Post Office Recruitment: ಕರ್ನಾಟಕ ಅಂಚೆ ವೃತ್ತದಿಂದ ಗ್ರಾಮೀಣ ಡಾಕ್ ಸೇವಕ್ (ಪಿಬಿಎಂ/ ಎಬಿಪಿಎಂ) ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ ಅಂಚೆ ವೃತ್ತದಲ್ಲಿ ಡಾಕ್ ಸೇವಕ್ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ; ಮೂಡಿಗೆರೆ: ಪಟ್ಟಣದ ಅಂಗಡಿಗಳಲ್ಲಿ ಸರಣಿ ಕಳ್ಳತನ; ರಾತ್ರೋರಾತ್ರಿ ಅಂಗಡಿಗಳಿಗೆ ಕನ್ನ ಹಾಕಿದ ಖದೀಮರು
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1714 ಗ್ರಾಮೀಣ ಡಾಕ್ ಸೇವಕ್ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಕುರಿತು ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ಯಾವ ಜಿಲ್ಲೆಗೆ ಎಷ್ಟು ಹುದ್ದೆ ಇಲ್ಲಿದೆ ವಿವರ:
ಬಾಗಲಕೋಟೆ- 29
ಬಳ್ಳಾರಿ-43
ಬೆಳಗಾವಿ- 42
ಬೆಂಗಳೂರು ಪೂರ್ವ- 11
ಬೆಂಗಳೂರು ದಕ್ಷಿಣ- 4
ಬೆಂಗಳೂರು ಪಶ್ಚಿಮ- 6
ಬೀದರ್- 49
ಚನ್ನಪಟ್ಟಣ- 66
ಚಿಕ್ಕಮಗಳೂರು- 63
ಚಿಕ್ಕೋಡಿ- 45
ಚಿತ್ರದುರ್ಗ- 51
ದಾವಣಗೆರೆ- 47
ಧಾರವಾಡ- 36
ಗದಗ- 63
ಗೋಕಾಕ್- 13
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-05.08.2023
ಹಾಸನ್- 84
ಹಾವೇರಿ- 33
ಕಲ್ಬುರ್ಗಿ-44
ಕಾರವಾರ- 53
ಕೊಡಗು- 44
ಕೋಲಾರ- 75
ಮಂಡ್ಯ-78
ಮಂಗಳೂರು- 52
ಮೈಸೂರು- 43
ನಂಜನಗೂಡು-41
ಪುತ್ತೂರು- 89
ರಾಯಚೂರು- 49
ಆರ್.ಎಂ.ಎಸ್ ಎಚ್‌ಬಿ- 44
ಶಿವಮೊಗ್ಗ-74
ಉಡುಪಿ- 110
ವಿಜಯಪುರ- 65
ಯಾದಗಿರಿ- 33

ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
Post Office Recruitment: ವಯೋಮಿತಿ:
* ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು ಗರಿಷ್ಠ 40 ವರ್ಷಗಳಾಗಿರಬೇಕು.
* ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ,
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ,
* ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು: ಭೂ ಮಂಜೂರಾತಿ, ನಿಯಮ ಉಲ್ಲಂಘಿಸಿದರೆ ಜೈಲು
- ಕಳಸ: ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು
- ಆಲ್ದೂರು: ಎಚ್ಚೆತ್ತುಕೊಳ್ಳದ ಅಧಿಕಾರಿಗಳು;ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ, ಸ್ಥಳೀಯರಿಂದಲೇ ದುರಸ್ತಿ
ಅರ್ಜಿ ಸಲ್ಲಿಕೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಶುಲ್ಕ:
* ಮಹಿಳೆಯರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
* ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ವೇತನ:
* ಗ್ರಾಮೀಣ ಡಾಕ್ ಸೇವಕ್ ಪ್ಯಾಂಟ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಹುದ್ದೆಗೆ 12,000 29,380 ವರೆಗೆ
* ಗ್ರಾಮೀಣ ಡಾಕ್ ಸೇವಕ್ ಅಸೈಂಟ್ ಬಾಂಡ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗೆ 10,000-24,470ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.
ಆಯ್ಕೆ:
ಈ ಹುದ್ಧಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
* ಈ ಹುದ್ದೆಗೆ ಅಭ್ಯರ್ಥಿಗಳು ಆಗಸ್ಟ್ 3ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 23 ಆಗಿದೆ.
* ಅರ್ಜಿ ತಪ್ಪು ಸರಿಪಡಿಸುವಿಕೆಗೆ ಆಗಸ್ಟ್ 21ರಿಂದ ಆಗಸ್ಟ್ 25ರ ವರೆಗೆ ಕಾಲ ಅವಕಾಶ ನೀಡಲಾಗಿದೆ.
ಈ ಹುದ್ದೆಯ ಕುರಿತು ಸಂಪೂರ್ಣ ವಿವರಣೆ, ಅರ್ಜಿ ಸಲ್ಲಿಕೆ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಬಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣ indianpost.gov.in. ಗೆ ಭೇಟಿ ನೀಡಬಹುದಾಗಿದೆ.






Leave a Reply