Machinery:ಯಂತ್ರೋಪಕರಣ ಖರೀದಿಗೆ ಸರ್ಕಾರದಿಂದ 90ರಷ್ಟು ಸಬ್ಸಿಡಿ

(Machinery) ರೈತರಿಗೆ ಕೃಷಿ ಯಾಂತ್ರೀಕರಣ ಹಾಗೂ ಕೃಷಿ ಸಂಸ್ಕರಣ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದ್ದು, ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೆ ಕೇಂದ್ರದಿಂದ ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


ಎಷ್ಟು ಸಹಾಯಧನ ಲಭ್ಯ?;
ಪ್ರಸಕ್ತ ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕೊಚ್ಚುವ ಯಂತ್ರಗಳು, ಪವರ್ ವೀಡರ್, ಪವರ್ ಸ್ಪ್ರೇಯರ್ಸ್, ಡೀಸೆಲ್ ಪಂಪ್‍ಸೆಟ್, ಪ್ಲೋರ್‍ಮಿಲ್, ಯಂತ್ರ ಚಾಲಿತ ಮೋಟೋಕಾರ್ಟ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು ಹಾಗೂ ತುಂತುರು ನೀರಾವರಿ ಯೋಜನೆಯಡಿಯಲ್ಲಿ ಶೇ.90ರ ರಿಯಾಯ್ತಿ ದರದಲ್ಲಿ ತುಂತುರು ನೀರಾವರಿ ಘಟಕ(ಹೆಚ್‍ಡಿಪಿಇ ಪೈಪ್ಸ್) ವಿತರಿಸಲಾಗುತ್ತಿದೆ.


ಇದನ್ನೂ ಓದಿ; BPL ಕಾರ್ಡ್ ಫಲಾನುಭವಿಗಳಿಗೆ ಸಿಹಿ ಸುದ್ದಿ; ಪರಿಷ್ಕರಣೆಯನ್ನು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ


ಈ ದಾಖಲೆ ಹೊಂದಿರುವುದು ಕಡ್ಡಾಯ:
* ಪಹಣಿ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್
* ಎರಡು ಭಾವಚಿತ್ರ
* ರೂ.100 ರ ಛಾಪಾ ಕಾಗದ


ಇದನ್ನೂ ಓದಿ; KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಎಲ್ಲಿ ಅರ್ಜಿ ಸಲ್ಲಿಸುವುದು?;
ಅಗತ್ಯ ದಾಖಲೆಯೊಂದಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Machinery:ಯಂತ್ರೋಪಕರಣ ಖರೀದಿಗೆ ಸರ್ಕಾರದಿಂದ 90ರಷ್ಟು ಸಬ್ಸಿಡಿ
Machinery:ಯಂತ್ರೋಪಕರಣ ಖರೀದಿಗೆ ಸರ್ಕಾರದಿಂದ 90ರಷ್ಟು ಸಬ್ಸಿಡಿ

ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ


ಇತ್ತೀಚಿನ ಜನಪ್ರಿಯ ಸುದ್ದಿಗಳು