Shimogga News: ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಎಂಟೂವರೆ ವರ್ಷದ ಬಾಲಕ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ. ಬಳಿಕ ಕರ್ತವ್ಯದ ಕುರಿತು ಸಿಬ್ಬಂದಿಗೆ ಸೂಚನೆಗಳನ್ನು ನೀಡಿದ. ಕಳ್ಳನಿಗೆ ಬುದ್ದಿವಾದ ಹೇಳಿ, ಸರಿ ದಾರಿಯಲ್ಲಿ ನಡೆಯುವಂತೆ ವಾರ್ನಿಂಗ್ ನೀಡಿದ.
ಇದನ್ನೂ ಓದಿ; ಚಿಕ್ಕಮಗಳೂರು: ಸಿಸಿಟಿವಿ ನಿಷ್ಕ್ರಿಯಗೊಳಿಸಿ ATM ನಿಂದ 14 ಲಕ್ಷ ದೋಚಿದ ಖದೀಮರು
ಇದು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯ ಮಾನವೀಯತೆಗೆ ಸಾಕ್ಷಿಯಾದ ರಿಯಲ್ ಸ್ಟೋರಿ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಆಸೆಯನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಪೂರೈಸಿದ್ದಾರೆ. ಕೇವಲ ಒಂದು ಗಂಟೆಯ ಸಮಯಕ್ಕೆ ಮಾತ್ರ ಸಾಂಕೇತಿಕವಾಗಿ ಇನ್ಸ್ಪೆಕ್ಟರ್ ಕುರ್ಚಿಯನ್ನು ಅಲಂಕರಿಸಿದ. ಪೊಲೀಸ್ ಸಿಬ್ಬಂದಿಗಳಿಗೆ ಯೋಗಕ್ಷೇಮ ವಿಚಾರಿಸಿ ರಜೆ ಮಂಜೂರು ಮಾಡಿದ. ಕಳ್ಳ ಕಾಕರಿಗೆ ಆವಾಜ್ ಹಾಕಿ ಕಳ್ಳತನ ಬಿಟ್ಟು ಕೆಲಸ ಮಾಡಿ ಎಂದು ಸಲಹೆ ನೀಡಿದ ಬಾಲಕ ಇನ್ಸ್ಪೆಕ್ಟರ್.
ಇದನ್ನೂ ಓದಿ; ಚಿಕ್ಕಮಗಳೂರು: ವಿದ್ಯುತ್ ಕೈ ಕೊಡಲು ಇದೇ ಕಾರಣವಂತೆ
ಹೌದು ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ಇನ್ಸ್ಪೆಕ್ಟರ್ ಆದ ಎಂಟೂವರೆ ವರ್ಷದ ಬಾಲಕ ಅಜಾನ್ ಖಾನ್ ಸಿನಿಮಾ ರೀತಿಯ ಕಥೆ. ಶಿವಮೊಗ್ಗ ಹೊರವಲಯದ ಸೂಳೇ ಬೈಲು ಬಡಾವಣೆಯ ಬಾಲಕ ಆಜಾನ್ ಖಾನ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ. ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಬಳಲುತ್ತಿದ್ದ ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇತ್ತು. ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ಆಯಾಜ್ ಖಾನ್ ನನ್ನು ಒಂದು ಗಂಟೆ ಮಟ್ಟಿಗೆ ಇನ್ಸ್ಪೆಕ್ಟರ್ ಮಾಡಿದ್ದರು.
ಮಗನ ಆಸೆಯನ್ನು ಈಡೇರಿಸಿದ ತಂದೆ:
ಮಗನ ಆಸೆಯನ್ನು ಈಡೇರಿಸಿದ ಖುಷಿ ತಂದೆ ತಬ್ರೇಜ್ ಖಾನ್ ಹಾಗೂ ತಾಯಿ ನಗ್ಮಾ ಖಾನ್ ಗಾಗಿತ್ತು. ನನ್ನ ಮಗನಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆ ಇದೆ. ಎಷ್ಟೋ ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇಂತಹ ಕಾಯಿಲೆ ಬರಲಿದೆಯಂತೆ. ಆತನ ಹೃದಯ ಬೆಳೆದಿಲ್ಲ. ವೈದ್ಯರು, ತಜ್ಞರ ಬಳಿ ತೋರಿಸಿದಾಗ ಶಸ್ತ್ರಚಿಕಿತ್ಸೆ ಮಾಡಲು ಆಗುವುದಿಲ್ಲ. ಹೃದಯ ಮತ್ತು ಶಾಸ್ವಕೋಶದ ಕಸಿ ಮಾಡಬೇಕು ಎಂದಿದ್ದಾರೆ. ಆತನಿಗೆ ಪೊಲೀಸ್ ಆಗಬೇಕು ಅನ್ನುವ ಆಸೆಯನ್ನು ಪೂರೈಸಿದ್ದೇನೆ ಎಂದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬ್ರಿಟಿಷ್ ಕಾಲದ ಕಾನೂನು ಬದಲು; ಹೊಸ ಕಾನೂನಿನಲ್ಲಿ ಲವ್ ಜಿಹಾದ್ ಗೆ ಬ್ರೇಕ್ ಬೀಳುತ್ತಾ?
- ಚಿಕ್ಕಮಗಳೂರು: ಕೈ ಶಾಸಕನಿಂದ ಮಹಿಳಾ ಪೊಲೀಸ್ ಪೇದೆಯ ಮೇಲೆ ದೌರ್ಜನ್ಯ; ಯಾರು ಈ ಕೈ ಶಾಸಕ
- ಸೋಂಪು-ಕಲ್ಲುಸಕ್ಕರೆ ಕಾಂಬಿನೇಷನ್; ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ಗೊತ್ತಾ?
Shimogga News: ಒಟ್ಟಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಕ್ಕೆ ಬಾಲಕ ಖುಷಿ ಪಟ್ಟರೆ ಮಗನ ಆಸೆ ಈಡೇರಿಸಿದ ಸಮಾಧಾನ ಪೋಷಕರಲ್ಲಿತ್ತು. ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್ಪೆಕ್ಟರ್ ಮಾಡಿದ್ದೇವೆ. ಬಾಲಕ ತುಂಬ ಖುಷಿ ಪಟ್ಟ ವಿಶೇಷ ಸಂದರ್ಭಕ್ಕೆ ಜೊತೆಯಾದ ಧನ್ಯತೆ ಪೊಲೀಸರಲ್ಲಿತ್ತು.




ಪ್ರಮುಖ ಸುದ್ದಿಗಳನ್ನು ಓದಿ
- ನೀವು ಅತಿಯಾಗಿ ನಿದ್ದೆ ಮಾಡುತ್ತೀರಾ?; ಹಾಗದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು
- ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಭೀಕರ ಅಪಘಾತ; ಒಬ್ಬನ ಸ್ಥಿತಿ ಗಂಭೀರ
- ಕೊಪ್ಪ: ಮರಕ್ಕೆ ಡಿಕ್ಕಿಯಾದ ಕಾರು | ಸ್ಥಳದಲ್ಲೇ ವ್ಯಕ್ತಿ ಸಾವು
- ಚಿಕ್ಕಮಗಳೂರು: ಕೈ ಶಾಸಕನಿಂದ ಮಹಿಳಾ ಪೊಲೀಸ್ ಪೇದೆಯ ಮೇಲೆ ದೌರ್ಜನ್ಯ; ಯಾರು ಈ ಕೈ ಶಾಸಕ
- ಚಿಕ್ಕಮಗಳೂರು: ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ; ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು
- ಬ್ರಿಟಿಷ್ ಕಾಲದ ಕಾನೂನು ಬದಲು; ಹೊಸ ಕಾನೂನಿನಲ್ಲಿ ಲವ್ ಜಿಹಾದ್ ಗೆ ಬ್ರೇಕ್ ಬೀಳುತ್ತಾ?
- ರೇಪಿಸ್ಟ್ಗಳಿಗೆ ಎಷ್ಟು ವರ್ಷ ಜೈಲು ಗ್ಯಾರಂಟಿ?; ಕೇಂದ್ರದಿಂದ ಮಹತ್ವದ ನಿರ್ಧಾರ
- ಮೂಡಿಗೆರೆ: ಸರ್ಕಾರಿ ಬಸ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು: ಇನ್ನೋರ್ವನ ಸ್ಥಿತಿ ಗಂಭೀರ
- ಸ್ಮಾರ್ಟ್ಫೋನ್ ಹ್ಯಾಕ್ ಆಗಿದೆಯೇ? ತಿಳಿಯುವುದು ಹೇಗೆ..?; ಹ್ಯಾಕ್ ಆಗಿದ್ದರೆ ಏನು ಮಾಡಬೇಕು?
- ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಕಿಡ್ನಿ ಸಮಸ್ಯೆ ಶುರುವಾಗಿದೆ ಎಂದರ್ಥ!; ಕಿಡ್ನಿ ಸಮಸ್ಯೆಯ ಈ ಆರಂಭಿಕ ಲಕ್ಷಣಗಳನ್ನು ತಿಳಿಯಿರಿ
- ಸೋಂಪು-ಕಲ್ಲುಸಕ್ಕರೆ ಕಾಂಬಿನೇಷನ್; ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ಗೊತ್ತಾ?
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply