Tomato: ಕುಸಿದ ಕೆಂಪು ಸುಂದರಿಯ ಬೆಲೆ

(Tomato:) ಕೆಂಪು ಸುಂದರಿ ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿದ್ದು, ರೈತರನ್ನು ಹೈರಾಣಾಗಿಸಿದೆ.


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಕಳೆದ ವಾರ ಒಂದು ಬಾಕ್ಸ್ ಟೊಮಟೊ ಬೆಲೆ ₹400 ರಿಂದ ₹500 ಇತ್ತು. ಈಗ ₹50 ರಿಂದ ₹70ಕ್ಕೆ ಕುಸಿದಿದೆ. ಒಂದು ಎಕರೆಗೆ ₹60 ಸಾವಿರದಿಂದ ₹80 ಸಾವಿರ ಖರ್ಚು ಮಾಡಿ ಬೆಳೆದ ಬೆಳೆಗೆ ಈಗಿನ ದರದಲ್ಲಿ ಕೂಲಿ ಹಣ ಸಹ ಸಿಗುವುದಿಲ್ಲ. ಸಾಗಿಸಿದರೆ ಸಾಗಣೆ ವೆಚ್ಚ ಅಧಿಕವಾಗುತ್ತದೆ. ಅದಕ್ಕೆ ಹೊಲದ ಪಕ್ಕದಲ್ಲೇ ಜಾನುವಾರುಗಳು ತಿನ್ನಲು ರಸ್ತೆಗೆ ಸುರಿಯಲಾಗುತ್ತಿದೆ ಎಂದಿದ್ದಾರೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್


ಕೆಲ ದಿನಗಳ ಹಿಂದೆ ಟೊಮೆಟೊ ದರ ಏರಿಕೆ ಕಂಡ ಬೆನ್ನಲ್ಲೇ ದಾವಣಗೆರೆ, ಬಳ್ಳಾರಿ ಹಾಗೂ ಇತರೆ ಜಿಲ್ಲೆಯ ರೈತರು ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಏಕಾಏಕಿ ಟೊಮೆಟೊ ಬೆಲೆ ಪಾತಾಳ ಕಂಡಿದ್ದರಿಂದ ರೈತರನ್ನು ಕಂಗಲಾಗಿಸಿದೆ.


ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ


ಮೊದಲಿನ ದರ ಇಂದಿನ ದರಕ್ಕೆ ಅಜಗಜಾಂತರ ವ್ಯತ್ಯಾಸ:
ಇಂದಿನ ದರಕ್ಕೂ ಹಳೇ ದರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.‌ ದರ ಹೆಚ್ಚಿದ್ದಾಗ ರೈತರ ಹೆಚ್ಚು ಟೊಮೆಟೊ ಹಾಕಿ, ಫಸಲು ಕೈಗೆ ಬರುವಷ್ಟರಲ್ಲಿ ದರ ಕುಸಿದಿದೆ.‌ ಈ ಹಿಂದೆ ಮಾರುಕಟ್ಟೆಗಳಲ್ಲಿ ಬಾಕ್ಸ್ ಒಂದಕ್ಕೆ 200 ರಿಂದ 300 ರೂ. ಮಾರಾಟ ಮಾಡಿದ್ದರು. ಆದರೆ ಇದೀಗ ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಒಂದು ಬಾಕ್ಸ್ ಬೆಲೆ ಕೇವಲ 30 ರಿಂದ 50 ರೂ. ಕೇಳಿದ್ದಾರೆ. ಮೊದಲಿನ ದರಕ್ಕೂ ಇಂದಿನ ದರಕ್ಕೆ ಅಜಗಜಾಂತರ ವ್ಯತ್ಯಾಸ ಇದೆ ಎನ್ನುತ್ತಾರೆ. ರೈತರು.

Tomato: ಕುಸಿದ ಕೆಂಪು ಸುಂದರಿಯ ಬೆಲೆ
Tomato: ಕುಸಿದ ಕೆಂಪು ಸುಂದರಿಯ ಬೆಲೆ

ಇದನ್ನೂ ಓದಿ; 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಇತ್ತೀಚಿನ ಜನಪ್ರಿಯ ಸುದ್ದಿಗಳು