ರತಿನಿತ್ಯವೂ ನೀವು ಸಲ್ಪ ಸಲ್ಪ ತೆಗೆದುಕೊಂಡು ಅದಕ್ಕೆ ನೀರನ್ನು ಮಿಕ್ಸ್ ಮಾಡಿ ಅದನ್ನು ಪೇಸ್ಟ್ ರೀತಿ ಮಾಡಿ ಉಪಯೋಗಿಸಬಹುದು.


ಇದನ್ನೂ ಓದಿ: ಜಮೀನಿನ ದಾರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!; ಏನದು? ಇಲ್ಲಿದೆ ನೋಡಿ


ಉಪಯೋಗಿಸುವ ಅರಿಶಿಣ ಪುಡಿಯು, ನಿಮ್ಮ ಬಾಯಲ್ಲಿ ಹಾಗೂ ಹಲ್ಲಿನಲ್ಲಿರುವ ಕ್ರಿಮಿ ಕಿಟಾಣುಗಳನ್ನು ಸಾಯಿಸಲು ಸಹಾಯಕವಾಗಿದೆ. ಅದೇ ರೀತಿ ಉಪ್ಪು ಹಾಗೂ ಅಡಿಗೆ ಸೋಡಾ ನಿಮ್ಮ ಹಲ್ಲನ್ನು ಶುದ್ಧ ಹಾಗೂ ಶುಭ್ರವಾಗಿಡಲು, ಪಳ ಪಳನೆ ಹೊಳೆಯುವಂತೆ ಮಾಡಲು ಸಹಾಯಕವಾಗಿದೆ.
ವಿ. ಸೂ: ಈ ಮನೆ ಮದ್ದಿನ ಫಲಿತಾಂಶ ಮನುಷ್ಯರಿಂದ ಮನುಷ್ಯರಿಗೆ ಭಿನ್ನವಾಗಿರುತ್ತದೆ, ಇದನ್ನು ಬಳಸುವ ಮುಂಚೆ ಒಮ್ಮೆ ತಜ್ಞರ ಸಲಹೆ ಪಡೆದು ನಂತರ ಬಳಸಿರಿ.


ಹುಬ್ಬಳ್ಳಿ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ:
ಅಂಗನವಾಡಿ ಕಾರ್ಯಕರ್ತೆ ಹುದ್ದೆ
ಅಂಗನವಾಡಿ ಸಹಾಯಕಿ ಹುದ್ದೆ

ಹುದ್ದೆಯ ಸಂಖ್ಯೆ:
ಅಂಗನವಾಡಿ ಕಾರ್ಯಕರ್ತೆ ಹುದ್ದೆ: 190
ಅಂಗನವಾಡಿ ಸಹಾಯಕಿ ಹುದ್ದೆ: 9


ಇದನ್ನೂ ಓದಿ: ಈರುಳ್ಳಿ ಮೇಲೆ ಕಪ್ಪು ಬಣ್ಣ ಇದ್ದರೆ ತಿನ್ನಬೇಕಾ ಬೇಡ್ವಾ..?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ


ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆ:
12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಪಾಸ್

ಅಂಗನವಾಡಿ ಸಹಾಯಕಿ ಹುದ್ದೆಗೆ ವಿದ್ಯಾರ್ಹತೆ:
10ನೇ ತರಗತಿ ಪಾಸ್

ವಯೋಮಿತಿ:
ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ವಯೋಮಿತಿ ಸಡಿಲಿಕೆ ಅನ್ವಯ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
02-09-2024

ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://karnemakaone.kar.nic.in/abcd/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.