Rajendra Kumar Kataria: ಭೂ ಮಂಜೂರಾತಿ, ನಿಯಮ ಉಲ್ಲಂಘಿಸಿದರೆ ಜೈಲು

Rajendra Kumar Kataria: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಗರ್ ಹುಕುಂ ಸಮಿತಿಯಲ್ಲಿ ಎಷ್ಟೇ ಸದಸ್ಯರಿದ್ದರೂ ನಿಯಮ ಉಲ್ಲಂಘನೆಯಾದಾಗ ಅಧಿಕಾರಿ ಮಾತ್ರ ಜವಾಬ್ದಾರಿ. ತಹಶೀಲ್ದಾರ್ ಹುದ್ದೆಗೆ ವರ್ಗಾವಣೆಯಾಗಲು ಜನಪ್ರತಿನಿಧಿಗಳಿಂದ ಪತ್ರ ಪಡೆದಿದ್ದರೆ ನಿಯಮಗಳನ್ನು ಹೇಳಲು ಧೈರ್ಯ ಇರುವುದಿಲ್ಲ. ಒತ್ತಡಕ್ಕೆ ಒಳಗಾಗಿ ಭೂಮಂಜೂರಾತಿಯಲ್ಲಿ ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್‌ಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದರು.

ಇದನ್ನೂ ಓದಿ; ಮೂಡಿಗೆರೆ: ಅರ್ಧ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಇದನ್ನೂ ಓದಿ; ಕಳಸ: 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ

Rajendra Kumar Kataria:ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗೋಮಾಳ ಭೂಮಿಯನ್ನು ಸಾಗುವಳಿಗೆ ಮಂಜೂರು ಮಾಡಲು ಯಾರಿಗೂ ಅಧಿಕಾರ ಇಲ್ಲ. ಒತ್ತಡಕ್ಕೆ ಒಳಗಾಗಿ ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್‌ಗಳು ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು. ನಮೂನೆ 50, 53, 57 ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆಧರಿಸಿ ಜಮೀನು ಮಂಜೂರು ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರ ನಿಯಮ ಉಲ್ಲಂಘಿಸಿದ 48 ಪ್ರಕರಣಗಳು ನನ್ನ ಮುಂದೆ ಬಂದಿದ್ದು, ಈ ಪೈಕಿ 9 ಪ್ರಕರಣಗಳಲ್ಲಿ ತಹಶೀಲ್ದಾರ್ ಗಳ ವಿರುದ್ಧ ಎಫ್.ಐ.ಆರ್.ಗೆ ಶಿಫಾರಸು ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ; ಕೊಟ್ಟಿಗೆಹಾರ: ಕಾಡಾನೆ ದಾಳಿಯಿಂದ ಅಪಾರ ಬೆಳೆ ಹಾನಿ, ಪರಿಹಾರಕ್ಕೆ ಒತ್ತಾಯ

ಇದನ್ನೂ ಓದಿ; ಕೊಪ್ಪದಲ್ಲಿ ಉಚಿತ ಚಲನಚಿತ್ರ ವೀಕ್ಷಣೆಗೆ ಅವಕಾಶ

ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನು ಊರಿನ ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿದೆ ಎನಿಸಿದರೆ ಅದನ್ನು ಮಂಜೂರು ಮಾಡಬಾರದು. ಅಂಗನವಾಡಿ, ಶಾಲೆ, ಆಸ್ಪತ್ರೆ, ಆಟದ ಮೈದಾನಕ್ಕೆ ಜಾಗ ಅಗತ್ಯವಿದ್ದರೆ ಸಾಗುವಳಿ ಬಿಡಿಸಿ ಸಂಬಂಧಪಟ್ಟ ಇಲಾಖೆಗೆ ಮಂಜೂರು ಮಾಡಬೇಕು ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು   

ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜಿಲ್ಲೆಯಾದ್ಯಂತ ಎರಡು ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸಿಗುವುದು ಕಷ್ಟವಾಗಿದೆ ಎಂದರು. 50 ಎಕರೆ ಜಮೀನು ಹೊಂದಿರುವವರು ಕೂಡ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಮತ್ತು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಟಾರಿಯಾ ಹೇಳಿದ್ದಾರೆ. ಅತಿಕ್ರಮಣದಿಂದ ಸ್ಮಶಾನ ಭೂಮಿ ಮತ್ತು ಇತರ ಸಾರ್ವಜನಿಕ ಕಾರಣಗಳಿಗಾಗಿ ಭೂಮಿಯನ್ನು ಪಡೆಯುವುದು ಕಷ್ಟಕರವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೂ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ; ಮೂಡಿಗೆರೆ: ಕೇದಾರನಾಥ ಯಾತ್ರೆ ಸಂದರ್ಭ ಮೃತಪಟ್ಟಿದ ಯುವಕ; ಗಿರೀಶ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಆಲ್ದೂರು: ಎಚ್ಚೆತ್ತುಕೊಳ್ಳದ ಅಧಿಕಾರಿಗಳು;ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ, ಸ್ಥಳೀಯರಿಂದಲೇ ದುರಸ್ತಿ
  2. ಕೊಟ್ಟಿಗೆಹಾರ: ಕಾಡಾನೆ ದಾಳಿಯಿಂದ ಅಪಾರ ಬೆಳೆ ಹಾನಿ, ಪರಿಹಾರಕ್ಕೆ ಒತ್ತಾಯ
  3. ಮೂಡಿಗೆರೆ: ಕೇದಾರನಾಥ ಯಾತ್ರೆ ಸಂದರ್ಭ ಮೃತಪಟ್ಟಿದ ಯುವಕ; ಗಿರೀಶ್ ಮನೆಗೆ ಶಾಸಕಿ ನಯನಾ ಮೋಟಮ್ಮ ಭೇಟಿ
  4. ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್; ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು
  5. ಎನ್.ಆರ್ ಪುರ: ಜೀವನದಲ್ಲಿ ಜಿಗುಪ್ಪೆಗೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ
  6. ಕೊಪ್ಪದಲ್ಲಿ ಉಚಿತ ಚಲನಚಿತ್ರ ವೀಕ್ಷಣೆಗೆ ಅವಕಾಶ
  7. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-04.08.2023
  8. ಕಳಸ: 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆ
  9. ಕೇರಳದಲ್ಲಿ ಅರೆಸ್ಟ್ ಆದ ಬೆಂಗಳೂರಿನ ಪೊಲೀಸರು; ನಾಲ್ವರು ಪೊಲೀಸರು ಸಸ್ಪೆಂಡ್!
  10. ಮೂಡಿಗೆರೆ: ಅರ್ಧ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇