Government Jobs: 85,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ

(Government Jobs:) ಒಳ ಮೀಸಲಾತಿ ವರದಿ ಜಾರಿಯಾದ ಬೆನ್ನಲ್ಲೇ 85,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದ್ದು, ಇದರಿಂದ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ ಸಿಕ್ಕಾಂತಾಗಿದೆ.


ನ್ನೂ ಓದಿ: ರೇಷನ್‌ ಕಾರ್ಡ್‌ ಹೊಂದಿದ್ರೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ


ಮೀಸಲಾತಿ ಅನ್ವಯವಾಗುವ ಹುದ್ದೆಗಳ ನೇರ ನೇಮಕಾತಿಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿತ್ತು. ಆಗಿನಿಂದ ನೇಮಕಾತಿ ನಡೆದಿಲ್ಲ. ಈಗ ಒಳ ಮೀಸಲಾತಿ ಜಾರಿಯಾಗಲಿರುವುದರಿಂದ ನೇಮಕಾತಿಗೆ ಮತ್ತು ಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.


ನ್ನೂ ಓದಿ: ಗೃಹಲಕ್ಷ್ಮಿ ಬಾಕಿ ಹಣ ಈ ದಿನ ಜಮೆ!; ಇಲ್ಲಿದೆ ನೋಡಿ ಡಿಟೈಲ್ಸ್


ಸುಮಾರು 85,000 ಹುದ್ದೆಗಳ ನೇಮಕಾತಿ ಗಳಿಗಾಗಿ ಎಲ್ಲಾ ಇಲಾಖೆಗಳ ಬೇಡಿಕೆ ಪ್ರಕ್ರಿಯೆ ವಿವಿಧ ಹಂತದಲ್ಲಿವೆ. ಕೆಲವು ಆರ್ಥಿಕ ಇಲಾಖೆ ಕೋರುವ ಹಂತದಲ್ಲಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಸಾರಿಗೆ ಇಲಾಖೆಯಿಂದ ವಾಯುವ್ಯ ಕರ್ನಾಟಕ ಸಾರಿಗೆಯ 1000 ಚಾಲಕರ ಹುದ್ದೆ ಭರ್ತಿಗೆ ಪ್ರಕ್ರಿಯೆ ನಡೆದಿದ್ದು, ಒಟ್ಟಾರೆ 4500 ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಅನುಮತಿ ಕೋರಲಾಗಿದೆ. ಪರಿಶಿಷ್ಟ ಮೀಸಲು ಹಂಚಿಕೆ ಸರ್ಕಾರದ ಆದೇಶ ಪ್ರಕಟವಾಗುತ್ತಿದ್ದಂತೆ ಶೇಕಡ 17ರ ಮೀಸಲಾತಿ 6:6:5ರಂತೆ ಹಂಚಿಕೆಯಾಗಲಿದೆ. ಈ ಒಳ ಮೀಸಲಾತಿ ಅನುಸಾರ ಹುದ್ದೆಗಳ ನೇಮಕಾತಿ, ಬಡ್ತಿ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

Government Jobs: 85,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ
Government Jobs: 85,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ

ನ್ನೂ ಓದಿ:  ರಾಜ್ಯದ ಜನತೆಗೆ ಗುಡ್ ನ್ಯೂಸ್; ಭೂ ಒಡೆತನ ಸೇರಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ


ಇತ್ತೀಚಿನ ಜನಪ್ರಿಯ ಸುದ್ದಿಗಳು (Government Jobs:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ