Share Market Kannada: ನಿಫ್ಟಿ ಸೂಚ್ಯಾಂಕದಲ್ಲಿ ಇನ್ನಷ್ಟು ಕುಸಿತದ ಸಾಧ್ಯತೆ..!?

(Share Market Kannada) ನಿನ್ನೆಯೇ ಚರ್ಚಿಸಿದಂತೆ ನಿಫ್ಟಿಯುಲ್ಲಿ ಉತ್ತಮ ಬುಲ್ಲಿಶ್ ಸ್ವಿಂಗ್ ರಿವರ್ಸಲ್ ಕಂಡು ಬಂದು ಈದಿನ ಗ್ಯಾಪ್ ಅಪ್ ಓಪನ್ ಆದರೂ ಸಹ ಕ್ಲೋಸಿಂಗ್ ಅಷ್ಟೇನೂ ಸ್ಟ್ರಾಂಗ್ ಆಗಲಿಲ್ಲ. ಗ್ಯಾಪ್ ಅಪ್ ಓಪನಿಂಗ್ ಮಾಡಿದ ನಿಫ್ಟಿ 22500ರ ಮೇಜರ್ ಸಪೋರ್ಟ್ ರೇಂಜನ್ನು ರೀ ಟೆಸ್ಟ್ ಮಾಡಿ, 22500ರ ಲೆವೆಲ್ ಹತ್ತಿರ ಫೇಕ್ ಬ್ರೇಕ್ ಡೌನ್ ಮಾಡಿ ಮತ್ತೆ 22550 ರಲ್ಲಿ ಕೆಳಗಿನ ಚಾರ್ಟ್ ನಲ್ಲಿ ತೋರಿಸಿದಂತೆ ಕ್ಲೋಸ್ ನೀಡಿದೆ.


ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!


Share Market Kannada: ನಿಫ್ಟಿ ಸೂಚ್ಯಾಂಕದಲ್ಲಿ ಇನ್ನಷ್ಟು ಕುಸಿತದ ಸಾಧ್ಯತೆ..!?

ನಿಫ್ಟಿ 22600ರ ಮೇಲೆ ಸ್ಟ್ರಾಂಗ್ ಕ್ಲೋಸ್ ನೀಡುವವರೆಗೂ ಬುಲ್ಲಿಶ್ ಟ್ರೇಡ್ ಗೆ ಉತ್ತಮ ಸಮಯವಲ್ಲ ಎಂದು ನಿನ್ನೆಯೇ ಚರ್ಚಿಸಲಾಗಿತ್ತು. ಹಾಗೆಯೇ ಮೇಲಿನ ಚಾರ್ಟ್ ನಲ್ಲಿ ತೋರಿಸಿರುವಂತೆ ನಿಫ್ಟಿಯ ಓಪನ್ ಮತ್ತು ಕ್ಲೋಸ್ ಎರಡು ಸಹ ಆಂಗ್ಯುಲರ್ ಹಾಗು ಹಾರಿಜಾಂಟಲ್ ಟ್ರೆಂಡ್ ಲೈನ್ ನಡುವೆಯೇ ಆಗಿದೆ. ನಿಫ್ಟಿಯ ಇವತ್ತಿನ ಟ್ರೇಡ್ ಪುಟ್ ಆಪ್ಷನ್ ಸೆಲ್ಲರ್ ಗಳ ದಿನವಾಗಿತ್ತು.

ನಿಫ್ಟಿಯ ಇಂದಿನ ಪ್ರೈಸ್ ಆಕ್ಷನ್ ನೋಡಿದರೆ ನಿಫ್ಟಿ ಇನ್ನೂ ಸಹ 150-200 ಅಂಕಗಳ ಕುಸಿತ ಕಾಣುವ ಸಾಧ್ಯತೆ ಇದೆ ಎನ್ನಬಹುದು. ಎಲಿಯಟ್ ವೇವ್ ಸಿದ್ದಂತಾದ ಪ್ರಕಾರವಾಗಿ ನೋಡುವುದಾರೆ 22465ರ ಹಂತದಿಂದ ಕೆಳಗೆ ಟ್ರೇಡ್ ಆದಲ್ಲಿ ಎಲಿಯಟ್ ನ 5th ವೇವ್ ಸಂಪೂರ್ಣಗೊಳ್ಳುತ್ತದೆ. ಆನಂತರದಲ್ಲಿ ನಿಫ್ಟಿಯು ಸಂಪೂರ್ಣ ಬುಲ್ಲಿಶ್ ಮೋಡ್ ಕಂಡು ಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕುಸಿತವು ತುಂಬಾ ಕಡಿಮೆ ಅವಧಿಯಲ್ಲಿ ನಡೆದು ಮತ್ತೆ ಪ್ರೈಸ್ ಬುಲ್ಲಿಶ್ ಕಡೆ ತಿರುಗುವ ಸಾಧ್ಯತೆ ಇದೆ.


ಇದನ್ನೂ ಓದಿ: ರೈತರೇ ಗಮನಿಸಿ..; ಬರ ಪರಿಹಾರ ಪಡೆಯಲು “ಫೂಟ್ಸ್ ಐಡಿ” ಕಡ್ಡಾಯ..!


ಆಪ್ಷನ್ ಚೈನ್ ಅನಾಲಿಸಿಸ್:
ನಿಫ್ಟಿಯ ಕಾಲ್ ಸೈಡ್ ನಲ್ಲಿ ಲಾಂಗ್ ಬಿಲ್ಡ್ ಅಪ್ ಇದ್ದು, ಪುಟ್ ಸೈಡ್ ನಲ್ಲಿ ಅತಿ ಹೆಚ್ಚು ಸೆಲ್ಲರ್ ಕುಳಿತಿದ್ದಾರೆ. ಸೋಮವಾರದ ಮೊದಲನೇ ಟ್ರೇಡಿಂಗ್ ಸೆಶನ್ ಬುಲ್ ಗಳು ಟ್ರ್ಯಾಪ್ ಆಗುವ ಸಾಧ್ಯತೆ ಕಂಡುಬರುತ್ತಿದೆ.

ಮೊನ್ನೆ ಹೇಳಿದ್ದ ಈ ಷೇರುಗಳ ಕಥೆ ಏನಾಯ್ತು:
ಮೊನ್ನೆಯ ಬರಹ ದಲ್ಲಿ NHPC ಷೇರಿನ ಬಗ್ಗೆ ಚರ್ಚಿಸಲಾಗಿತ್ತು. 101 ರೂಪಾಯಿಯಲ್ಲಿ ಖರೀದಿಗೆ ಉತ್ತಮ ಎಂದು ಚರ್ಚಿಸಲಾಗಿತ್ತು. ಕೇವಲ ಎರಡೇ ದಿನ ಈ ಷೇರು 6% ನಷ್ಟು ಗಳಿಕೆಯನ್ನು ನೀಡಿದೆ. ಇದರ ಶಾರ್ಟ್ ಟರ್ಮ್ ಟಾರ್ಗೆಟ್ 115 ಆಗಿರಲಿದೆ. ಹಾಗೆಯೆ Vedanta Limited 449ರ ಕ್ಲೋಸ್ ನೀಡಿದ್ದು, ಖರೀದಿಗೆ ಇನ್ನಷ್ಟು ಸ್ಟ್ರಾಂಗ್ ಪ್ರೈಸ್ ಆಕ್ಷನ್ ಕಂಡು ಬರಬೇಕಿದೆ.

 STUDY MORE TRADE LESS 

(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)


ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6. ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
    7. ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
    8. ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್;  ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
    9. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    10. ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ