HSRP-Deadline | HIGH SECURITY NUMBER PLATE

(HSRP-Deadline) ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ (HSRP) ಅಳವಡಿಕೆ ಮಾಡದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಈಗಾಗಲೇ ರಾಜ್ಯ ಸರ್ಕಾರ HSRP ಕೊನೆ ದಿನಾಂಕವನ್ನು ವಿಸ್ತರಿಸುತ್ತಾ ಬಂದಿದೆ. ಇದೀಗ ಮತ್ತೆ ಹಳೆಯ ನಂಬರ್‌ ಪ್ಲೇಟ್‌ಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಅಳವಡಿಸಲು ಗಡುವು ವಿಸ್ತರಣೆ ಮಾಡಿದೆ.


ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್‌ ಶಿಪ್‌; ಅರ್ಜಿ ಸಲ್ಲಿಸಲು ಸಿಂಪಲ್‌ ಸ್ಟೆಪ್‌ ಇಲ್ಲಿದೆ ನೋಡಿ


ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ ಅವಧಿ ಮುಗಿದಿದ್ದರೂ ಸಹ ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಬಂದಿದೆ. ಬರೋಬ್ಬರಿ ನಾಲ್ಕು ಬಾರಿ ಗಡುವು ವಿಸ್ತರಿಸಿದೆ. ಆದರೂ ಸಹ 1.90 ಕೋಟಿ ಹಳೆ ವಾಹನಗಳ ಪೈಕಿ 55 ಲಕ್ಷ ವಾಹನಗಳಿಗೆ ಮಾತ್ರ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಇನ್ನೂ ಬಾಕಿ ವಾಹನಗಳ ಮಾಲೀಕರು ಅಳವಡಿಕೆ ಮಾಡಿಕೊಂಡಿಲ್ಲ. ಹೀಗಾಗಿ ರಾಜ್ಯ ಸಾರಿಗೆ ಇಲಾಖೆ ಇದೀಗ ಮತ್ತೊಂದು ಅವಕಾಶ ಮಾಡಿಕೊಟ್ಟಿದೆ.


ಇದನ್ನೂ ಓದಿ; ರೇಷನ್‌ ಕಾರ್ಡ್‌ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತಾ?; ಏನಂತಾರೆ ಅಧಿಕಾರಿಗಳು?


ಒಂದು ವೇಳೆ ನವೆಂಬರ್ 30ರೊಳಗೆ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದಿದ್ದರೆ ಡಿಸೆಂಬರ್ 1ರಿಂದ ದಂಡ ವಿಧಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಹೀಗಾಗಿ 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕಿದೆ.


ಇದನ್ನೂ ಓದಿ; ಪಾನ್-ಆಧಾರ್ ಕಾರ್ಡ್‌ ಹೊಂದಿರುವವರ ಗಮನಕ್ಕೆ;  ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಹೆಚ್.ಎಸ್.ಆರ್.ಪಿ ಅಳವಡಿಕೆಯ ಕಾರ್ಯವಿಧಾನ
* https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
* ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
* HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
* HSRP ಶುಲ್ಕವನ್ನು ಆನ್‌ ಲೈನ್‌ ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
* ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
* ನಿಮ್ಮ ಅನುಕೂಲಕ್ಕೆ, ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
* ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಖ್ಯೆಗೆ ಭೇಟಿ ನೀಡಿ.
* ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

HSRP-Deadline | HIGH SECURITY NUMBER PLATE
HSRP-Deadline | HIGH SECURITY NUMBER PLATE

ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಭರ್ಜರಿ ಸುದ್ದಿ; ನವೆಂಬರ್ ತಿಂಗಳ 2000 ಹಣ ಕುರಿತು ಸಿಎಂಯಿಂದ ಬಿಗ್‌ ಅಪ್ಡೇಟ್‌


ಇತ್ತೀಚಿನ ಜನಪ್ರಿಯ ಸುದ್ದಿಗಳು