Kalika Deepa: 4-6ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ

(Kalika Deepa) 2025-26ನೇ ಸಾಲಿನಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 4 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏಕ್ ಸ್ಟೆಪ್ (EkStep) ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಗಣಿತದ ಆರಂಭಿಕ ಸಾಮರ್ಥ್ಯಗಳಿಸಲು ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು “ಕಲಿಕಾ ದೀಪ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.


ನ್ನೂ ಓದಿ: ಬಿಗ್ ಬಾಸ್​ ಕನ್ನಡ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ?


(Kalika Deepa) ಆದೇಶದಲ್ಲಿ ಏನಿದೆ?:
ಜುಲೈ 2024ರಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಏಕ್ ಸ್ಟೆಪ್ (EkStep) ಫೌಂಡೇಷನ್, ಬೆಂಗಳೂರು ರವರ ನಡುವೆ ರಾಜ್ಯಾದ್ಯಾಂತ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಅವಕಾಶಗಳನ್ನು ವೃದ್ಧಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿರುತ್ತದೆ. “ಕಲಿಕಾ ದೀಪ” ಕಾರ್ಯಕ್ರಮದ ಉದ್ದೇಶವು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಉಪಯೋಗಿಸಿ ಭಾಷೆ ಮತ್ತು ಗಣಿತ ವಿಷಯಗಳಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವುದಾಗಿದೆ.


ನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ತೆರವಿಗೆ SIT ರಚಿಸಿ ಆದೇಶ


ಏಕ್ ಸ್ಟೆಪ್ (EkStep) ಫೌಂಡೇಷನ್ ಸಂಸ್ಥೆಯವರು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಬಳಸಿ ಸಿದ್ದಪಡಿಸಿದ್ದ ತಂತ್ರಾಂಶದ ಸಹಾಯದೊಂದಿಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯ ಅಭಿವೃದ್ಧಿಗಾಗಿ 2024-25ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ತುಮಕೂರು ಮತ್ತು ಕೊಪ್ಪಳ ಜಿಲ್ಲೆಗಳ ತಲಾ ಮೂರು ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಿಸಲಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಓದುವ ತೊಡಕುಗಳು ಕಡಿಮೆ ಆಗುತ್ತಿದ್ದು, ಅವರ ಕಲಿಕಾ ಕೊರತೆಗಳು ನೀಗುತ್ತಿವೆ. ಈ ತಂತ್ರಜ್ಞಾನವು ವಿದ್ಯಾರ್ಥಿಗಳ ಭಾಷಾ ಪ್ರಾವೀಣ್ಯತೆಯನ್ನು ಉತ್ತಮಗೊಳಿಸಿ, ಅವರಲ್ಲಿ ಇತರ ವಿಷಯಗಳ ಕಲಿಕೆಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿರುತ್ತದೆ.


ನ್ನೂ ಓದಿ: 10th ಪಾಸ್‌ ಆದವರಿಗೆ ಜಾಬ್‌ ಆಫರ್; 23.000 ಸಂಬಳ


(Kalika Deepa) 2025-26ನೇ ಸಾಲಿನಿಂದ ಕಾರ್ಯನಿರತ ಕಂಪ್ಯೂಟರ್ ಸೌಲಭ್ಯ ಹೊಂದಿರುವ ರಾಜ್ಯದ ಸುಮಾರು 1,145 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಮತ್ತು ಗಣಿತದ ಆರಂಭಿಕ ಸಾಮರ್ಥ್ಯಗಳಿಸಲು ಏಕ್ ಸ್ಟೆಪ್ (EkStep) ಫೌಂಡೇಷನ್ ಸಂಸ್ಥೆಯ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಆಧಾರಿತ “ಕಲಿಕಾ ದೀಪ” ಕಾರ್ಯಕ್ರಮವನ್ನು 4 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 1,44,062 ವಿದ್ಯಾರ್ಥಿಗಳಿಗಾಗಿ ಅನುಷ್ಠಾನಗೊಳಿಸಲು ತಗಲುವ ಮೊತ್ತ ಭರಿಸಲು ಸರ್ಕಾರದ ಅನುಮೋದನೆ ನೀಡಿದೆ.

Kalika Deepa: 4-6ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ
Kalika Deepa: 4-6ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ

ಇತ್ತೀಚಿನ ಜನಪ್ರಿಯ ಸುದ್ದಿಗಳು (Kalika Deepa)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ