Gram sabha: ಸರ್ಕಾರದಿಂದ ಗ್ರಾಮ ಪಂಚಾಯತ್‌ಗಳಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ. ಗ್ರಾಮ ಸಭೆಗಳು ಸ್ಥಳೀಯ ಆಡಳಿತದ ಪ್ರಮುಖ ಅಂಗವಾಗಿದ್ದು, ಗ್ರಾಮಸ್ಥರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಜಾಗರಾಗಲು ಹಾಗೂ ಆಡಳಿತದ ತೀರ್ಮಾನಗಳಲ್ಲಿ ನೇರವಾಗಿ ಭಾಗವಹಿಸಲು ಸಹಾಯ ಮಾಡುತ್ತದೆ. ಮತ್ತು ಈ ನಿಯಮವು ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು, ಪ್ರಸ್ತುತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುವುದು ಮತ್ತು ಸ್ಥಳೀಯ ಆಡಳಿತದ ದಕ್ಷತೆ ವೃದ್ಧಿಸುವುದು ಎಂಬ ಉದ್ದೇಶವನ್ನು ಹೊಂದಿದೆ.
ಹೊಸ ನಿಯಮಗಳ ಪ್ರಮುಖ ಅಂಶಗಳು:
ಗ್ರಾಮ ಸಭೆಗಳ ನಿಯಮಿತತೆ ಮತ್ತು ಅವಧಿ:
* ಪ್ರತಿ ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳಿಗೆ ವರ್ಷದಲ್ಲಿ ಕನಿಷ್ಠ 4 ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ಕರೆಯಬೇಕು.
* ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗ್ರಾಮಗಳ ಸಂಖ್ಯೆಯ ಆಧಾರದ ಮೇಲೆ ಸಂಯುಕ್ತ ಗ್ರಾಮ ಸಭೆಗಳ ಆಯೋಜನೆ ಅನುಮತಿಸಲಾಗಿದೆ.
* ಗ್ರಾಮ ಸಭೆಗಳಿಗೆ ಏಪ್ರಿಲ್ 24 ಮತ್ತು ಅಕ್ಟೋಬರ್ 2 (ಪಂಚಾಯತ್ ರಾಜ್ ದಿನ) ಹೊರತುಪಡಿಸಿ, ಅದಕ್ಕೂ ಮುಂಚಿತವಾಗಿ ಏಳು ದಿನಗಳೊಳಗೆ ಸಭೆಗಳನ್ನು ನಡೆಸುವುದು ಕಡ್ಡಾಯ.
* ಗ್ರಾಮ ಸಭೆಗಳನ್ನು ಆಗಸ್ಟ್ 15 ಮತ್ತು ಜನವರಿ 26 ಹೊರತುಪಡಿಸಿ, ನಂತರ ಏಳು ದಿನಗಳ ಒಳಗೆ ನಡೆಸಬೇಕು.
* ಗ್ರಾಮ ಸಭೆಯ ಅಧ್ಯಕ್ಷತೆ ಮತ್ತು ಹಾಜರಾತಿ ನಿಯಮಗಳನ್ನು ಪಾಲಿಸುವುದು.
ಇದನ್ನೂ ಓದಿ: ಸರ್ಕಾರಿ ಕಚೇರಿಗಳ ಗಮನಕ್ಕೆ; ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
* ಸಭೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ನಡೆಸುತ್ತಾರೆ.
* ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು, ಅವರೂ ಇಲ್ಲದಿದ್ದರೆ ಜೇಷ್ಠ ಸದಸ್ಯರು, ಈ ಮೂರುವೂ ಸಾಧ್ಯವಾಗದಿದ್ದರೆ ಸಭೆಯಲ್ಲಿ ಭಾಗವಹಿಸಿರುವ ಸದಸ್ಯರಿಂದ ಆಯ್ಕೆ ಮಾಡಲಾದ ವ್ಯಕ್ತಿ ಅಧ್ಯಕ್ಷತೆ ವಹಿಸುತ್ತಾರೆ.
* ಕನಿಷ್ಠ ಕೋರಂ: ಗ್ರಾಮ ಸಭೆಯ ಪ್ರಾರಂಭಕ್ಕೆ ಒಟ್ಟು ಮತದಾರರ ಶೇ 10% ಅಥವಾ 100 ಜನರು ಹಾಜರಿರುವುದು ಕಡ್ಡಾಯ.
* 30 ನಿಮಿಷದೊಳಗೆ ಕೋರಂ ಹೊಂದದೆ ಇದ್ದರೆ ಮುಂದಿನ ಮೂರು ಕೆಲಸದ ದಿನಗಳೊಳಗೆ ಸಭೆಯನ್ನು ಪುನರಾಯೋಜನೆ ಮಾಡಬಹುದು. ಈ ಸಭೆಗೆ ಕೋರಂ (Quorum) ಅಗತ್ಯವಿರುವುದಿಲ್ಲ
ಇದನ್ನೂ ಓದಿ: ಜೊಮಾಟೊ ಬ್ರ್ಯಾಂಡ್ ನೇಮ್ ಚೇಂಜ್; ಈ ಬದಲಾವಣೆಗೆ ಕಾರಣವೇನು ಗೊತ್ತಾ?
ವಿಶೇಷ ವರ್ಗಗಳ ಗ್ರಾಮ ಸಭೆಗಳು:
* ಮಹಿಳಾ, ಮಕ್ಕಳ, ಅನುಸೂಚಿತ ಜಾತಿ ಮತ್ತು ಪಂಗಡಗಳು, ವಿಶೇಷಚೇತನರು ಮತ್ತು ದುರ್ಬಲ ವರ್ಗಗಳ ಗ್ರಾಮ ಸಭೆಗಳನ್ನು ಪ್ರತ್ಯೇಕವಾಗಿ ವರ್ಷಕ್ಕೊಮ್ಮೆ ಕರೆಯುವುದು ಕಡ್ಡಾಯ.
* ಈ ಸಭೆಗಳ ನಿರ್ಣಯಗಳನ್ನು ಸಂಬಂಧಿತ ಇಲಾಖೆಗಳು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು.
ಗ್ರಾಮ ಸಭೆಯ ಕರೆಯುವ ವಿಧಾನ ಮತ್ತು ಮಾಹಿತಿಯ ಪ್ರಸಾರ :
* ಹೊಸ ನಿಯಮಗಳ ಪ್ರಕಾರ ಗ್ರಾಮ ಸಭೆ ಕರೆಯುವ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ತಂತ್ರಜ್ಞಾನಾಧಾರಿತ ಮಾಡಲು ಕೆಲವು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
* ಸರ್ಕಾರ ಅಭಿವೃದ್ಧಿಪಡಿಸಿದ ʼಗ್ರಾಮ ಸಭೆ ನಿರ್ವಹಣಾ ತಂತ್ರಾಂಶʼ ಬಳಸುವುದು ಕಡ್ಡಾಯ.
* ಕನಿಷ್ಠ 7 ದಿನಗಳ ಮುಂಚಿತವಾಗಿ ಗ್ರಾಮ ಸಭಾ(Gram sabha) ನೋಟೀಸ್ ಬಿಡುಗಡೆ ಮಾಡಬೇಕು.
* ನೋಟೀಸ್ ಅನ್ನು ಮುದ್ರಿತ ಮತ್ತು ಡಿಜಿಟಲ್ ರೂಪದಲ್ಲಿ ಎಲ್ಲ ಸದಸ್ಯರಿಗೆ ತಲುಪಿಸಬೇಕು
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;10th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
* ಪಂಚಾಯತಿ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ (ಪಂಚಾಯತ್ ಕಚೇರಿ, ಅಂಗನವಾಡಿ, ಶಾಲೆ, ಹಾಲು ಉತ್ಪಾದಕರ ಸಂಘ, ಸ್ವ-ಸಹಾಯ ಸಂಘ) ನೋಟಿಸ್ ಪ್ರದರ್ಶಿಸುವುದು ಕಡ್ಡಾಯ.
* ಗ್ರಾಮ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ಕ್ರಿಯೆಟ್ ಮಾಡಿ, ನೋಟೀಸ್ ಹಾಗೂ ಸಭಾ ಯೋಜನೆ ಅಥವಾ ಕಾರ್ಯನಿರ್ವಹಿಸಬೇಕಾದ ವಿಷಯಗಳನ್ನು ಪಟ್ಟಿ ಹಂಚಬೇಕು.
* ಮೈಕ್ ಮುಖಾಂತರ ಜನರಿಗೆ ಗ್ರಾಮ ಸಭೆಯ ದಿನಾಂಕ, ಸ್ಥಳ, ಉದ್ದೇಶಗಳ ಬಗ್ಗೆ ಮಾಹಿತಿ ನೀಡಬೇಕು.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;10th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
- ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
- ಇ-ಖಾತೆ ಕುರಿತು ಆಯುಕ್ತರಿಂದ ಖಡಕ್ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
- 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ರೇಷನ್ ಕಾರ್ಡ್ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
- ರಾಜ್ಯದಲ್ಲಿ DL, RC ಸ್ಮಾರ್ಟ್ ಕಾರ್ಡ್ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
- ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
- ರೇಷನ್ ಕಾರ್ಡ್ ಹೊಂದಿದ್ರೆ ಈ ಸುದ್ದಿ ಮಿಸ್ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
- ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
- 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
- ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
- ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
- ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್ ಕಾರ್ಡ್ ವಿತರಣೆ!; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
- ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
- B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
- PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್ ಸಾಲ ಕೂಡ ಲಭ್ಯ
- ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ





