New-Rules:ಆಗಸ್ಟ್ 1 ರಿಂದ ಈ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್..!

(New-Rules) ಕೆಲ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಕಣ್ಣು ಕುಕ್ಕವ ಪ್ರಖರ ಬೆಳಕನ್ನು ಹೊರ ಸೂಸುವ ಹೆಡ್ ಲೈಟ್ ಬಳಸುತ್ತಾರೆ. ಇದರಿಂದ ಎದುರಿಗೆ ಬರುವ ವಾಹನ ಸವಾರರಿಗೆ ಅಡಚಣೆಯಾಗುತ್ತದೆ ಎಂಬುದು ತಿಳಿದಿದ್ದರೂ ಸಹ ಲೆಕ್ಕಿಸುವುದಿಲ್ಲ. ಅಂತವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.


ಇದನ್ನೂ ಓದಿ: 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್


ನಿಮ್ಮ ವಾಹನದ ಹೆಡ್ ಲೈಟ್ 1989ರ ಕೇಂದ್ರ ಮೋಟಾರ್ ವಾಹನ ಕಾಯ್ದೆಯಲ್ಲಿ ಒತ್ತುಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಇರಬೇಕಿದ್ದು, ಇದಕ್ಕಿಂತ ಹೆಚ್ಚು ಹೆಡ್ ಲೈಟ್ ಅಳವಡಿಸುವುದು, ಮಾರ್ಪಡಿಸುವುದು, ಎಲ್‌ಇಡಿ ಲೈಟ್ ಅಳವಡಿಸುವುದು ಅಥವಾ ಪ್ರಖರ ಬೆಳಕನ್ನು ಸೂಸುವ ಲೈಟ್ ಅಳವಡಿಸುವಂತಿಲ್ಲ.


ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ


ಅಲ್ಲದೆ ಕಂಪನಿಯವರು ನಿಗದಿಪಡಿಸಿದ ಹೆಡ್ ಲೈಟ್ ಮಾತ್ರ ವಾಹನದಲ್ಲಿ ಅಳವಡಿಸಬಹುದಾಗಿದ್ದು, ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ ಒಂದು ಅಥವಾ ಎರಡು ಹೆಡ್ ಲೈಟ್ ಮಾತ್ರ ಹೊಂದಿರಬೇಕಿದೆ. 4 ಅದಕ್ಕಿಂತ ಹೆಚ್ಚು ಚಕ್ರಗಳಿರುವ ವಾಹನಗಳು ಎರಡು ಅಥವಾ ನಾಲ್ಕು ಹೆಡ್ ಲೈಟ್ ಮಾತ್ರ ಹೊಂದಿರಬೇಕು. ಈ ಲೈಟ್ ಗಳು ಹೊರ ಸೂಸುವ ಬೆಳಕು ಶಾಶ್ವತವಾಗಿ ಕೆಳ ಮುಖವಾಗಿರಬೇಕಿದ್ದು, ನಿಯಮ ಮೀರಿ ಕಣ್ಣು ಕುಕ್ಕುವ ಹೆಡ್ ಲೈಟ್ ಗಳನ್ನು ಯಾವುದೇ ಕಾರಣಕ್ಕೂ ಅಳವಡಿಸುವಂತಿಲ್ಲ.


ಇದನ್ನೂ ಓದಿ: ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?


ವಾಹನದಿಂದ ಹೊರ ಸೂಸುವ ಹೆಡ್ ಲೈಟ್ ಬೆಳಕು ಎಂಟು ಮೀಟರ್ ದೂರದಲ್ಲಿರುವ ಮತ್ತೊಂದು ವಾಹನದ ಚಾಲಕನ ಕಣ್ಣು ಕುಕ್ಕುವಂತಿರಬಾರದು. ಅಲ್ಲದೆ ಬಲಭಾಗದಲ್ಲಿ ಅಳವಡಿಸಿರುವ ಹೆಡ್ ಲೈಟ್ ಬಲಕ್ಕೆ 0.5 ಮೀಟರ್ ದೂರದಲ್ಲಿ ಕುಳಿತಿರುವ ಎದುರಿನ ವಾಹನದಲ್ಲಿನ ವ್ಯಕ್ತಿಯ ಕಣ್ಣು ಕುಕ್ಕಬಾರದು. ಈ ನಿಯಮಗಳನ್ನು ಮೀರಿದರೆ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಕಣ್ಣು ಕುಕ್ಕವ ಹೆಡ್ ಲೈಟ್ ಹಾಕಿದ್ದರೆ ಈಗಲೇ ತೆರವುಗೊಳಿಸಿ.


ಇದನ್ನೂ ಓದಿ: 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ


ಈ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್..!:
ವಾಹನ ಸವಾರರೇ ವೇಗದ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಗಸ್ಟ್ 1 ರಿಂದ 130 ಕಿ.ಮೀ. ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ FIR ದಾಖಲಿಸಲಾಗುತ್ತದೆ.

ಹೌದು, ವೇಗದ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆಗಸ್ಟ್ 1 ರಿಂದ 130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ FIR ದಾಖಲಿಸಲಾಗುತ್ತದೆ. ರಾಜ್ಯಾದ್ಯಂತ ಈ ಕ್ರಮ ಜಾರಿಗೆ ಬರಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ) ಅಲೋಕ್ ಕುಮಾರ್ ತಿಳಿಸಿದ್ದಾರೆ.


ಇದನ್ನೂ ಓದಿ: PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


(New-Rules) ಸ್ಪಾಟ್ ಸ್ಪೀಡ್ ಮತ್ತು ಸೆಕ್ಷನಲ್ ಸ್ಪೀಡ್ ಆಧಾರದಲ್ಲಿ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು. ಈ ರೀತಿಯ ಪ್ರಕರಣಗಳಲ್ಲಿ 2,000 ವರೆಗೆ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

New-Rules:ಆಗಸ್ಟ್ 1 ರಿಂದ ಈ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್..!
New-Rules:ಆಗಸ್ಟ್ 1 ರಿಂದ ಈ ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್..!

ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?