New Year Offer: ಹೊಸ ವರ್ಷಕ್ಕೆ ವಿಶೇಷ ಕೊಡುಗೆ ನೀಡಿದ ಜಿಯೋ

(New Year Offer) ರಿಲಯನ್ಸ್ ಜಿಯೋ ಹೊಸ ವರ್ಷವನ್ನು ಸ್ವಾಗತಿಸಲು ತನ್ನ ಗ್ರಾಹಕರಿಗೆ ‘ನ್ಯೂ ಇಯರ್ ವೆಲ್‌ ಕಮ್ ಪ್ಲಾನ್ -2025’ ಬಿಡುಗಡೆ ಮಾಡಿದ್ದು, ಈ ಯೋಜನೆಯ ಬೆಲೆ ₹2025 ನಿಗದಿ ಪಡಿಸಲಾಗಿದೆ.


ಇದನ್ನೂ ಓದಿ; ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ


ದೀರ್ಘಾವಧಿಯ ಯೋಜನೆ ಇದಾಗಿದ್ದು, ಅನಿಯಮಿತ 5ಜಿ ಡೇಟಾ, ಉಚಿತ SMS ಮತ್ತು 200 ದಿನಗಳ‌ ಅನಿಯಮಿತ 5ಜಿ ಡೇಟಾ, ವಾಯ್ಸ್, ಎಸ್‌ಎಂಎಸ್ ಜೊತೆಗೆ ₹2,150ರ ಮೌಲ್ಯದ ಕೂಪನ್ ಸಹ ಸಿಗಲಿದೆ.

ಹೊಸ ವರ್ಷದ ಈ ಪ್ಲಾನ್ ಜಿಯೋದ ಹಾಲಿ ಮತ್ತು ಹೊಸ ಗ್ರಾಹಕರಿಗೂ ಲಭ್ಯ. 2024ರ ಡಿಸೆಂಬರ್ 11 ರಿಂದ 2025 ರ ಜನವರಿ 11ರವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ‌. ಮೈ ಜಿಯೋ ಆ್ಯಪ್, ಜಿಯೋದ ಅಧಿಕೃತ ವೆಬ್‌ ಸೈಟ್‌ ಅಥವಾ ಅಧಿಕೃತ ರಿಟೇಲರ್ ಮೂಲಕ ರೀಚಾರ್ಜ್ ಮಾಡಬಹುದು.


ಇದನ್ನೂ ಓದಿ; ಪಂಚಾಯತಿ ರಾಜ್ ನಿಂದ ಸ್ಕಾಲರ್‌ ಶಿಪ್‌; ತಿಂಗಳಿಗೆ ಸಿಗಲಿದೆ 7,000, ಹೀಗೆ ಅರ್ಜಿ ಸಲ್ಲಿಸಿ


ಯೋಜನೆ‌ಯ ವಿವರ ಹೀಗಿದೆ:
* 500 ಜಿಬಿಯಷ್ಟು 5 ಜಿ ಡೇಟಾ (ದಿನಕ್ಕೆ 2.5 ಜಿಬಿಯಷ್ಟು)
* ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಸೇವೆ
* ₹2,150ರ ಮೌಲ್ಯದ ಪಾರ್ಟ್ನರ್ ಕೂಪನ್
ಜಿಯೋದ ₹349ರ ಪ್ಲಾನ್‌ 200 ದಿನಗಳಿಗೆ ₹2,493ರಷ್ಟು ಆಗುತ್ತದೆ. ಇದಕ್ಕೆ ಹೋಲಿಸಿದರೆ ಈ ಹೊಸ ಪ್ಲಾನ್‌ನಲ್ಲಿ ₹468ರಷ್ಟು ಉಳಿತಾಯ ಆಗಲಿದೆ.


ಇದನ್ನೂ ಓದಿ; B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ


ಪಾರ್ಟನರ್ ಕೂಪನ್:
* ಅಜಿಯೋ ಖರೀದಿಗೆ ₹2500 ಅಥವಾ ಹೆಚ್ಚಿನ ಮೊತ್ತದ ಖರೀದಿಸಿದರೆ ₹500ರ ವಿನಾಯಿತಿ ಸಿಗಲಿದೆ, ಲಿಂಕ್ ಬಳಸಿ ರಿಡೀಮ್ ಮಾಡಬಹುದು.
* ಸ್ವಿಗ್ಗಿಯಲ್ಲಿ ₹499ರ ಮೇಲಿನ‌ ಖರೀದಿಗೆ ₹150 ವಿನಾಯಿತಿ.
* EaseMyTrip.com ಮೊಬೈಲ್ ಆ್ಯಪ್ ಮತ್ತು ವೆಬ್‌ ಸೈಟ್ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಮಾಡಿದರೆ ₹150 ವಿನಾಯಿತಿ.

New Year Offer: ಹೊಸ ವರ್ಷಕ್ಕೆ ವಿಶೇಷ ಕೊಡುಗೆ ನೀಡಿದ ಜಿಯೋ
New Year Offer: ಹೊಸ ವರ್ಷಕ್ಕೆ ವಿಶೇಷ ಕೊಡುಗೆ ನೀಡಿದ ಜಿಯೋ

ಇದನ್ನೂ ಓದಿ; ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್


ಇತ್ತೀಚಿನ ಜನಪ್ರಿಯ ಸುದ್ದಿಗಳು