Grama Sahayaka Pension: ರಾಜ್ಯದ ಕಂದಾಯ ಇಲಾಖೆಯಲ್ಲಿ ದಶಕಗಳಿಂದ ಅತ್ಯಂತ ಕೆಳಹಂತದಲ್ಲಿ ಶ್ರಮಿಸುತ್ತಿರುವ ಗ್ರಾಮ ಸಹಾಯಕರ ಪಾಲಿಗೆ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಸೇವೆಯಿಂದ ನಿವೃತ್ತಿ ಹೊಂದಿದಾಗ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸಂದರ್ಭದಲ್ಲಿ ಗ್ರಾಮ ಸಹಾಯಕರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ರೂ. 5.00 ಲಕ್ಷಗಳ ಇಡಿಗಂಟು ಮಂಜೂರು ಮಾಡಿ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ.
ಮಾನ್ಯ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟವು ಕಳೆದ ಸೆಪ್ಟೆಂಬರ್ 2025ರ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಇದು ಕೇವಲ ಹಣಕಾಸಿನ ನೆರವಷ್ಟೇ ಅಲ್ಲ, ಅವರ ದಶಕಗಳ ಸೇವೆಯನ್ನು ಗೌರವಿಸುವ ಸಂಕೇತವೂ ಹೌದು.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
* 65 ವರ್ಷ ಪೂರೈಸಿ ಸೇವೆಯಿಂದ ನಿವೃತ್ತಿ ಹೊಂದಿದಾಗ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದಲ್ಲಿ ಅಂತಹ ಗ್ರಾಮ ಸಹಾಯಕರಿಗೆ ಅಥವಾ ಅವರ ಅವಲಂಬಿತರಿಗೆ ಗರಿಷ್ಠ ರೂ. 5.00 ಲಕ್ಷಗಳ ಇಡಿಗಂಟನ್ನು ನೀಡಲಾಗುತ್ತದೆ.
* ಈ ಹಿಂದೆ ದಿನಾಂಕ 01.04.2024 ರಿಂದ ಅನ್ವಯವಾಗುವಂತೆ ಗ್ರಾಮ ಸಹಾಯಕರ ಮಾಸಿಕ ಮಿತವೇತನವನ್ನು ರೂ. 13,000/- ದಿಂದ ರೂ. 15,000/- ಕ್ಕೆ ಏರಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಈ ಇಡಿಗಂಟು ಸೌಲಭ್ಯ ಘೋಷಿಸಲಾಗಿದೆ.
ಅರ್ಹತೆಗಳು:
* 5 ವರ್ಷದ ವಯೋಮಿತಿಯನ್ನು ಪೂರೈಸಿ ಗೌರವಯುತವಾಗಿ ಸೇವೆಯಿಂದ ಬಿಡುಗಡೆ ಹೊಂದಿರಬೇಕು.
* ಗ್ರಾಮ ಸಹಾಯಕರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಕಾನೂನುಬದ್ಧ ವಾರಸುದಾರರಿಗೆ ಈ ಮೊತ್ತವನ್ನು ಪಾವತಿಸಲಾಗುತ್ತದೆ.
ಗ್ರಾಮ ಸಹಾಯಕರು ಸರ್ಕಾರದ ಅತ್ಯಂತ ಕೆಲಮಟ್ಟದ ಕೊಂಡಿಗಳಗಿರುತ್ತಾರೆ.ಮಳೆ-ಬೆಳೆ ಸಮೀಕ್ಷೆ, ಚುನಾವಣೆ ಕೆಲಸ, ಪಹಣಿ ವಿತರಣೆ ಮತ್ತು ಗ್ರಾಮ ಆಡಳಿತದ ಪ್ರತಿಯೊಂದು ಕೆಲಸದಲ್ಲೂ ಕಾರ್ಯನಿರ್ವಹಿಸುತ್ತಾ ಭಾಗಿಯಾಗಿರುತ್ತಾರೆ.ಇವರಿಗೆ ಯಾವುದೇ ಪೆನ್ಸ್‌ನ್ ಇಲ್ಲದೆ ವಯಸ್ಸಾದ ಮೇಲೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಅದರ ಹಿನ್ನಲೆಯಲ್ಲಿ ರಾಜ್ಯದ ಕಂದಾಯ ಇಲಾಖೆ ಈ ಅಧಿಕೃತ ಆದೇಶ ಹೊರಡಿಸಿದೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Grama Sahayaka Pension:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
- ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ





