Sunday, September 24, 2023
Homeಮಲೆನಾಡುಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಶಿವಮೊಗ್ಗ; (ನ್ಯೂಸ್ ಮಲ್ನಾಡ್ ವರದಿ) ನಿವೃತ್ತ ಅರಣ್ಯ ಅಧಿಕಾರಿ ಮತ್ತು ವರ್ಗಾವಣೆಗೊಂಡ ತಹಶೀಲ್ದಾರ್ ಮನೆ ಹಾಗೂ ಕಚೇರಿ ತೋಟಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ; ಚಲಿಸುತ್ತಿದ್ದ ಟ್ಯಾಕ್ಟರ್ ಪಲ್ಟಿ; ಓರ್ವನ ಸಾವು

ಇದನ್ನೂ ಓದಿ; ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಪ್ರಾಣಾಪಾಯದಿಂದ ಪಾರು

ಬೆಳ್ಳೆಂಬೆಳಿಗ್ಗೆ ದಾವಣಗೆರೆ ಲೋಕಾಯುಕ್ತರಿಂದ ದಾಳಿ ನಡೆದಿದ್ದು ನಿವೃತ್ತ ಅರಣ್ಯ ಡಿಎಫ್‌ಒ ಐಎಂ ನಾಗರಾಜ್ ಮತ್ತು ಹೊಳಲ್ಕೆರೆ ತಹಶೀಲ್ದಾರ್ ಆಗಿರುವ ಎನ್ ಜೆ ನಾಗರಾಜ್ ಮನೆ, ತೋಟ, ಹಾಗೂ ಶಿಕಾರಿಪುರದ ಮನೆಯ ಮೇಲೆ ಲೋಕಾಯುಕ್ತ ಎಸ್ಪಿ ಕೌಶಲೇಂದ್ರ ನೇತೃತ್ವದಲ್ಲಿ ದಾಳಿ ನಡೆದಿದೆ.

ಶಿವಮೊಗ್ಗದಲ್ಲಿರುವ ನಿವೃತ್ತಾಧಿಕಾರಿ ಐ ಎಂ ನಾಗರಾಜ್ ಅವರ ಮನೆ ಮತ್ತು ಫಾರಂ ಹೌಸ್ ಮೇಲೆ ದಾಳಿ ನಡೆದಿದೆ. ಶಿಕಾರಿಪುರದಲ್ಲಿರುವ ಹೊಳಲ್ಕೆರೆ ತಹಶೀಲ್ದಾರ್ ಎನ್ ಜೆ ನಾಗರಾಜ್ ಮನೆ ಮತ್ತು ತೋಟದಲ್ಲಿ ದಾಳಿ ನಡೆದಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


Most Popular

Recent Comments