NHM: ಆರೋಗ್ಯ ಸಿಬ್ಬಂದಿಗಳ ಗಮನಕ್ಕೆ; ಸರ್ಕಾರದಿಂದ ಮಹತ್ವದ ಹೆಜ್ಜೆ

NHM: ಎನ್‌ಎಚ್‌ಎಮ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಾಮಾಜಿಕ ಭದ್ರತಾ ವಿಮಾ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆಇಟ್ಟಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ತನ್ನ ನೇರ ಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ವೈಯಕ್ತಿಕ ಅಪಘಾತ ವಿಮೆ ಮತ್ತು ಟರ್ಮ್ ಇನ್ಸೂರೆನ್ಸ್ ಸೇವೆಗಳನ್ನು ಪರಿಚಯಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಈ ಪರಿಕಲ್ಪನೆ ಎನ್‌ಎಚ್‌ಎಮ್ ಮತ್ತು ಆಕ್ಸಿಸ್ ಬ್ಯಾಂಕ್ ನಡುವೆ ಕೈಗೊಳ್ಳಲಾದ ಒಡಂಬಡಿಕೆ ಪತ್ರದ (MoU) ಮೂಲಕ ಸಾಧ್ಯವಾಗಿದೆ.


ಇದನ್ನೂ ಓದಿ: BOB bank 518 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ


2005 ರಿಂದ, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಕರ್ನಾಟಕದಾದ್ಯಂತ ಅನಿವಾರ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಮುಖ ಪಾತ್ರ ವಹಿಸಿದೆ. ಸದರಿ ಯೋಜನೆಯ ಅಡಿಯಲ್ಲಿ ನೇರ ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಟರ್ಮ್ ಇನ್ಸೂರೆನ್ಸ್ ಮತ್ತು ವೈಯಕ್ತಿಕ ಅಪಘಾತ ವಿಮೆಯಂತಹ ಸಾಮಾಜಿಕ ಭದ್ರತಾ ಯೋಜನೆಗಳ ಕೊರತೆಯನ್ನು ಮನಗಂಡು, ಎನ್‌ಎಚ್‌ ಎಮ್ ಕರ್ನಾಟಕವು ಈ ವಿಮಾ ಯೋಜನೆಯನ್ನು ಶೂನ್ಯ ವೆಚ್ಚದಲ್ಲಿ ಪ್ರಾರಂಭಿಸಿದೆ. ಈ ವಿಮಾ ಯೋಜನೆಗೆ ಉದ್ಯೋಗಿಗಳು ಮತ್ತು ಎನ್‌ಎಚ್‌ಎಮ್ ಕೂಡ ಯಾವುದೇ ಪ್ರೀಮಿಯಂ ಭರಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಆಕ್ಸಿಸ್ ಬ್ಯಾಂಕ್ ಉಚಿತವಾಗಿ ಸದರಿ ಸೌಲಭ್ಯವನ್ನು ಒದಗಿಸುತ್ತಿದೆ.


ಇದನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ಉಚಿತ ಬಸ್‌ ಪ್ರಯಾಣ..!


NHM: ಆರೋಗ್ಯ ಸಿಬ್ಬಂದಿಗಳ ಗಮನಕ್ಕೆ; ಸರ್ಕಾರದಿಂದ ಮಹತ್ವದ ಹೆಜ್ಜೆ
NHM: ಆರೋಗ್ಯ ಸಿಬ್ಬಂದಿಗಳ ಗಮನಕ್ಕೆ; ಸರ್ಕಾರದಿಂದ ಮಹತ್ವದ ಹೆಜ್ಜೆ

ಇದನ್ನೂ ಓದಿ: ವಿಧವಾ ಪಿಂಚಣಿ ಯೋಜನೆಯ ಮೊತ್ತ ಹೆಚ್ಚಳ ಎಷ್ಟು ಹೆಚ್ಚಳ ಇಲ್ಲಿದೆ ಮಾಹಿತಿ


ವಿಮಾ ಕವಚದ ಪ್ರಮುಖ ಪ್ರಯೋಜನಗಳು:
1.ವೈಯಕ್ತಿಕ ಅಪಘಾತ ವಿಮಾ ರಕ್ಷಣಾ ಮೊತ್ತ: ₹60 ಲಕ್ಷ
ಕರ್ತವ್ಯದ ಸಂದರ್ಭದಲ್ಲಿ ಅಥವಾ ಕರ್ತವ್ಯ ಮುಗಿದ ನಂತರ ಯಾವುದೇ ಅಪಘಾತದಿಂದ ಸಂಭವಿಸುವ ಮರಣಕ್ಕೆ ಸಂಪೂರ್ಣ ವಿಮಾ ರಕ್ಷಣೆ.

2.ಸಂಪೂರ್ಣ ಶಾಶ್ವತ ಅಂಗವೈಕಲ್ಯ ವಿಮಾ ಮೊತ್ತ: ₹60 ಲಕ್ಷ
ಯಾವುದೇ ಅಪಘಾತದಿಂದಾಗಿ ಸಂಪೂರ್ಣ ಅಂಗವೈಕಲ್ಯಗೊಂಡರೆ ಲಭ್ಯವಿರುವ ವಿಮಾ ರಕ್ಷಣಾ ಮೊತ್ತ.


ಇದನ್ನೂ ಓದಿ: ಶಾಲೆಗಳಿಗೆ ಸರ್ಕಾರದಿಂದ ಮುಖ್ಯ ಮಾಹಿತಿ ಏನದು ಮಾಹಿತಿ? ಇಲ್ಲಿದೆ ಡಿಟೈಲ್ಸ್


3. ಆಂಶಿಕ ಅಂಗವೈಕಲ್ಯ ವಿಮಾ ಮೊತ್ತ: 75% ವರೆಗಿನ ಪರಿಹಾರ
ಯಾವುದೇ ಅಪಘಾ ತದಿಂದಾಗಿ ಭಾಗಶ: ಅಂಗವೈಕಲ್ಯವಾದರೆ, ವಿಮಾ ಮೊತ್ತದ ಶೇಕಡಾ 75% ವರೆಗೆ ಪರಿಹಾರ.

4.ಸಹಜ ಮರಣ ವಿಮಾ ಕವಚ: ₹10 ಲಕ್ಷ
60 ವರ್ಷ ವಯಸ್ಸಿನ ಒಳಗಿನ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ.


ಇದನ್ನೂ ಓದಿ: ಈ ಯೋಜನೆಯ ಮೂಲಕ ಸರ್ಕಾರದಿಂದ ಸಿಗಲಿದೆ 50,000 ರೂ, ಯಾವ ಯೋಜನೆ ಅರ್ಜಿ ಸಲ್ಲಿಕೆ ಹೇಗೆ?


5. ಉದ್ಯೋಗಿಯ ಮಕ್ಕಳ ಶಿಕ್ಷಣ ಸೌಲಭ್ಯ:
* ಮಾನ್ಯತೆ ಪಡೆದ ವೈಯಕ್ತಿಕ ಅಪಘಾತ ವಿಮಾ ಕೈಮಿನ ಅಡಿಯಲ್ಲಿ 18 ಲಕ್ಷವರೆಗೆ ಲಭ್ಯ.
* ಒಬ್ಬ ಅಥವಾ ಹೆಚ್ಚಿನ ಗಂಡು ಮಕ್ಕಳಿಗೆ: ₹4 ಲಕ್ಷ
* ಒಂದು ಅಥವಾ ಹೆಚ್ಚಿನ ಹೆಣ್ಣು ಮಕ್ಕಳಿಗೆ: 18 ಲಕ್ಷ” (ಉದ್ಯೋಗಿಯ ಮರಣದ ಸಂದರ್ಭದಲ್ಲಿ ಹೆಣ್ಣು ಮಗು ವಿದ್ಯಾಭ್ಯಾಸ ಮಾಡುತ್ತಿರುವ ಷರತ್ತಿನಡಿ)
* ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದರೆ: ₹8 ಲಕ್ಷ*
* ಹೆಣ್ಣುಮಗಳಿಗೆ ಹೆಚ್ಚುವರಿ ₹4 ಲಕ್ಷ ಸಹ ಒಳಗೊಂಡಿದೆ.


ಇದನ್ನೂ ಓದಿ: ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರೂ ಸಾಲ,ಯಾವ ಯೋಜನೆ?


ಅನುಷ್ಠಾನ ಮತ್ತು ವಿಮಾ ವ್ಯಾಪ್ತಿ:
* ಉದ್ಯೋಗಿಯ ವೇತನ ಖಾತೆಗೆ ಮೊದಲ ವೇತನ ಜಮಯಾದ 15 ದಿನಗಳ ನಂತರ ವಿಮಾ ರಕ್ಷಣೆ ಚಾಲ್ತಿಗೆ ಬರುತ್ತದೆ.
* ಈ ಯೋಜನೆಯಿಂದ 28,400 ಅನುಮೋದಿತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 25,000 ನೇರ ಗುತ್ತಿಗೆ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ.
* ಇದು ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಮತ್ತು ಆತ್ಮಸ್ಥೆರ್ಯವನ್ನು ಒದಗಿಸುತ್ತದೆ.


ಇದನ್ನೂ ಓದಿ:  ಕಾಲೇಜುಗಳಿಗೆ ಸರ್ಕಾರದಿಂದ ಮಹತ್ವದ ಆದೇಶ! ಏನದು ಆದೇಶ? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಉದ್ಯೋಗಿ ಕಲ್ಯಾಣಕ್ಕೆ ಮಹತ್ವದ ಹೆಜ್ಜೆ:
ಈ ಸದರಿ ಯೋಜನೆಯು, ಅನೇಕ ವರ್ಷಗಳಿಂದ ನೇರ ಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿರುವುದು ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆಯಾಗಿದ್ದು, ಇದು ಉದ್ಯೋಗಿಗಳ ಕ್ಷೇಮಾಭಿವೃದ್ಧಿಗೆ ನೀಡುವ ಆದ್ಯತೆಯನ್ನು ತೋರಿಸುತ್ತದೆ. ಸಮಗ್ರ ವಿಮಾ ಕವಚವನ್ನು ಖಚಿತಪಡಿಸುವ ಮೂಲಕ, ಎನ್‌ಎಚ್‌ಎಮ್ (NHM)ಕರ್ನಾಟಕವು ತನ್ನ ಉದ್ಯೋಗಿಗಳಿಗೆ ವಿಮಾ ಸೌಲಭ್ಯದ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತಿದೆ.


ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏನದು?


ಅಂತರ್‌ಜಿಲ್ಲಾ ವರ್ಗಾವಣೆಗೆ ಅವಕಾಶ:
ಎನ್‌ಎಚ್‌ಎಂ ನೇರ ಗುತ್ತಿಗೆ ಸಿಬ್ಬಂದಿಗಳು ಸಾಮಾನ್ಯವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುತ್ತಿದ್ದು ಅವರು ತಮ್ಮ ಸಂಪೂರ್ಣ ಕರ್ತವ್ಯದ ಅವಧಿಯುದ್ದಕ್ಕೂ ಆಯಾ ಜಿಲ್ಲೆಯಲ್ಲಿಯೇ ಕೆಲಸ ಮಾಡಬೇಕಾಗಿರುತ್ತದೆ. ಸದರಿ ಸಿಬ್ಬಂದಿಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿ, ರಾಜ್ಯ ಸರ್ಕಾರವು ಸೇವಾ ಅವಧಿಯಲ್ಲಿ ಒಂದು ಬಾರಿ ಅಂತರ್‌ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸುವ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಅತಿ ಶೀಘ್ರದಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗುವುದು.


ಇದನ್ನೂ ಓದಿ: ಆಧಾರ್‌ ಕಾರ್ಡ್‌ ಹೊಂದಿರುವ SC-ST ವಿದ್ಯಾರ್ಥಿಗಳ ಗಮನಕ್ಕೆ ಸಿಗಲಿದೆ SBIFA ನಿಂದ ಸ್ಕಾಲರ್‌ ಶಿಪ್‌ ಈ ಸ್ಟೆಪ್‌ ಫಾಲೋ ಮಾಡಿ ಅರ್ಜಿ ಸಲ್ಲಿಸಿ


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ