MNREGA:- ಕೇಂದ್ರದ MNREGA ಯೋಜನೆಯಡಿ 2 ಲಕ್ಷ ಸಾಲ ಲಭ್ಯ

(MNREGA:-) ಕೇಂದ್ರ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಈಗ ಇದರ ಭಾಗವಾಗಿ ರೈತರಿಗೆ 2 ಲಕ್ಷ ರೂಪಾಯಿ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತಿದೆ.


ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್‌ ಶಿಪ್‌; ಅರ್ಜಿ ಸಲ್ಲಿಸಲು ಸಿಂಪಲ್‌ ಸ್ಟೆಪ್‌ ಇಲ್ಲಿದೆ ನೋಡಿ


ಹೌದು, ಸರ್ಕಾರವು MNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಮೂಲಕ ಅನೇಕ ಪ್ರಯೋಜನಗಳನ್ನ ನೀಡುತ್ತಿದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ರೈತರಿಗೆ ಆರ್ಥಿಕ ಲಾಭ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ; ವಿದ್ಯಾರ್ಥಿಗಳ ಖಾತೆಗೆ 50,000 ಸ್ಕಾಲರ್‌ ಶಿಪ್‌; ಈ ಸ್ಟೆಪ್‌ ಫಾಲೋ ಮಾಡಿ ಅರ್ಜಿ ಸಲ್ಲಿಸಿ


MNREGA ಯೋಜನೆಯ ಭಾಗವಾಗಿ ಸರ್ಕಾರವು ಹೈನುಗಾರರಿಗೆ ದನದ ಕೊಟ್ಟಿಗೆ ನಿರ್ಮಿಸಲು 2 ಲಕ್ಷದವರೆಗೆ ಸಹಾಯವನ್ನ ನೀಡುತ್ತಿದೆ ಮತ್ತು ಅದರ ಮೇಲೆ ಸಹಾಯಧನವನ್ನೂ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪಶುಸಂಗೋಪನೆಯನ್ನು ಉತ್ತೇಜಿಸುವ ಭಾಗವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಬೆಂಬಲ ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.


ಇದನ್ನೂ ಓದಿ; ಆಧಾರ್ ಕಾರ್ಡ್ ಇದ್ದವರಿಗೆ ಹೊಸ ಆದೇಶ; ಏನದು? ಇಲ್ಲಿದೆ ನೋಡಿ


MGNREGA ಪಶುಸಂಗೋಪನೆ ಯೋಜನೆಗೆ ಕೆಲವು ಪ್ರಮುಖ ಅರ್ಹತಾ ಮಾನದಂಡಗಳಿವೆ. ಈ ಮಾನದಂಡಗಳನ್ನ ಸ್ಥಳೀಯ ಸರ್ಕಾರ ಮತ್ತು ಪ್ರಾದೇಶಿಕ ಆಧಾರದ ಮೇಲೆ ರೂಪಿಸಲಾಗಿದೆ. ಈ ಯೋಜನೆಯ ಸಂಪೂರ್ಣ ವಿವರಗಳನ್ನ ನಿಮ್ಮ ಜಿಲ್ಲೆಯ ಗ್ರಾಮ ಪಂಚಾಯತಿ ಅಥವಾ ಪುರಸಭೆಯ ಕಚೇರಿಯನ್ನ ಸಂಪರ್ಕಿಸಬಹುದಾಗಿದೆ.


ಇದನ್ನೂ ಓದಿ; ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ!, ಎಷ್ಟಿದೆ ನೋಡಿ


MNREGA ಪಶುಸಂಗೋಪನೆ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಹತ್ತಿರದ ಬ್ಯಾಂಕ್‌’ಗೆ ಭೇಟಿ ನೀಡಬೇಕು ಮತ್ತು ಆನ್‌ ಲೈನ್ ಅರ್ಜಿ ನಮೂನೆಯನ್ನ ಭರ್ತಿ ಮಾಡಬೇಕಾಗುತ್ತದೆ. ಅದರಲ್ಲಿ ಕೇಳಿರುವ ಸಂಪೂರ್ಣ ಮಾಹಿತಿಯನ್ನ ಎಚ್ಚರಿಕೆಯಿಂದ ನಮೂದಿಸಿ. ಅದೇ ರೀತಿ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.


ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆ; 1.22 ಕೋಟಿ ಮಹಿಳೆಯರಿಗೆ 30,285 ಕೋಟಿ ಧನಸಹಾಯ


ಅದರ ನಂತರ ನಿಮ್ಮ ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪರಿಶೀಲಿಸಲಾಗುತ್ತದೆ. ಅರ್ಜಿಯ ಪರಿಶೀಲನೆಯ ನಂತರ ನಿಮಗೆ MNREGA ಯೋಜನೆಯಡಿ ಹೈನುಗಾರರಿಗೆ ದನದ ಕೊಟ್ಟಿಗೆ ನಿರ್ಮಿಸಲು ಪ್ರಯೋಜನಗಳನ್ನು ಒದಗಿಸಲಾಗುತ್ತದೆ.

MNREGA:- ಕೇಂದ್ರದ MNREGA ಯೋಜನೆಯಡಿ 2 ಲಕ್ಷ ಸಾಲ ಲಭ್ಯ
MNREGA:- ಕೇಂದ್ರದ MNREGA ಯೋಜನೆಯಡಿ 2 ಲಕ್ಷ ಸಾಲ ಲಭ್ಯ

ಇತ್ತೀಚಿನ ಜನಪ್ರಿಯ ಸುದ್ದಿಗಳು