Subsidy 25: ಶೃಂಗೇರಿ ರೈತರ ಗಮನಕ್ಕೆ: ವಿವಿಧ ಯೋಜನೆಯಡಿಯಲ್ಲಿ ಸಿಗಲಿದೆ ಸಹಾಯಧನ

(Subsidy 25:) ಶೃಂಗೇರಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನಿಸಿದ್ದು, ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ.


ನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!


2025-26 ನೇ ಸಾಲಿನಲ್ಲಿ ಶೃಂಗೇರಿ ತಾಲ್ಲೂಕಿನ ರೈತರಿಗೆ ವಿವಿಧ ಯೋಜನೆಗಳಡಿಯಲ್ಲಿ ವಿವಿಧ ಉದ್ದೇಶಗಳಿಗೆ ಇಲಾಖಾ ಮಾರ್ಗಸೂಚಿಯಂತೆ ತೋಟಗಾರಿಕೆ ಕಾರ್ಯಕ್ರಮಗಳಿಗೆ ಸಹಾಯಧನ ನೀಡಲಾಗುವುದು.

ತಾಳೆಬೆಳೆ, ತರಕಾರಿ ಕಿಟ್, ಅಡಕೆಯಲ್ಲಿ ಕಾಳುಮೆಣಸು ವಿಸ್ತರಣೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸೋಲಾ‌ರ್ ಪಂಪ್‌ಸೆಟ್, ಕೃಷಿ ಹೊಂಡ, ತೋಟಗಾರಿಕೆಯಲ್ಲಿ ಯಾಂತ್ರಿಕರಣ, ತೋಟಗಾರಿಕೆ ಬೆಳೆ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ, ಹನಿ ಮತ್ತು ತುಂತುರು ನೀರಾವರಿ, ಅಂಗಾಂಶ ಬಾಳೆ ಪ್ರದೇಶ ವಿಸ್ತರಣೆ, ಕಂದು ಬಾಳೆ ಪ್ರದೇಶ ವಿಸ್ತರಣೆ, ಪಾಲಿಮನೆ ಬೆಳೆ ಪದ್ದತಿ, ಟ್ರಾಕ್ಟರ್, ಮಧುವನ ಮತ್ತು ಜೇನು ಸಾಕಾಣಿಕೆ ಮತ್ತಿತರ ಯೋಜನೆಗೆ ಅರ್ಜಿ ಆಹ್ವಾನಿಸಿದೆ.


ನ್ನೂ ಓದಿ:  BPL ಕಾರ್ಡ್‌ ಹೊಂದಿರುವ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್‌ ಶಿಪ್; PUC ಪಾಸ್‌ ಆಗಿರುವ ವಿದ್ಯಾರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ


(Subsidy 25: ) ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
16-06-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅರ್ಜಿ ಸಲ್ಲಿಕೆಗೆ ಜೂ.21 ಕೊನೆ ದಿನವಾಗಿದೆ.

ಬೇಕಾಗುವ ದಾಖಲಾತಿಗಳು ಯಾವುದು?:
* ಅರ್ಜಿ ನಮೂನೆ- (ಕಛೇರಿಯಿಂದ ನೀಡಲಾಗುವುದು.)
* ಆಧಾರ್ ಸಂಖ್ಯೆ
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಇತ್ತೀಚಿನ RD ನಂಬರ್ ಇರುವ ಜಾತಿ ಪ್ರಮಾಣಪತ್ರದ ನಕಲನ್ನು ಲಗತ್ತಿಸಬೇಕು.
* ಇತರೆ ದಾಖಲೆ


ನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ


(Subsidy 25: ) ಅರ್ಹತೆ:
* ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಯೋಜನೆ (ಎಸ್-03) ಯನ್ನು ಹೊರತುಪಡಿಸಿ ಬೇರೆ ಯೋಜನೆಗಳಿಗೆ ಯಾವುದಾದರು ಒಂದು ಯೋಜನೆಗೆ ಮಾತ್ರ ಒಬ್ಬ ಫಲಾನುಭವಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
* ಬಿ.ಪಿ.ಎಲ್ ಕಾರ್ಡ್ ದಾರರಿಗೆ MGNREGA ಯೋಜನೆಯಡಿ ಕಾಳುಮೆಣಸಿನ ತೋಟಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿರುವುದರಿಂದ ಬಿ.ಪಿ.ಎಲ್ ಕಾರ್ಡ್ ಇಲ್ಲದವರಿಗೆ ಕಾಳುಮೆಣಸು ಸಂಬಂಧದ ಮೇಲಿನ ಯೋಜನೆಗಳಲ್ಲಿ ಆದ್ಯತೆ ನೀಡಲಾಗುವುದು.
* ಕಳೆದ ಮೂರು ವರ್ಷಗಳಲ್ಲಿ ಮೇಲಿನ ಯಾವುದಾದರೂ ಯೋಜನೆಯಲ್ಲಿ ಸವಲತ್ತನ್ನು ಪಡೆದಿದ್ದರೆ ಮತ್ತು ಸಂಬಂಧಿಸಿದ ಅದೇ ರೀತಿ ಯೋಜನೆಯಲ್ಲಿ ಸವಲತ್ತನ್ನು ಪಡೆದಿದ್ದರೆ ಈ ಸಾಲಿನಲ್ಲಿ ಮತ್ತೆ ಅದೇ ರೀತಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
* SMAM -ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸಲ್ಲಿಸುವವರು ದೋಟಿಯನ್ನು ಹೊರತು ಪಡಿಸಿ ಕಡ್ಡಾಯವಾಗಿ ತಾವು ಖರೀದಿಸುವ ಯಂತ್ರದ ಕೊಟೇಷನ್ (ದರಪಟ್ಟಿ) ನೀಡುವುದು.
* ದಿನಾಂಕ 13-06-2025 ರಿಂದ ನಿಗದಿತ ಅರ್ಜಿಯನ್ನು ವಿತರಿಸಲಾಗುತ್ತದೆ.
* ಕಳೆದ ಸಾಲಿನ ಅಡಿಕೆ ಹಳದಿ ಎಲೆ ರೋಗಪೀಡಿತ ತೋಟಗಳಲ್ಲಿ ಪರ್ಯಾಯ ಬೆಳೆ ಕಾರ್ಯಕ್ರಮದಲ್ಲಿ ಸಹಾಯಧನ ಪಡೆದ ಬೆಳೆಗೆ ಅಥವಾ ಇತರೆ ಸಮನಾಂತರ ಯೋಜನೆಗಳಲ್ಲಿ ಸಹಾಯಧನ ಪಡೆದ ಅದೇ ಬೆಳೆಗೆ ಈ ಸಾಲಿನಲ್ಲಿ ಸಹಾಯಧನಕ್ಕಾಗಿ ಪರಿಗಣಿಸುವುದಿಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಶೃಂಗೇರಿ ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

Subsidy 25: ಶೃಂಗೇರಿ ರೈತರ ಗಮನಕ್ಕೆ: ವಿವಿಧ ಯೋಜನೆಯಡಿಯಲ್ಲಿ ಸಿಗಲಿದೆ ಸಹಾಯಧನ
Subsidy 25: ಶೃಂಗೇರಿ ರೈತರ ಗಮನಕ್ಕೆ: ವಿವಿಧ ಯೋಜನೆಯಡಿಯಲ್ಲಿ ಸಿಗಲಿದೆ ಸಹಾಯಧನ

ಇತ್ತೀಚಿನ ಜನಪ್ರಿಯ ಸುದ್ದಿಗಳು (Subsidy 25:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?