Indian Army Rally: ಭಾರತೀಯ ಸೇನೆಯ ಅಗ್ನಿಪಥ್ ಸೇನಾ ನೇಮಕಾತಿ (Indian Army Agneepath Army Recruitment) ರ್ಯಾಲಿಯು ಉಡುಪಿಯಲ್ಲಿ ಜುಲೈ 17 ರಿಂದ 25 ರ ವರೆಗೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ಕುರಿತು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ; ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕನ್ನಡದ ನ್ಯೂಸ್ ಚಾನೆಲ್ ನಲ್ಲಿ ಕಾಣಿಸಿಕೊಂಡ ai ಆ್ಯಂಕರ್
ಯಾವೆಲ್ಲಾ ಜಿಲ್ಲೆಯ ಅಭ್ಯರ್ಥಿಗಳಿಗೆ ಅವಕಾಶ?
ಇನ್ನು ರ್ಯಾಲಿಯಲ್ಲಿ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ರ್ಯಾಲಿಗೆ ಇದುವರೆಗೆ 7,000 ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಅಗ್ನಿಪಥ್ ಯೋಜನೆ ಹೇಗೆ?
ಭಾರತದ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಪರಿಚಯಿಸಿತ್ತು. ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಯುವಕ, ಯುವತಿಯರಿಗೆ ಅವಕಾಶವನ್ನು ನೀಡಲಾಗುತ್ತಿದೆ. ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಯುವಕರಿಗೆ ಅಗ್ನಿವೀರ್ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸಲು ಸರ್ಕಾರ ಈ ಯೋಜನೆ ರೂಪಿಸಿದೆ. ‘ಅಗ್ನಿವೀರ್ಸ್’ಗೆ ಉತ್ತಮ ವೇತನ ಪ್ಯಾಕೇಜ್ ಮತ್ತು 4 ವರ್ಷಗಳ ಸೇವೆಯ ನಂತರ ನಿರ್ಗಮನ ನಿವೃತ್ತಿ ಪ್ಯಾಕೇಜ್ ನೀಡಲಾಗುತ್ತದೆ. ಅಲ್ಲದೆ ಸರ್ಕಾರಿ, ಅರೆ ಸರ್ಕಾರಿ ಸೇರಿದಂತೆ ಹಲವಾರು ಖಾಸಗಿ ಕಂಪೆನಿಗಳಲ್ಲೂ ಅಗ್ನಿವೀರರಿಗೆ ಮೀಸಲಾತಿ ನೀಡಲಾಗುತ್ತಿದೆ.
ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಹ್ಯುಂಡೈ ಎಕ್ಸ್ಟರ್ ಕಾರು ಲಾಂಚ್
ಯಾವುದೆಲ್ಲಾ ಖಾಲಿ ಹುದ್ದೆಗಳು ಇದೆ?
• ಅಗ್ನಿವೀರ್ ಜನರಲ್ ಡ್ಯೂಟಿ (Agniveer General Duty)
• ಅಗ್ನಿವೀರ್ ಟೆಕ್ನಿಕಲ್ (Agniveer Technical)
• ಅಗ್ನಿವೀರ್ ಟ್ರೇಡ್ಸ್ಮೆನ್ (Agniveer Tradesmen)
• ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಹುದ್ದೆ (Agniveer Clerk/Store Keeper Post)
ಅಗ್ನಿವೀರರಿಗೆ ಸಂಬಳ ಎಷ್ಟು?
• ಮೊದಲ ವರ್ಷ ರೂ. 30,000
• ಎರಡನೇ ವರ್ಷ ರೂ. 33,000
• ಮೂರನೇ ವರ್ಷ ರೂ. 35,500
• ನಾಲ್ಕನೇ ವರ್ಷ ರೂ. 40,000 ನೀಡಲಾಗುತ್ತದೆ.
ಇದನ್ನೂ ಓದಿ; ರಘು ಸಕಲೇಶಪುರ ಸೇರಿದಂತೆ ಮೂರು ಜನರಿಗೆ ನಿರೀಕ್ಷಣಾ ಜಾಮೀನು ನೀಡಿದ ನ್ಯಾಯಾಲಯ
ಇದರೊಂದಿಗೆ ಉಚಿತವಾಗಿ ವೈದ್ಯಕೀಯ ವಿಮೆ ದೊರೆಯುತ್ತದೆ. ನಾಲ್ಕು ವರ್ಷ ಸೇವೆ ಸಲ್ಲಿಸಿ ಹೊರಬರುವ ಅಗ್ನಿವೀರರಿಗೆ ಸುಮಾರು 11.70 ಲಕ್ಷ ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ತೆರಿಗೆ ಇರುವುದಿಲ್ಲ. ಆದರೆ ಅಗ್ನಿವೀರರು ನಿವೃತ್ತರಾದ ಮೇಲೆ ಅವರಿಗೆ ಪಿಂಚಣಿ ಇರುವುದಿಲ್ಲ.
ವಯಸ್ಸಿನ ಮಿತಿ ಎಷ್ಟು?
ಕನಿಷ್ಠ: 17.5 ವರ್ಷಗಳು
ಗರಿಷ್ಠ: 21 ವರ್ಷಗಳು( 13 ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.)
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-13.07.2023
- ಅನ್ನ ಭಾಗ್ಯ ಯೋಜನೆ:ಅಕ್ಕಿ ಜೊತೆ ನಿಮಗೂ ಹಣ ಬಂತಾ?.ಇನ್ನೂ ಬಂದಿಲ್ವಾ, ಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿ?
- ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 13-07-2023
ಅಗತ್ಯವಿರುವ ದಾಖಲೆಗಳು ಯಾವುವು?
• 10ನೇ 12ನೇ ತರಗತಿಯ ಅಂಕಪಟ್ಟಿ (10th 12th Marks Card)
• ನಿವಾಸ ಪ್ರಮಾಣಪತ್ರ (Residence Certificate)
• ವರ್ಗ ಪ್ರಮಾಣಪತ್ರ
• NCC ಪ್ರಮಾಣಪತ್ರ ( ಸಿ ಸರ್ಟಿಫಿಕೇಟ್ ನಲ್ಲಿ ಕನಿಷ್ಟ “ಬಿ” ಗ್ರೇಡ್ ಹೊಂದಿರಬೇಕು)
• ಕ್ರೀಡಾ ಪ್ರಮಾಣಪತ್ರ (Sports Certificate)
• ಅಧಾರ್ ಕಾರ್ಡ್ ಅಥವಾ ಯಾವುದೇ ಗುರುತಿನ ಚೀಟಿ, ಫೋಟೋ ಇನ್ನುಳಿದ ಅಗತ್ಯ ದಾಖಲೆಗಳು
ಇದನ್ನೂ ಓದಿ; ಮಳೆಗಾಲದಲ್ಲಿ ಗೆಳೆಯರ ಜೊತೆ ಟ್ರೆಕ್ಕಿಂಗ್ ಮಾಡಲು ಚಿಕ್ಕಮಗಳೂರಿನ ಬೆಸ್ಟ್ ಜಾಗ ಇಲ್ಲಿದೆ ನೋಡಿ
ಅಜಿ ಸಲ್ಲಿಸುವುದು ಹೇಗೆ?
ಹಂತ 1: ಅಧಿಕೃತ ಸೈಟ್‌ಗೆ ಭೇಟಿ ನೀಡಿ- joinindianarmy.nic.in
ಹಂತ 2: ಮುಖಪುಟದಿಂದ, ‘ಆನ್‌ಲೈನ್ ಅಪ್ಲಿಕೇಶನ್ ಪೋರ್ಟಲ್’ ಮೇಲೆ ಕ್ಲಿಕ್ ಮಾಡಿ.
ಹಂತ 3: ಅರ್ಜಿ ನಮೂನೆಯನ್ನು ಭರ್ತಿ (Online Application) ಮಾಡಿ
ಹಂತ 4: ಎಲ್ಲಾ ಅಗತ್ಯ ಮಾಹಿತಿ ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಒದಗಿಸಿ.
ಹಂತ 5: ಎಲ್ಲಾ ಮಾಹಿತಿಯನ್ನು ಮರುಪರಿಶೀಲಿಸಿ ಮತ್ತು ‘Submit’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 6: ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳಿ. ಆನ್ ಲೈನ್ ನಲ್ಲಿ ನಿಮಗೆ ಅಪ್ಲೈ ಮಾಡಲು ಸಾಧ್ಯವಾಗದಿದ್ದರೆ ಹತ್ತಿರದ ಯಾವುದಾದರೂ ಕಂಪ್ಯೂಟರ್ ಶಾಪ್ ಗೆ ತೆರಳಿ ಅರ್ಜಿ ಸಲ್ಲಿಸಬಹುದು.