Sringeri Police Station: ವರಮಹಾಲಕ್ಷ್ಮಿ ಹಬ್ಬದಂದು ಠಾಣೆಯಲ್ಲೇ ಸೀಮಂತ ಕಾರ್ಯಕ್ರಮ

Sringeri Police Station:  ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸದಾ ಕೇಸು, ಕ್ರೈಮು ಎಂದು ಗಂಭೀರ ವಾತಾವರಣ ಇರುತ್ತಿದ್ದ ಠಾಣೆಯಲ್ಲಿ ನಿನ್ನೆ ಹಬ್ಬದ ವಾತಾವರಣ ನೆಲೆಸಿತ್ತು. ಕರ್ತವ್ಯಕ್ಕಾಗಿ ಕುಟುಂಬದಿಂದ ದೂರವಿರುವ ಸಿಬ್ಬಂದಿಗೆ ಠಾಣೆಯ ಸಹೋದ್ಯೋಗಿಗಳೇ ಸಹೋದರರಾಗಿದ್ರು.. ಗರ್ಭಿಣಿಯಾಗಿದ್ದ ಪಿಸಿ ರುಬಿನಾ ಅವರಿಗೆ ಠಾಣೆಯಲ್ಲೇ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.. ಇಂತಹ ವಿಶೇಷ ಸನ್ನಿವೇಶಕ್ಕೆ ಪಾತ್ರವಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆ

ಇದನ್ನೂ ಓದಿ; ಶೃಂಗೇರಿ: ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಮರ ಕಡಿತ?;  ಕಾರ್ಯಾಚರಣೆಗಿಳಿದ ವನ್ಯಜೀವಿ ಸಂರಕ್ಷಣಾ ಇಲಾಖೆ

ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕೆಲಸ ನಿರ್ವಹಿಸುತ್ತಿರುವ ರುಬೀನಾ ಬಾನು ಗರ್ಭಿಣಿಯಾಗಿದ್ದು ಹೆರಿಗೆ ಸುಖಕರವಾಗಲಿ ಎಂದು ಹಾರೈಸಿ, ಠಾಣೆಯ ಸಿಬ್ಬಂದಿಗಳು ಬಾಗೀನ ಅರ್ಪಿಸಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಸದಾ ಕಾನೂನು ಸುವ್ಯವಸ್ಥೆ ಕಾಪಾಡುವ ಜಂಜಾಟದಲ್ಲಿಯೇ ಮುಳುಗಿರುವ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು    


Program in Sringeri Police Station

ಮಹಿಳಾ ಪೇದೆ ರುಬೀನಾ ಬಾನು ಶೃಂಗೇರಿ ಪೊಲೀಸ್ ಠಾಣೆಯಲ್ಲಿ (Sringeri Police Station) ಕರ್ತವ್ಯ ನಿರ್ವಹಿಸುತ್ತಿದ್ದು, ಆಕೆಯ ಪತಿ ವಿನಾಯಕ್ ಕೂಡ ಕೆರೆಕಟ್ಟೆಯ ಎ ಎನ್ ಎಫ್ (Anti Naxal Force) ಕ್ಯಾಂಪ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಕೂಡ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಇನ್ನೂ ವಿಶೇಷವಾಗಿದೆ.

ಯಾವಾಗಲೂ ಕರ್ತವ್ಯದಲ್ಲೇ ಇರುವ ನಮಗೆ ಪೊಲೀಸ್ ಠಾಣೆಯೇ ಮನೆ ಇದ್ದಹಾಗೆ. ಇಲ್ಲಿರುವ ಸಿಬ್ಬಂದಿಗಳು ನಮ್ಮ ಕುಟುಂಬವಿದ್ದಂತೆ. ಠಾಣೆಯಲ್ಲಿ ಸೀಮಂತ ಮಾಡಿರುವುದು ನನ್ನ ತಾಯಿಯ ಮನೆಯಲ್ಲೇ ಸೀಮಂತ ಮಾಡಿದಷ್ಟು ಖುಷಿ ನೀಡಿದೆ‌. ಈ ಭಾವನಾತ್ಮಕ ಕ್ಷಣಕ್ಕೆ ನಾನು ಚಿರಖುಣಿಯಾಗಿರುತ್ತೇನೆ. – ರುಬೀನಾ ಬಾನು, ಮಹಿಳಾ ಪೇದೆ

ಇದನ್ನೂ ಓದಿ; ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ

ಕಾರ್ಯಕ್ರಮದಲ್ಲಿ ಶೃಂಗೇರಿ ಪೊಲೀಸ್ ಠಾಣೆಯ ಪಿಎಸ್ ಐ ಭರಮಪ್ಪ ಬೆಳಗಲಿ, ಸಿಬ್ಬಂದಿಗಳಾದ ಎಎಸ್ ಐ ಪ್ರಸನ್ನ ಕುಮಾರ್, ಹೆಚ್ ಸಿ ಸದಾಶಿವ್, ಕಾಂತರಾಜು ಹಾಗು ಇನ್ನಿತರರು ಇದ್ದರು.

ಇದನ್ನೂ ಓದಿ; ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?;  ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಚಿಕ್ಕಮಗಳೂರು: ಎತ್ತು ತಿವಿದು ಯುವ ರೈತ ಸಾವು
  2. ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ ಪ್ರಕರಣ; ನಾಲ್ವರು ಅಧಿಕಾರಿಗಳ ಅಮಾನತು
  3. ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು;  ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು
  4. ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!;  ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
  5. ಚಿಕ್ಕಮಗಳೂರು: ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ
  6. ಚಂದ್ರಯಾನ-3 ಯಶಸ್ವಿ; ಚಿಕ್ಕಮಗಳೂರಿನಲ್ಲಿ ಬಿಜೆಪಿ ಸಂಭ್ರಮಾಚರಣೆ
  7. ಆಲ್ದೂರು: ಮನೆ ಬಿಟ್ಟು ನಾಪತ್ತೆಯಾಗಿದ್ದ ಯುವತಿ ಬೆಂಗಳೂರಿನಲ್ಲಿ ಪತ್ತೆ
  8. ಚಿಕ್ಕಮಗಳೂರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಖಾಸಗಿಯವರಿಗೆ ಪರಭಾರೆ ಮಾಡಿದ ತಹಸಿಲ್ದಾರ್‌
  9. ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿಗಳು ಯಾವುದು ಗೊತ್ತೇ?
  10. ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?;  ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
  11. ಕಡೂರು ತಹಸೀಲ್ದಾರ್ ಆಗಿದ್ದ ಉಮೇಶ ಅಂದರ್; ಏನಿದು ಪ್ರಕರಣ? ಇಲ್ಲಿದೆ ಡಿಟೈಲ್ಸ್
  12. ಚಂದ್ರಯಾನ ಯಶಸ್ವಿಗೆ ಶಕಟಪುರಂ ಶ್ರೀಗಳಿಂದ ಶುಭ ಹಾರೈಕೆ; ಮೋದಿ ಕುರಿತಂತೆ ಸ್ವಾಮೀಜಿ ಹೇಳಿದ್ದೇನು..?
  13. darshan toogudeepa: ಕೊನೆಗೂ ಮಾಧ್ಯಮದರ ಕ್ಷಮೆ ಕೇಳಿದ ನಟ ದರ್ಶನ್; ಅಷ್ಟಕ್ಕೂ d boss ಹಾಗೂ ಮೀಡಿಯಾದವರ ಮಧ್ಯೆ ಏನಾಗಿತ್ತು?
  14. ಶೃಂಗೇರಿ: ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಮರ ಕಡಿತ?;  ಕಾರ್ಯಾಚರಣೆಗಿಳಿದ ವನ್ಯಜೀವಿ ಸಂರಕ್ಷಣಾ ಇಲಾಖೆ
  15. ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಇಡಿ | 25-08-2023
  16. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-25.08.2023
  17. ಚಂದ್ರಯಾನ 3 ಯಶಸ್ವಿಯಾದರೆ ಏನು ಲಾಭ; ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ
  18. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ
  19. ಶಾಲೆಗೆ ಬಾರದ ಮುಖ್ಯಶಿಕ್ಷಕರು, ಮಕ್ಕಳ ವಿದ್ಯಾಭ್ಯಾಸ ಕುಂಠಿತ. ಗ್ರಾಮಸ್ಥರ ಪ್ರತಿಭಟನೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇