(Tulsi Gowda) ವೃಕ್ಷಮಾತೆ ಎಂದೇ ಹೆಸರಾದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ (81) ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಸಂಜೆ 6.20ಕ್ಕೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
ಹಾಲಕ್ಕಿ ಸಮುದಾಯದ ಬಡ ಕುಟುಂಬದ ತುಳಸಿ ಗೌಡ ಅವರು ಎಂಟು ತಿಂಗಳ ಹಿಂದೆ ಪಾಶ್ಚವಾಯು ಕಾಯಿಲೆಗೆ ಒಳಗಾಗಿದ್ದರು. ಮುಂಗಳೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಚೇತರಿಸಿಕೊಂಡಿರಲಿಲ್ಲ. ಕೊನೆಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು (ಮಂಗಳವಾರ) ಮಧ್ಯಾಹ್ನ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಅವರ ಮನೆಯ ಬಳಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿಯಾಗಿರುವ ಹಾಲಕ್ಕಿ ಮಹಿಳೆ ತುಳಸಿಗೆ ಸುಮಾರು 86 ವರ್ಷ ವಯಸ್ಸು. ಚಿಕ್ಕ ವಯಸ್ಸಿನಲ್ಲಿಯೇ ಹಸೆಮಣೆ ಏರಿದ ಈಕೆಗೆ ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯವೇ ಉದ್ಯೋಗದ ಜೊತೆಗೆ ಹವ್ಯಾಸವೂ ಆಗಿ ಪರಿಣಮಿಸಿತು. ಇಲಾಖೆಯವರು ನೀಡುವ ಕೆಲಸ ವಾರಕ್ಕೆ 5 ದಿನಗಳು ಮಾತ್ರವಾದರೂ ಉಳಿದ 2 ದಿನಗಳಲ್ಲಿಯೂ ಯಾವುದೇ ಕೂಲಿ ದೊರೆಯದಿದ್ದರೂ ತನ್ನ ಕಾರ್ಯವನ್ನು ಉಚಿತವಾಗಿ ಮಾಡುತ್ತಿದ್ದಳು. ನರ್ಸರಿಯಲ್ಲಿ ಬೀಜವನ್ನು ನೆಟ್ಟು ಅವು ಸಸಿಯಾದ ಬಳಿಕ ಬೋಳಾಗಿರುವ ಕಾಡಿನ ಪ್ರದೇಶಕ್ಕೆ ಒಯ್ದು ನೆಡುವ ಕಾರ್ಯದಲ್ಲಿ ತಮ್ಮ ಜೀನವನ್ನೇ ಸವೆದವರು. ಇವರ ದುಡಿಮೆ ಹಾಗೂ ಪ್ರಾಮಾಣಿಕ ಸೇವೆಯನ್ನು ಗಮನಿಸಿ ಅರಣ್ಯ ಇಲಾಖೆಯು ಇವರ ಸೇವೆಯನ್ನು ಖಾಯಂಗೊಳಿಸಿತು. ಖಾಯಂ ಆದ ಬಳಿಕ 14 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದರು.
ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
(Tulsi Gowda) ಅರಣ್ಯದ ಎನ್‌ಸೈಕ್ಲೋಪೀಡಿಯಾ ಎಂದೇ ಕರೆಸಿಕೊಳ್ಳುತ್ತಿದ್ದ ತುಳಸಿ ಗೌಡ:
ತುಳಸಿಯ ಅರಣ್ಯ ತಿಳಿವಳಿಕೆ ಅಪಾರವಾಗಿತ್ತು. ಮುಖ್ಯವಾಗಿ ಸಾಗುವಾನಿಯನ್ನೇ ಹೆಚ್ಚಾಗಿ ಬೆಳೆಸುತ್ತಿದ್ದ ಇವರು ಇದರ ಹೊರತಾಗಿ ಬೀಟೆ, ಅತ್ತಿ, ಆಲ, ಹುನಾಲು, ಚೆಳ್ಳೆ, ಹೆಬ್ಬಲಸು, ನಂದಿ ಮತ್ತಿ ಮುಂತಾದ ಮರಗಳ ಎಲ್ಲ ಮಾಹಿತಿಗಳ ಅರಿವನ್ನು ಹೊಂದಿದ್ದರು. ಯಾವ ಯಾವ ಮರದಿಂದ ಏನೇನು ಪ್ರಯೋಜನ, ಯಾವ ಮರದಲ್ಲಿ ಯಾವಾಗ ಬೀಜ ಒಣಗುತ್ತದೆ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಮುಂತಾದ ಹಲವಾರು ಮಾಹಿತಿಗಳು ಅರಣ್ಯ ಇಲಾಖೆ ಸಿಬ್ಬಂದಿಗಿಂತ ಚೆನ್ನಾಗಿ ಇವರಿಗೆ ತಿಳಿದಿತ್ತು.
ಇದನ್ನೂ ಓದಿ; ಇ-ಖಾತೆ ಪಡೆಯುವವರ ಗಮನಕ್ಕೆ; ನಿಮಗಿಲ್ಲಿದೆ ಮುಖ್ಯ ಮಾಹಿತಿ, ಮಿಸ್ ಮಾಡ್ದೆ ಈ ಸುದ್ದಿ ಓದಿ
ಸಸಿಗಳ ಉತ್ಪಾದನೆಯಲ್ಲಿ ಇವರಿಗೆ ಇರುವ ಜ್ಞಾನ, ತೋರುವ ಪ್ರಯೋಗಶೀಲತೆ, ಗಿಡ ಮರ ಬೀಜಗಳ ಕುರಿತಾದ ಮಾಹಿತಿ ಅರಣ್ಯ ವಿಜ್ಞಾನಿಗಳನ್ನು ಕೂಡ ಬೆರಗುಗೊಳಿಸುತ್ತಿತ್ತು. 300ಕ್ಕೂ ಹೆಚ್ಚು ಪ್ರಭೇದದ ಮರಗಳ ಮಾಹಿತಿಯನ್ನು ತುಳಸಿ ಗೌಡ ಅವರು ನಿಂತ ಜಾಗದಲ್ಲೇ ವಿವರಿಸುವಷ್ಟು ಜ್ಞಾನ ಹೊಂದಿದ್ದರು. ಮರ ಬೆಳೆಸಲು ಅರಣ್ಯ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸಿದ್ದ ತುಳಸಿ ಗೌಡ ಅವರಿಗೆ ಆರಂಭದಲ್ಲಿ ಸಿಕ್ಕ ಕೂಲಿ ದಿನಕ್ಕೆ 1 ರೂ. 25 ಪೈಸೆ ಮಾತ್ರ. ಜಿಲ್ಲೆಯ ಅಂಕೋಲಾ, ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಇವರು ನಟ್ಟು ಬೆಳೆಸಿದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ಭೂತಾಯಿಯ ಒಡಲು ರಕ್ಷಿಸುತ್ತಿವೆ ಎನ್ನುವ ಮಾಹಿತಿ ಸಮಾಜಕ್ಕೆ ನೀಡಿದ್ದರು.
ಇದನ್ನೂ ಓದಿ; ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಪ್ರತಿ ತಿಂಗಳು 3,000!
ಕಾಡಂಚಿನ ಊರಿನಲ್ಲಿ ಬೆಳೆದ ತುಳಸಿ ಗೌಡ ಅವರು ಬಾಲ್ಯದಿಂದ ಜೀವನದ ಕೊನೆಗಾಲದವರೆಗೆ ಮರ, ಕಾಡುಗಳೊಂದಿಗೇ ಬದುಕಿದರು. ಮರಗಳೊಂದಿಗೆ ಇವರ ಅನುಭವ, ಜ್ಞಾನಕ್ಕೆ ಅನೇಕರು ಇವರನ್ನು ‘ಅರಣ್ಯದ ಎನ್‌ಸೈಕ್ಲೋಪೀಡಿಯಾ’ ಎಂದೂ ಸಹ ಕರೆಯುತ್ತಾರೆ.
ಇದನ್ನೂ ಓದಿ; ರೇಷನ್ ಕಾರ್ಡ್ʼನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಈ ದಾಖಲೆ ಕಡ್ಡಾಯ; ಇಲ್ಲಿದೆ ನೋಡಿ ಡಿಟೈಲ್ಸ್
ಹಳ್ಳಿಯಿಂದ ದಿಲ್ಲಿವರೆಗೆ ಪಯಣ:
ತುಳಸಿ ಗೌಡರ ಅರಣ್ಯ ಪ್ರೀತಿ ಕಂಡ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸುಕ್ರಿ ಬೊಮ್ಮಗೌಡರ ಅನಂತರ ಪದ್ಮಶ್ರೀ ಪಡದ ಹಾಲಕ್ಕಿ ಜನಾಂಗದ ಎರಡನೇ ಮಹಿಳೆ ಎಂಬ ಗೌರವ ತುಳಸಿ ಗೌಡರಿಗೆ ಇತ್ತು. ವೇದಿಕೆಯಲ್ಲಿ ಎಂದೂ ಭಾಷಣ ಮಾಡದ ತುಳಸಿ ಅವರು ಅರಣ್ಯದೊಂದಿಗೆ ಮಾತ್ರ ಮಾತನಾಡುತ್ತಿದ್ದರು. ಸದ್ದಿಲ್ಲದೆ ಸಾಧನೆ ಮಾಡಿದ ಮಹಿಳೆ ತುಳಸಿ ಯೌವ್ವನದಲ್ಲೇ ಪತಿಯನ್ನು ಕಳೆದುಕೊಂಡು, ಎರಡು ಪುಟ್ಟ ಮಕ್ಕಳ ಬೆಳಸುತ್ತಾ ದಿನಗೂಲಿಯಾಗಿ ಸಸ್ಯಪಾಲನ ಕೇಂದ್ರದಲ್ಲಿ ಕೆಲಸ ಮಾಡಿದರು. ಕೊನೆಯ ತನಕ ಅಂದರೆ ಅರವತ್ತು ವರ್ಷ ದಾಟಿದರೂ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದರು. ಅರಣ್ಯ ಕಾಪಾಡಿದರು. ಹಾಗಾಗಿ ಅವರನ್ನು ವೃಕ್ಷ ಮಾತೆ ಎಂದು ಕರೆಯಲಾಯಿತು.
ಸೇವೆಯ ಅವಧಿಯಲ್ಲಿ ತುಳಸಿಯ ಪರಿಸರ ಕಾಳಜಿಯನ್ನು ಗಮನಿಸಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಅವರಿಗೆ ದೊರೆತಿವೆ.

ಇದನ್ನೂ ಓದಿ; ಭಾರತೀಯ ಮಿಲಿಟರಿಯಲ್ಲಿ ಜಾಬ್ ಆಫರ್; 10th ಪಾಸಾದವರಿಗೆ ನೇರ ನೇಮಕಾತಿ ಹುದ್ದೆ
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳು ಕಡ್ಡಾಯ!
- ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಬೆಳೆ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ಇನ್ಪುಟ್ ಸಬ್ಸಿಡಿ ಜಮೆ!
- ರಾಜ್ಯದ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್; ಪಡಿತರ ಚೀಟಿ ವಿತರಣೆ ಆರಂಭ
- ರೇಷನ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ; ಇಂತಹವರಿಗೆ ಮುಂದಿನ ತಿಂಗಳಿನಿಂದ ಸಿಗಲ್ಲ ರೇಷನ್!
- ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಏನದು? ರೈತರೇ ಮಿಸ್ ಮಾಡ್ದೆ ಈ ಸುದ್ದಿ ಓದಿ
- ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
- ಪಡಿತರ ಚೀಟಿ ಹೊಂದಿರುವವರು ಓದಲೇಬೇಕು ಈ ಸುದ್ದಿ; ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ಕಾರ್ಡ್
- ಆಧಾರ್ ಕೇಂದ್ರದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ
- ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಈ ಯೋಜನೆಯಡಿ ಸಿಗಲಿದೆ ಸಾಲ ಸೌಲಭ್ಯ!; ಸಾಲಕ್ಕೆ ಯಾವುದೇ ಗ್ಯಾರಂಟಿಯ ಅಗತ್ಯವಿಲ್ಲ
- ಇನ್ಮುಂದೆ DL ಪಡೆಯುವುದು ಬಹಳ ಸುಲಭ; ಬರಲಿದೆ ಈ ಹೊಸ ನಿಯಮ
- ಪೋಷಕರ ಗಮನಕ್ಕೆ; ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಈ ದಾಖಲೆಗಳು ಕಡ್ಡಾಯ!
- ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ
- ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ನಷ್ಟ ಪರಿಹಾರ ಖಾತೆಗೆ ಜಮಾ!
- ಶ್ರೀಲಂಕಾದಿಂದ ಕಾಳು ಮೆಣಸು ಆಮದು; ಐದು ವಾರಗಳಲ್ಲಿ ಕುಸಿತ ಕಂಡ ಕರಿ ಚಿನ್ನ: ರೈತರಲ್ಲಿ ಆತಂಕ
- ಅಕ್ರಮ ಕಟ್ಟಡ ಮಾಲೀಕರಿಗೆ ಬಿಗ್ ಶಾಕ್; ಕಟ್ಟಡ ತೆರವುಗೊಳಿಸುವುದರ ಕುರಿತು ಮಖ್ಯ ಮಾಹಿತಿ ನೀಡಿದ ಡಿ.ಕೆ.ಶಿ






