SD Scholarships: puc ಪಾಸ್‌ ಆದ ವಿದ್ಯಾರ್ಥಿಗೆ 50,000 ಸ್ಕಾಲರ್ಶಿಪ್

(SD Scholarships) ದ್ವಿತೀಯ ಪಿಯುಸಿ ಪಾಸ್‌ ಆದ ವಿದ್ಯಾರ್ಥಿಗಳಿಗೆ 2024-25 ನೇ ಸ್ವಾಮಿ ದಯಾನಂದ್ ಮೆರಿಟ್ ಇಂಡಿಯಾ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ; SC/ST ಸಮುದಾಯದ ವಿದ್ಯಾರ್ಥಿಗಳ ಗಮನಕ್ಕೆ; ಈ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ


ಎಂಜಿನಿಯರಿಂಗ್, ಮೆಡಿಕಲ್ ಮತ್ತು ಆರ್ಕಿಟೆಕ್ಚರ್ ವಿಷಯಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸ್ವಾಮಿ ದಯಾನಂದ್ ಎಜುಕೇಶನ್ ಫೌಂಡೇಶನ್ (ಎಸ್ಡಿಇಎಫ್)ನ ಉಪಕ್ರಮವಾಗಿದೆ.


ಇದನ್ನೂ ಓದಿ; ಶಾಲೆಗಳ ಶೈಕ್ಷಣಿಕ ಪ್ರವಾಸ ರದ್ದು!; ಇಲ್ಲಿದೆ ಮಹತ್ವದ ಮಾಹಿತಿ…


ಅರ್ಜಿ ಸಲ್ಲಿಸಲು ಈ ಅರ್ಹತೆ ಹೊಂದಿರುವುದು ಕಡ್ಡಾಯ:
* ಭಾರತದಾದ್ಯಂತ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಅಥವಾ ಆರ್ಕಿಟೆಕ್ಚರ್ ವಿಷಯಗಳಿಗೆ ದಾಖಲಾಗಿದ್ದು, ಮೊದಲ ಮತ್ತು ಎರಡನೆಯ ವರ್ಷಗಳಲ್ಲಿರುವ ವಿದ್ಯಾರ್ಥಿಗಳಿಗೆ ಲಭ್ಯವಿದೆ.
* ಮೊದಲ ವರ್ಷದಲ್ಲಿರುವ ಅಭ್ಯರ್ಥಿಗಳು ತಮ್ಮ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 80% ಗಳಿಸಿರಬೇಕು
* ಎರಡನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳು ಕನಿಷ್ಠ ಸಿಜಿಪಿಎ 8.0 ಹೊಂದಿರಬೇಕು.
* ಅರ್ಹ ವಿದ್ಯಾರ್ಥಿಗಳು 30,000ಕ್ಕಿಂತ ಕೆಳಗಿನ ಜೆಇಇ/ನೀಟ್ ಎಐಆರ್ ಹೊಂದಿರಬೇಕು.
* ಕುಟುಂಬದ ವಾರ್ಷಿಕ ಅದಾಯ ರೂ.15 ಲಕ್ಷಕ್ಕಿಂತ ಕಡಿಮೆ ಇರಬೇಕು.
* 12ನೇ ತರಗತಿಯನ್ನು ಪೂರ್ಣಗೊಳಿಸಿ ಒಂದು ವರ್ಷಕ್ಕಿಂತ ಹೆಚ್ಚಿನ ಅಂತರ ಆಗಿರಬಾರದು.


ಇದನ್ನೂ ಓದಿ; ಆಧಾರ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಓದಿ; ಈ ಕೆಲಸ ಮಾಡಲು ಇಂದು ಕೊನೆಯ ದಿನ


ಎಷ್ಟು ಸ್ಕಾಲರ್ ಶಿಪ್‌ ಲಭ್ಯ?;
*‌ 5,000ಕ್ಕಿಂತ ಕೆಳಗಿನ ಎಐಆರ್ ಇರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 1 ಲಕ್ಷ.
*‌ 5,000ದಿಂದ 15,000ದ ಒಳಗಿನ ಎಐಆರ್ ಇರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 75,000.
*‌ 15,000ದಿಂದ 30,000ದ ಒಳಗಿನ ಎಐಆರ್ ಇರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 50,000.


ಇದನ್ನೂ ಓದಿ; ರೇಷನ್‌ ಕಾರ್ಡ್‌ ಹೊಂದಿರುವ ಯುವಕ – ಯುವತಿಯರಿಗೆ ಸಿಹಿಸುದ್ದಿ; ಈ ತರಬೇತಿಗೆ ಅರ್ಜಿ ಆಹ್ವಾನ


ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/SDEFSL1 ಈ ವೆಬ್ ಸೈಟ್‌ ಗೆ ಭೇಟಿ ನೀಡಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ‌


ಇದನ್ನೂ ಓದಿ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿರುವವರ ಗಮನಕ್ಕೆ; ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
31-12-2024

SD Scholarships: puc ಪಾಸ್‌ ಆದ ವಿದ್ಯಾರ್ಥಿಗೆ 50,000 ಸ್ಕಾಲರ್ಶಿಪ್
SD Scholarships: puc ಪಾಸ್‌ ಆದ ವಿದ್ಯಾರ್ಥಿಗೆ 50,000 ಸ್ಕಾಲರ್ಶಿಪ್

ಇತ್ತೀಚಿನ ಜನಪ್ರಿಯ ಸುದ್ದಿಗಳು