Properties 25: ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ

(Properties 25:) ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷಿ ತೆರಿಗೆಗೆ ಒಳಪಡದ ಎಲ್ಲಾ ವಸತಿ, ವಸತಿಯೇತರ, ವಾಣಿಜ್ಯ, ವಾಣಿಜೈತರ ಕಟ್ಟಡ, ನಿವೇಶನ, ರೆಸಾರ್ಟ್, ಹೋಮ್ ಸ್ಟೇ ಸೇರಿ ಇತರೆ ಆಸ್ತಿಗಳನ್ನು ಗುರುತಿಸಿ ನಿಯಮ ಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ (ಗ್ರಾಪಂಗಳ ತೆರಿಗೆ, ದರ ಮತ್ತು ಫೀಸು ಗಳು) ನಿಯಮ 2025ಅನ್ನು ಪ್ರಕಟಿಸಿದೆ.


ನ್ನೂ ಓದಿ: ಈ ನಿಯಮಗಳನ್ನು ಪಾಲಿಸದಿದ್ದರೆ ರೇಷನ್ ಕಾರ್ಡ್ ರದ್ದು


ಹೌದು, ಇತರೆ ಆಸ್ತಿಗಳನ್ನು ಗುರುತಿಸಿ ನಿಯಮ ಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿಗೆ ನಿಯಮಗಳನ್ನು ತಂದಿದೆ. ಅದರಲ್ಲಿ ಕೆಲವು ನಿಯಮಗಳು ಇಲ್ಲಿದೆ ನೋಡಿ.

(Properties 25:) * ಅದಿಭೋಗದಾರ ಎಂದರೆ ಯಾವುದೇ ಕಟ್ಟಡ ಅಥವಾ ಖಾಲಿ ಭೂಮಿಯನ್ನು ಅದರ ಮಾಲೀಕನಿಂದ ಚಾಲ್ತಿಯಲ್ಲಿರುವ ಕಾನೂನಿಗನುಗುಣವಾಗಿ ಬಾಡಿಗೆ ಅಥವಾ ಗುತ್ತಿಗೆ ಅಥವಾ ಬಾಡಿಗೆ ರಹಿತವಾಗಿ ಬಳಸುತ್ತಿರುವ ಅಥವಾ ಅನುಭವದಲ್ಲಿರುವ ಮತ್ತು ಅದಕ್ಕೆ ತಗಲುವ ಬಾಡಿಗೆಯನ್ನು ನಿಬಂಧನೆಗೊಳಪಟ್ಟು ಪಾವತಿಸುತ್ತಿರುವ ವ್ಯಕ್ತಿಯನ್ನು ಒಳಗೊಂಡಿರತಕ್ಕದ್ದು

* ಕೈಗಾರಿಕಾ ಕಟ್ಟಡ ಎಂದರೆ ಯಂತ್ರಗಳ ಮೂಲಕ ಉಗಿ, ನೀರು, ತೈಲ, ಅನಿಲ, ವಿದ್ಯುತ್ ಅಥವಾ ಯಾವುದೇ ಇತರೆ ರೀತಿಯ ಇಂಧನ ಶಕ್ತಿಯ ಸಹಾಯದಿಂದ ನಡೆಸುವ ಕೈಗಾರಿಕೆ, ಉತ್ಪಾದನಾ ಘಟಕ, ತಯಾರಿಕಾ ಘಟಕಗಳು

* ಕೃಷಿ ಆಧಾರಿತ ಉತ್ಪಾದನಾ ಘಟಕಗಳ ಕಟ್ಟಡ” ಎಂದರೆ ಕೃಷಿ ಆಧಾರಿತ ಉತ್ಪಾದನಾ ಘಟಕಗಳು, ವಾಣಿಜ್ಯ ಉದ್ದೇಶದ ಪುಷ್ಪದ್ಯಮ, ವಾಣಿಜ್ಯ ಉದ್ದೇಶದ ನರ್ಸರಿ ಅಥವಾ ತತ್ಸಮಾನ ಪ್ರಕ್ರಿಯೆಯನ್ನು ನಡೆಸಲಾಗುವ ಇತರೆ ಕಟ್ಟಡಗಳು

(Properties 25:) * ಖಾಲಿ ಜಮೀನು’ ಎಂದರೆ ವಸತಿ, ವಾಣಿಜ್ಯ, ವಸತಿಯೇತರ, ಕೈಗಾರಿಕೆ ಮತ್ತು ಇತರ ಉದ್ದೇಶದ ಯಾವುದೇ ಕಟ್ಟಡ ಸಾಮಗ್ರಿಗಳನ್ನು ಒಳಗೊಂಡಿರುವ ರಚನೆಯನ್ನು ಹೊಂದಿರದ ಹಾಗೂ ಪಾರ್ಕಿಂಗ್ ಅಥವಾ ಸ್ಟಾಕ್ಯಾರ್ಡ್ ಮತ್ತು ರನ್ಗಾಗಿ ಬಳಸದ ಖಾಲಿ ಜಾಗವಾಗಿರುವ ಭೂಮಿ


ನ್ನೂ ಓದಿ: 6 ಜಿಲ್ಲೆಗಳಲ್ಲಿ ಪ್ರಧಾನಿ ಧನಧಾನ್ಯ ಯೋಜನೆ ಜಾರಿ


* ತೆರಿಗೆ ಎಂದರೆ ಅಧಿನಿಯಮದ ಪ್ರಕರಣ 199ನೇ ಪ್ರಕರಣದ ಮೇರೆಗೆ ಗ್ರಾಮ ಪಂಚಾಯಿತಿ ಪ್ರದೇಶದ ಪರಿಮಿತಿಯಲ್ಲಿ ಖಾಲಿ ಜಮೀನು ಅಥವಾ ನಿವೇಶನ ಅಥವಾ ಕಟ್ಟಡ ಅಥವಾ ಅವೆರಡರ ಮೇಲೆ ಅಥವಾ ನಿರ್ಮಿತ ರಚನೆಗಳ ಮೇಲೆ ನಿಯಮಿಸಬಹುದಾದಂತೆ ವಿಧಿಸಬಹುದಾದ ಕರಗಳನ್ನು ಒಳಗೊಂಡಿರತಕ್ಕದ್ದು

* ದರ ಎಂದರೆ ಈ ಅಧಿನಿಯಮದ ಪ್ರಕರಣ 199ನೇ (2) ನೇ ಉಪ-ಪ್ರಕರಣದ ಮೇರೆಗೆ ಸರಬರಾಜು ಸೇವೆಗಳಿಗೆ ನಿಯಮಿಸಬಹುದಾದಂತೆ ವಿಧಿಸಬಹುದಾದ ದರಗಳನ್ನು ಒಳಗೊಂಡಿರತಕ್ಕದ್ದು

* ನಿವೇಶನ ಎಂದರೆ ವಸತಿ, ವಾಣಿಜ್ಯ, ವಸತಿಯೇತರ, ಕೈಗಾರಿಕಾ ಉದ್ದೇಶಕ್ಕಾಗಿ ವಿಭಾಗಗಳಾಗಿ ವಿಂಗಡಿಸಲಾದ, ನಿರ್ಮಿತ ಪ್ರದೇಶದ ಜಾಗ ಹಾಗೂ ಯಾವುದೇ ಕಟ್ಟಡವನ್ನು ಕಟ್ಟಿರದ ವಿವಿಧ ಆಕಾರದ ಖಾಲಿ ಭೂಮಿ

* ನಿರ್ಮಿತ ಪ್ರದೇಶ ಎಂದರೆ ನಿವೇಶನದ ಒಳಗೆ ಕಾನೂನು ಬದ್ಧವಾಗಿ ಬಿಡಬೇಕಾದ ಪ್ರದೇಶವನ್ನು ಹೊರತುಪಡಿಸಿ ನಿರ್ಮಿಸಿದ ಕಟ್ಟಡ, ನೆಲ ಮಾಳಿಗೆ, ಬಾಲ್ಕನಿ, ಗ್ಯಾರೇಜ್, ಈಜುಕೊಳ, ಮೇಲಂತಸ್ತು ಸೇರಿದಂತೆ ಒಟ್ಟು ನಿರ್ಮಿತ ಅಥವಾ ರಚನೆಯುಳ್ಳ ಪ್ರದೇಶ.

Properties 25: ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ
Properties 25: ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ

ಇತ್ತೀಚಿನ ಜನಪ್ರಿಯ ಸುದ್ದಿಗಳು (Properties 25:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ