HSRP- Number Plate: ನಾಲ್ಕು ದಿನಗಳ ನಂತರ ಫೈನ್ ಗ್ಯಾರಂಟಿ!

(HSRP- Number Plate:) ರಾಜ್ಯದ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದ್ದು, ಅಳವಡಿಕೆ ಮಾಡದೇ ಇರುವವರು ತಪ್ಪದೆ ಸೆ. 15 ರೊಳಗೆ ಅಳವಡಿಕೆ ಮಾಡಿಕೊಳ್ಳಿ.


ಇದನ್ನೂ ಓದಿ; ಸಂತೂರ್ ಸ್ಕಾಲರ್ಶಿಪ್ ಪ್ರೋಗ್ರಾಂ; ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 24,000 ಸ್ಕಾಲರ್ ಶಿಪ್; ದಾಖಲೆ, ಅರ್ಹತೆ, ಅರ್ಜಿ ಸಲ್ಲಿಕೆ ಹೇಗೆ ಎಂಬ ಡಿಟೈಲ್ಸ್ ಇಲ್ಲಿದೆ


ಈಗಾಗಲೇ ಸರ್ಕಾರ ಹಲವು ಬಾರಿ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ಸರ್ಕಾರ ನಿಗದಿ ಪಡಿಸಿತ್ತು. ಸದ್ಯ ಸರ್ಕಾರ ಸೆಪ್ಟೆಂಬರ್ 15, 2024 ನ್ನು ಕೊನೆಯ ದಿನಾಂಕವಾಗಿ ಘೋಷಿಸಿದೆ. ಇನ್ನು ಸೆಪ್ಟೆಂಬರ್ 15 ನಂತರ ನಂಬರ್ ಪ್ಲೇಟ್ ಹಾಕದೆ ಇರುವ ವಾಹನ ಸವಾರರಿಗೆ ದಂಡ ಕೂಡ ವಿಧಿಸಲಾಗುತ್ತದೆ.

2019 ಎಪ್ರಿಲ್ 1 ಕ್ಕಿಂತ ಹಿಂದಿನ ವಾಹನಗಳು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪೊಲೀಸರು ದಂಡ ವಿಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ನೀವು HSRP ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಸಿದ್ರೆ ಅದರ ರಶೀದಿಯನ್ನು ಪೊಲೀಸರಿಗೆ ತೋರಿಸಿದ್ರೆ ನೀವು ದಂಡದಿಂದ ಬಚಾವ್ ಆಗಬಹುದಾಗಿದೆ.


ಇದನ್ನೂ ಓದಿ; ಇನ್ಫೋಸಿಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ; ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ ಶಿಪ್; ಈ ಅರ್ಹತೆ, ದಾಖಲೆ ಕಡ್ಡಾಯ


ಹೌದು, HSRP ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಕೊಂಡು ನಂಬರ್ ಪ್ಲೇಟ್ ಬರುವುದು ತಡವಾದರೆ ನೋಂದಣಿ ಮಾಡಿಸಿದ ರಶೀದಿಯನ್ನು ತೋರಿಸಿದರೆ ನೀವು ದಂಡದಿಂದ ರಿಯಾಯಿತಿ ಪಡೆಯಬಹುದು.

ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ‍್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು HSRP) ಅಳವಡಿಸುವುದು ಕಡ್ಡಾಯವಾಗಿದೆ.


ಇದನ್ನೂ ಓದಿ; ವಾಹನ ಮಾಲೀಕರ ಗಮನಕ್ಕೆ; ಇನ್ನೂ ನಿಮ್ಮ ವಾಹನಕ್ಕೆ HSRP ನಂಬರ್​ ಪ್ಲೇಟ್ ಹಾಕಿಸಿಲ್ಲವೇ..?​; ನಂಬರ್ ಪ್ಲೇಟ್ ಅಳವಡಿಸಲು 4 ದಿನ ಮಾತ್ರ ಬಾಕಿ; ಇನ್ಮೇಲೆ ಬೀಳುತ್ತೆ ಭಾರೀ ದಂಡ..!


ನಂಬರ್ ಪ್ಲೇಟ್ ಅಳವಡಿಕೆ ಹೇಗೆ?;
* https://transport.karnataka.gov.in ಅಥವಾ www.siam.in ಜಾಲತಾಣಕ್ಕೆ ಭೇಟಿ ನೀಡಿ, Book HSRP ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
* ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
* HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
* HSRP ಶುಲ್ಕವನ್ನು ಆನ್‌ ಲೈನ್‌ ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
* ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ. ರವಾನಿಸಲಾಗುವುದು.
* ನಿಮ್ಮಅನುಕೂಲಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
* ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.
* ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.


ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಈ ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಿ


HSRP ನಂಬರ್ ಪ್ಲೇಟ್ ಅಳವಡಿಸೋ ಬಗ್ಗೆ ಪ್ರಮುಖ ಮಾಹಿತಿ
* https://transport.karnataka.gov.in ಅಥವಾ www.siam.in ಮೂಲಕ ಮಾತ್ರ HSRP ಅಳವಡಿಕೆಗೆ
ಕಾಯ್ದಿರಿಸಿಕೊಳ್ಳಿ.
* ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹಾಲೋಗ್ರಾಮ್ / IND ಮಾರ್ಕ್ | ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP / ಒಂದೇ ರೀತಿಯ ಪ್ಲೇಟ್‌ ಗಳು / ಸ್ಮಾರ್ಟ್ ನಂಬರ್ ಪ್ಲೇಟ್‌ ಗಳನ್ನು ಅಳವಡಿಸುವಂತಿಲ್ಲ. ಅವುಗಳು HSRP ಫಲಕಗಳಾಗಿರುವುದಿಲ್ಲ.
* HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು/ರದ್ದತಿ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ.
* ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ HSRP ರಸೀದಿಯನ್ನು ಹಾಜರುಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ.

HSRP- Number Plate: ನಾಲ್ಕು ದಿನಗಳ ನಂತರ ಫೈನ್ ಗ್ಯಾರಂಟಿ!
HSRP- Number Plate: ನಾಲ್ಕು ದಿನಗಳ ನಂತರ ಫೈನ್ ಗ್ಯಾರಂಟಿ!

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
    16. ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!