(PMKS Yojana) ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ನೀಡುತ್ತಿದ್ದು, ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ; ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳು ಕಡ್ಡಾಯ!
ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ, ರಬ್ಬರ್ ಹೊರತುಪಡಿಸಿ) ಹನಿ ನೀರಾವರಿ ಅಳವಡಿಕೆಗಾಗಿ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90ರ ಸಹಾಯಧನ ಮತ್ತು ಇತರೆ ರೈತರಿಗೆ ಶೆ.75ರ ಸಹಾಯಧನ ನೀಡಲಾಗುವುದು. ಹಾಗೂ 2 ಹೆಕ್ಟೇರ್ ರಿಂದ 5 ಹೆಕ್ಟೇರ್ ಪ್ರದೇಶದವರೆಗೆ ಶೇ. 45 ರ ಸಹಾಯಧನ ನೀಡಲಾಗುವುದು.
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
20 ಸಾವಿರ ಸಹಾಯಧನ ಲಭ್ಯ;
ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಲ್ಲಿ ತಾಳೆ ಬೆಳೆಯನ್ನು ಇಲಾಖಾ ಪಾಲುದಾರಿಕೆ ಕಂಪನಿಯಾದ ರುಚಿ ಸೋಯಾ ಇಂಡ್ಸ್ ಸ್ಟ್ರೀಸ್ಸ್ ಅವರೊಂದಿಗೆ ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಳೆ ಹೊಸ ಪ್ರದೇಶ ವಿಸ್ತರಣೆಗೆ ರೂ.20 ಸಾವಿರ ಸಹಾಯಧನ ಹಾಗೂ ಮೊದಲ ನಾಲ್ಕು ವರ್ಷದ ಪಾಲನೆಗಾಗಿ 5500 ರಂತೆ ಪ್ರತಿ ಹೇಕ್ಟರ್‍ಗೆ ನೀಡಲಾಗುವುದು. ಇದರ ಜೊತೆಗೆ ತಾಳೆಯಲ್ಲಿ ಡಿಸೇಲ್ ಪಂಪ್ ಸೆಟ್ ಖರೀದಿಗೆ, ಕಟಾವು ಯಂತ್ರ ಖರೀದಿಗೆ ಹಾಗೂ ಅಂತರ ಬೇಸಾಯ ಕೈಗೊಂಡಿದ್ದಲ್ಲಿ ಹೆಕ್ಟೇರ್‍ಗೆ ರೂ.5 ಸಾವಿರ ಸಹಾಯಧನ ನೀಡಲಾಗುತ್ತದೆ.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಬೆಳೆ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ಇನ್ಪುಟ್ ಸಬ್ಸಿಡಿ ಜಮೆ!
ಯಂತ್ರೋಪಕರಣಗಳಿಗೆ ಸಹಾಯಧನ:
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿಯಲ್ಲಿ ಪ್ರದೇಶ ವಿಸ್ತರಣೆ, ಕಿತ್ತಳೆ ಮತ್ತು ಕಾಳು ಮೆಣಸು ಪುನಶ್ಚೇತನ ಕಾರ್ಯಕ್ರಮ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಪ್ರಾಥಮಿಕ ಸಂಸ್ಕರಣ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಎಸ್‍ಎಂಎಎಂ ಯಾಂತ್ರೀಕರಣ ಯೋಜನೆಯಡಿ ಇಲಾಖಾ ಮಾರ್ಗಸೂಚಿಯಂತೆ ಅನುಮೋದಿತ ಸಂಸ್ಥೆಯಿಂದ ಖರೀದಿಸಿದ ಮರ ಕತ್ತರಿಸುವ ಯಂತ್ರ, ಪವರ್ ಸ್ಟೇಯರ್, ಕಳೆಕೊಚ್ಚುವ ಯಂತ್ರ, ಏಣಿ, ತಳ್ಳುವ ಗಾಡಿ ಮುಂತಾದ ಯಂತ್ರೋಪಕರಣಗಳಿಗೆ ಶೇ.40/50 ರ ಸಹಾಯಧನ ನೀಡಲಾಗುತ್ತದೆ.
ಇದನ್ನೂ ಓದಿ; ಅಮೇರಿಕಾ ಎಲೆಕ್ಷನ್; ಡೊನಾಲ್ಡ್ ಟ್ರಂಪ್’ಗೆ ಭರ್ಜರಿ ಗೆಲುವು
ಅರ್ಜಿ ಸಲ್ಲಿಸಲು ಬಯಸುವ ರೈತರು ನಿಗಧಿತ ಅರ್ಜಿ ನಮೂನೆ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳೊಂದಿಗೆ ಸಮೀಪದ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಡಿ.31 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ; ರಾಜ್ಯದ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್; ಪಡಿತರ ಚೀಟಿ ವಿತರಣೆ ಆರಂಭ
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
- 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
- PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
- ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!






