new BPL card: ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ!

(new BPL card) ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ರೇಷನ್‌ ಕಾರ್ಡ್‌ ಹೊಂದಿರಬೇಕು. ಆದರೆ, ಕೆಲ ಬಡ ಕುಟುಂಬದಲ್ಲಿ ರೇಷನ್‌ ಕಾರ್ಡ್‌ ಹೊಂದಿರದ ಕಾರಣ ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ರಾಜ್ಯದ ಬಡಜನತೆಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದಾರೆ.


ಇದನ್ನೂ ಓದಿ; ಅಡಿಕೆ ಕ್ಯಾನ್ಸರ್‌ ಕಾರಕ…; ಬೆಳೆಗಾರರಿಗೆ ಬಿಗ್ ಶಾಕ್ ಕೊಟ್ಟ WHO ವರದಿ!


ಹೌದು, ಭಾರತ್ ಜೋಡೋ ಭವನದಲ್ಲಿರುವ ಇಂದಿರಾಗಾಂಧಿ ಅಡಿಟೋರಿಯಂನಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಯಾವ ಬಡ ಕುಟುಂಬದವರು ಅನ್ನಭಾಗ್ಯ ಯೋಜನೆಯಿಂದ ವಂಚಿತವಾಗಬಾರದು. ಇದಕ್ಕಾಗಿ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.


ಇದನ್ನೂ ಓದಿ; ಆಧಾರ್‌ ಕಾರ್ಡ್‌ ಹೊಂದಿರುವವರಿಗೆ ಮುಖ್ಯ ಮಾಹಿತಿ; ತಪ್ಪದೇ ಈ ಸುದ್ದಿ ಓದಿ


ಕೆಲವು ಅನರ್ಹರು ಸೌಲಭ್ಯ ಪಡೆದುಕೊಂಡರೂ ಚಿಂತೆ ಇಲ್ಲ. ಅರ್ಹರು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಬಾರದು. ಎಲ್ಲ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಸಿಗಬೇಕು. ಸರ್ಕಾರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿದೆ ಎಂದು ಮಾದ್ಯಮಗಳು ಬರೆದಿವೆ, ಆದರೆ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಸೂಚಿಸಲಾಗಿದೆ. ಎಲ್ಲಾ ಬಡವರಿಗೂ ಸೌಲಭ್ಯ ದೊರಕಬೇಕು. ಅನರ್ಹರಿಗೆ ಮಾತ್ರ ಎಪಿಎಲ್ ಕಾರ್ಡು ನೀಡಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ; ಇನ್ಮುಂದೆ ಈ ವಾಹನಗಳು ಟೋಲ್ ತೆರಿಗೆ ಪಾವತಿಸಬೇಕಾಗಿಲ್ಲ; ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!


ಹೀಗಾಗಿ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

new BPL card: ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ!
new BPL card: ಹೊಸ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ!

ಇತ್ತೀಚಿನ ಜನಪ್ರಿಯ ಸುದ್ದಿಗಳು