Ghibli Style: ಸೋಷಿಯಲ್ ಮೀಡಿಯಾಗಳಲ್ಲಿ ಘಿಬ್ಲಿ ಸ್ಟೈಲ್ ಟ್ರೆಂಡಿಂಗ್
(Ghibli Style:) ಸೋಷಿಯಲ್ ಮೀಡಿಯದಲ್ಲಿ ಘಿಬ್ಲಿ ಶೈಲಿಯ ಚಿತ್ರಗಳಿಂದ ತುಂಬಿ ತುಳುಕುತ್ತಿದ್ದು, ಅನಿಮೇಷನ್ ಪ್ರೇರಿತ ಸ್ಪರ್ಶದೊಂದಿಗೆ ಜನಪ್ರಿಯ ಮೀಮ್ ಗಳು ಮತ್ತು ಫೋಟೋಗಳನ್ನು ಮರುಕಲ್ಪನೆ ಮಾಡುವ ಬಗ್ಗೆ ಆಗಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಬೆಳೆಹಾನಿ ಪರಿಹಾರ ಹಣ ಬಿಡುಗಡೆ; ಎಷ್ಟು ಪರಿಹಾರ ಬಿಡುಗಡೆ?, ಇಲ್ಲಿದೆ ನೋಡಿ
ಘಿಬ್ಲಿ ಕಲೆ ಎಂಬುದು ಒಂದು ಅನನ್ಯ ವಿನ್ಯಾಸವಾಗಿದ್ದು, ಖ್ಯಾತ ಜಪಾನೀಸ್ ಅನಿಮೇಷನ್ ಸ್ಟುಡಿಯೋ ‘ಸ್ಡುಡಿಯೋ ಘಿಬ್ಲಿ’ ಇದನ್ನು ಬಳಸುತ್ತಿತ್ತು.
ಸ್ಟುಡಿಯೋ ಘಿಬ್ಲಿ ಅನ್ನು 1985 ರ ಜೂನ್ 15 ರಲ್ಲಿ Hayao Miyazaki, Isao Takahata, Toshio Suzuki ಎಂಬುವವರು ಸ್ಥಾಪನೆ ಮಾಡಿದರು. ಘಿಬ್ಲಿ ಪದವು ಮೂಲತಃ ಲಿಬ್ಯಾನ್ ಅರೇಬಿಕ್ ಪದವಾಗಿದೆ. ಬಿಸಿಯಾದ ಮರುಭೂಮಿ ಗಾಳಿಯನ್ನು ಅಲ್ಲಿ ಈ ಹೆಸರಿನಿಂದ ಕರೆಯುವರು. ಹಾಗೂ ಇದು ಇಟಾಲಿಯನ್ ಏರ್ ಕ್ರ್ಯಾಫ್ಟ್ ನ ಹೆಸರು ಆಗಿದ್ದು, ಕ್ಯಾಪ್ರೋನಿ ಕ.309 ಘಿಬ್ಲಿ ಎಂದು ಹೆಸರಿದೆ. ಈ ಸಂಸ್ಥಾಪಕರು ಹಲವು ಸಿನಿಮಾಗಳನ್ನು ಈ ಘಿಬ್ಲಿ ಸ್ಟುಡಿಯೋ ವರ್ಕ್‌ನಿಂದಲೇ ನೀಡಿದ್ದಾರೆ.
ಇದನ್ನೂ ಓದಿ: ಶಾಲಾ ಶಿಕ್ಷಕರಿಗೆ ವರ್ಗಾವಣೆ ಬಗ್ಗೆ ಆದೇಶ; ಇಲ್ಲಿದೆ ನೋಡಿ ಡಿಟೈಲ್ಸ್
ಟ್ರೆಂಡ್‌ನ ಕೇಂದ್ರಬಿಂದುವೆಂದರೆ ಚಾಟ್ ಜಿಪಿಟಿಯ ಇತ್ತೀಚಿನ ಎಐ ಇಮೇಜ್ ಜನರೇಟರ್ ಸಹಾಯದಿಂದ ರಚಿಸಲಾದ ಚಿತ್ರಗಳೇ. ಎಐ ರಚಿತ ಕಲಾಕೃತಿಯು ಸ್ಟುಡಿಯೋ ಘಿಬ್ಲಿಯ ಸಿಗ್ನೇಚರ್ ಸೌಂದರ್ಯದಿಂದ ನಿರೂಪಿಸಲ್ಪಟ್ಟಿದೆ. ಆದಾಗ್ಯೂ ವರದಿಗಳ ಪ್ರಕಾರ, ಚಾಟ್ ಜಿಪಿಟಿ ಪ್ಲಸ್, ಟೀಮ್ ಮತ್ತು ಪ್ರೊ ಅನ್ನು ಬಳಸುವವರಿಗೆ ಚಾಟ್ ಜಿಪಿಟಿ ನಲ್ಲೂ ಈ ವೈಶಿಷ್ಟ್ಯಗಳು ಲಭ್ಯವಿದೆ ಎನ್ನಲಾಗಿದೆ.
ಜನಪ್ರಿಯ ಘಿಬ್ಲಿ ಸಿನಿಮಾಗಳು:
ಸ್ಪಿರಿಟೆಡ್ ಅವೇ (2001)
ಪ್ರಿನ್ಸೆಸ್ ಮೊನೊನೋಕ್ (1997)
ಔಲ್ಸ್ ಮೂವಿಂಗ್ ಕ್ಯಾಸ್ಟಲ್ (2004)
ಮೈ ನೈಬರ್ ಟೊಟೊರೊ (1988)
ಗ್ರೇವ್ ಆಫ್ ದಿ ಫೈಯರ್‌ಫೈಲ್ಸ್ (1988)
ಇದನ್ನೂ ಓದಿ: ರೈಲ್ವೆ ಇಲಾಖೆಯ 9900 ಹುದ್ದೆಗೆ ಅರ್ಜಿ ಆಹ್ವಾನ; SSLC, ITI ವಿದ್ಯಾರ್ಹತೆ – 19,900 ಸಂಬಳ
ಘಿಬ್ಲಿ ಶೈಲಿ ದೃಶ್ಯಗಳ ರಚನೆಗೆ ಚಾಟ್‌ಜಿಪಿಟಿನಲ್ಲಿ ಕೆಲವು ನಿರ್ಬಂಧಗಳು ಇವೆ. ಹಾಗೆ ಪರಿಮಿತ ಚಿತ್ರಗಳನ್ನು ಪರಿವರ್ತಿಸಬಹುದು.






