Gastrointestinal Endoscopy: ಶೃಂಗೇರಿಯಲ್ಲಿ ಮೊಟ್ಟಮೊದಲ ಬಾರಿಗೆ ಜಠರಗರುಳಿನ ಎಂಡೋಸ್ಕೋಪಿ ಶಿಬಿರ

(Gastrointestinal Endoscopy:) ಶೃಂಗೇರಿಯಲ್ಲಿ ಮೊಟ್ಟಮೊದಲ ಬಾರಿಗೆ ಜಠರಗರುಳಿನ ಎಂಡೋಸ್ಕೋಪಿ ಶಿಬಿರವನ್ನು ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೃಂಗೇರಿಯಲ್ಲಿ ನಡೆಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.


ನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!


ಹೌದು, ಈಗಾಗಲೇ ಜಠರಗರುಳಿನ ಎಂಡೋಸ್ಕೋಪಿ ಶಿಬಿರ ಪ್ರಾರಂಭವಾಗಿದ್ದು, ಶನಿವಾರದ ರವರೆಗೆ ಇರಲಿದೆ. ಅಂದರೆ ಸೋಮವಾರ 10/11/2025 ರಿಂದ ಶನಿವಾರ 15/11/2025 ರವರೆಗೆ ಎಂಡೋಸ್ಕೋಪಿ (ಯುಜಿಐ ಅಥವಾ ಕೊಲೊನೊಸ್ಕೋಪಿ) ಶಿಬಿರ ಇರಲಿದೆ.

ಜಠರಗರುಳಿನ ಎಂಡೋಸ್ಕೋಪಿ ಶಿಬಿರವು ಜಠರಗರುಳಿನ ಪ್ರದೇಶವನ್ನು ಪರೀಕ್ಷಿಸಲು ಮತ್ತು ನಿರ್ದಿಷ್ಟ ಕಾಯಿಲೆಗಳನ್ನು ಪತ್ತೆಹಚ್ಚಲು ವೈದ್ಯಕೀಯ ತಪಾಸಣೆಗಳನ್ನು ನಡೆಸುವ ಒಂದು ಕಾರ್ಯಕ್ರಮವಾಗಿದೆ.

ಈ ಶಿಬಿರಗಳಲ್ಲಿ ತಜ್ಞರ ತಂಡ ಇರುತ್ತದೆ. ಶಿಬಿರವು ಅತ್ಯಾಧುನಿಕ ಉಪಕರಣಗಳನ್ನು ಬಳಸುತ್ತದೆ ಮತ್ತು ಸೋಂಕು ತಡೆಗಟ್ಟಲು ಕಟ್ಟುನಿಟ್ಟಾದ ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತದೆ. ಇಂತಹ ಶಿಬಿರಗಳು ಜೀರ್ಣಾಂಗವ್ಯೂಹದ ಆರೋಗ್ಯವನ್ನು ಸುಧಾರಿಸಲು ಮತ್ತು ರೋಗಿಗಳಿಗೆ ಅಗತ್ಯವಿರುವ ತಪಾಸಣೆ ಹಾಗೂ ಚಿಕಿತ್ಸೆಯನ್ನು ಒದಗಿಸಲು ಪ್ರಮುಖ ಪಾತ್ರವಹಿಸುತ್ತವೆ.


ನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ


(Gastrointestinal Endoscopy:) ಇದರ ಸದುಪಯೋಗ ಪಡೆದುಕೊಳ್ಳುವುದು ಹೇಗೆ?;
ಜಠರಗರುಳಿನ ಎಂಡೋಸ್ಕೋಪಿ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಮೊದಲು ನೋಂದಣಿಯಾಗಬೇಕು. ಹೌದು, 750 ಶುಲ್ಕ ಪಾವತಿಸಿ ನೋಂದಣಿಯಾಗಬೇಕಿದ್ದು, ಆರಂಭಿಕ 30 ನೋಂದಣಿಗಳು ಮಾತ್ರ ಸೀಮಿತವಾಗಿದೆ. ಈ ಶುಲ್ಕದಲ್ಲಿ ತಜ್ಞರ ಸಮಾಲೋಚನೆ, ಸೆರಾಲಜಿ (ರಕ್ತ ಪರೀಕ್ಷೆಗಳು), ಎಂಡೋಸ್ಕೋಪಿ (ಯುಜಿಐ ಅಥವಾ ಕೊಲೊನೊಸ್ಕೋಪಿ) ಮತ್ತು ವಿವರವಾದ ವರದಿ ಒಳಗೊಂಡಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ ಗೆ ಕರೆ ಮಾಡಬಹುದಾಗಿದೆ. 6364327544 | http://www.savmhospital.com

Gastrointestinal Endoscopy: ಶೃಂಗೇರಿಯಲ್ಲಿ ಮೊಟ್ಟಮೊದಲ ಬಾರಿಗೆ ಜಠರಗರುಳಿನ ಎಂಡೋಸ್ಕೋಪಿ ಶಿಬಿರ
Gastrointestinal Endoscopy: ಶೃಂಗೇರಿಯಲ್ಲಿ ಮೊಟ್ಟಮೊದಲ ಬಾರಿಗೆ ಜಠರಗರುಳಿನ ಎಂಡೋಸ್ಕೋಪಿ ಶಿಬಿರ

ಇತ್ತೀಚಿನ ಜನಪ್ರಿಯ ಸುದ್ದಿಗಳು (Gastrointestinal Endoscopy:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ