Property;- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌

(Property;-) ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೋಂದಣಿ ಅಕ್ರಮಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಭೌಗೋಳಿಕ ದತ್ತಾಂಶ (ಜಿಐಎಸ್) ಆಧಾರಿತ ತಂತ್ರಾಂಶ ರೂಪಿಸಲು ಮುಂದಾಗಿದೆ.


ಇದನ್ನೂ ಓದಿ; SC/ST ಸಮುದಾಯದ ವಿದ್ಯಾರ್ಥಿಗಳ ಗಮನಕ್ಕೆ; ಈ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ


ನೋಂದಣಿಯ ಸಂದರ್ಭದಲ್ಲಿ ನಿರ್ದಿಷ್ಟ ಆಸ್ತಿ ಇರುವ ಪ್ರದೇಶ ಯಾವ ರಸ್ತೆಗೆ ಸೇರಿದೆ ಎಂಬುದನ್ನು ಲೆಕ್ಕಹಾಕಿ ಅದರ ಪ್ರಕಾರ ಮುದ್ರಾಂಕ ಶುಲ್ಕ ವಸೂಲಿ ಮಾಡಿ ತೆರಿಗೆ ಹೆಚ್ಚಳ ಗುರಿ ಹೊಂದಲಾಗಿದೆ.


ಇದನ್ನೂ ಓದಿ; ಶಾಲೆಗಳ ಶೈಕ್ಷಣಿಕ ಪ್ರವಾಸ ರದ್ದು!; ಇಲ್ಲಿದೆ ಮಹತ್ವದ ಮಾಹಿತಿ…


ಮೊದಲು ಹಂತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾರಿ:
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ತರಲಿದ್ದು, ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಿದೆ. ಬಳಿಕ ಹಂತ ಹಂತವಾಗಿ ನಗರಗಳಿಗೆ ವಿಸ್ತರಿಸಲಾಗುತ್ತದೆ. ಇನ್ನು 15 ದಿನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಹೊಸದುರ್ಗ, ನೆಲಮಂಗಲ ತಾಲೂಕುಗಳಲ್ಲಿ ಜಾರಿಗೆ ಬರಲಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗುವುದು.


ಇದನ್ನೂ ಓದಿ; ಆಧಾರ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಓದಿ; ಈ ಕೆಲಸ ಮಾಡಲು ಇಂದು ಕೊನೆಯ ದಿನ


ಮುದ್ರಾಂಕಕ್ಕೆ ಸರ್ವೇ ನಂಬರ್:
ನೋಂದಣಿಯಾಗುವ ಆಸ್ತಿ ಎಲ್ಲಿ ಇದೆ ಎನ್ನುವುದರ ಮೇಲೆ ನಿಗಾ ವಹಿಸಲಿದ್ದು ಎನ್ನು ಪ್ರದೇಶ ಮಾರಾಟ ಎನ್ನುವ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಸ್ವಯಂ ಚಾಲಿತವಾಗಿ ಮುದ್ರಾಂಕ ದರದ ಲೆಕ್ಕಾಚಾರ ನಡೆಯಲಿದ್ದು, ದರ ಪಾವತಿಸಿ ದಾಖಲೆಗಳನ್ನು ಸಲ್ಲಿಸಿದ ನಂತರ ನೋಂದಣಿ ಮಾಡಲಾಗುವುದು. ಮುದ್ರಾಂಕಕ್ಕೆ ಸರ್ವೇ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಎಷ್ಟು ಪ್ರದೇಶ ಮಾರಾಟ ಎಂದು ನಮೂದಿಸಿದರೆ ದರ ನಿಗದಿಯಾಗುತ್ತದೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ ಹೊಂದಿರುವ ಯುವಕ – ಯುವತಿಯರಿಗೆ ಸಿಹಿಸುದ್ದಿ; ಈ ತರಬೇತಿಗೆ ಅರ್ಜಿ ಆಹ್ವಾನ


ಇನ್ನು ಈ ವ್ಯವಸ್ಥೆ ಮೋಸ ತಡೆಗಟ್ಟಲು ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಹೊಸ ತಂತ್ರಾಂಶದ ಮೂಲಕ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

Property:- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌
Property:- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌

ಇದನ್ನೂ ಓದಿ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿರುವವರ ಗಮನಕ್ಕೆ; ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ


ಇತ್ತೀಚಿನ ಜನಪ್ರಿಯ ಸುದ್ದಿಗಳು