FRUITS ID : ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಹಾಗೂ ಇನ್ನಿತರ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಹೊಂದಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಎಫ್.ಐ.ಡಿ ಮಾಡಿಸದಿದ್ದರೆ ಬರ ಪರಿಹಾರ, ಬೆಳೆ ವಿಮೆ ಹಾಗೂ ಇನ್ನೀತ್ತರ ಹಣ ಬರುವುದಿಲ್ಲ. ಎಫ್.ಐ.ಡಿ ಮಾಡದೆ ಇರುವ ರೈತರು ಕೂಡಲೇ ಎಫ್.ಐ.ಡಿ ಮಾಡಿಸಿಕೊಳ್ಳಿ.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ ಕಡ್ಡಾಯವಾಗಿದೆ. ಇದನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬೇಕು. ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯಡಿ ರೈತರು ಸೌಲಭ್ಯ ಪಡೆಯಲು ಈ ನಂಬರ್ ಅತಿ ಅವಶ್ಯಕವಾಗಿದೆ.
ಬರ ಪರಿಹಾರದ ಹಣವನ್ನು ರೈತರು ಪಡೆದುಕೊಳ್ಳಬೇಕು ಎಂದರೆ ಇದಕ್ಕೆ ಎಫ್.ಐ.ಡಿ ಸಂಖ್ಯೆಯನ್ನು ಹೊಂದಬೇಕಾಗಿರುತ್ತದೆ. ಇಲ್ಲದಿದ್ದರೆ ಸರ್ಕಾರ ನಿಮ್ಮ ಖಾತೆಗೆ ಹಣ ಮಾಡುವುದಿಲ್ಲ. ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಎಫ್.ಐ.ಡಿ ಮಾಡಿಸದವರು ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್.ಐ.ಡಿ ಮಾಡಿಸಬೇಕು.
ಇದನ್ನೂ ಓದಿ; ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ- 25.11.2023
ಇನ್ನು ಕೆಲ ರೈತರಿಗೆ ಎಫ್.ಐ.ಡಿ ಎಂದರೇನು ಇದು ಯಾಕೆ ಪ್ರಯೋಜನವಾಗುತ್ತದೆ ಎಂಬುದು ತಿಳಿದಿಲ್ಲ, ಇದು ರೈತರಿಗಾಗಿ ಮಾಡಿರುವ ಪೋರ್ಟಲ್ ಆಗಿದೆ. ಕೃಷಿ ಜಮೀನಿನ ಮಾಹಿತಿಯನ್ನು ಇದರಲ್ಲಿ ನೀಡಲಾಗುತ್ತದೆ. ಈ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಾಗ ರೈತರಿಗೆ ಎಫ್.ಐ.ಡಿ ನಂಬರ್ ಲಭ್ಯವಾಗುತ್ತದೆ. ಇಲ್ಲಿ ಒಮ್ಮೆ ಎಫ್.ಐ.ಡಿ ನಂಬರ್ ಅನ್ನು ಪಡೆದರೆ ಆ ರೈತರ ಸಂಪೂರ್ಣ ಜಮೀನಿನ ಮಾಹಿತಿಯು ಇಲ್ಲಿ ಸಿಗುತ್ತದೆ. ಜಮೀನಿನ ವಿವರ, ಬೆಳೆದ ಬೆಳೆಗಳ ಸಹಿತ ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯಗಳನ್ನು ಪಡೆಯಲು ನೋಂದಾಯಿಸಿಕೊಳ್ಳಬಹುದು.

FID ಮಾಡಲು ಬೇಕಾಗುವ ದಾಖಲೆಗಳು:
* ಆಧಾರ್ ಕಾರ್ಡ್
* ಪಹಣಿ
* ಬ್ಯಾಂಕ್ ಪಾಸ್ ಬುಕ್
* ಮೋಬೈಲ್ ಫೋನ್
* ST /SC ಜಾತಿಗೆ ಸೇರಿದವರು ಜಾತಿ ಪ್ರಮಾಣ ಪತ್ರ ನೀಡಬೇಕು .
* ಪೋಟೋ
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?- 25.11.2023
ಇನ್ನು FID ಈಗಾಗಲೇ ಇದ್ದಲ್ಲಿ ಆ FID ಗೆ ಸೇರ್ವೆ ನಂಬರ್ ಜೋಡಣೆಯಾಗಿದಿಯೋ ತಿಳಿದುಕೊಳ್ಳಿ , ಜಂಟಿ ಖಾತೆದಾರರು ಇದ್ದಲ್ಲಿ ಪ್ರತ್ಯೇಕವಾಗಿ ಈIಆ ಮಾಡಿಸಿಕೊಳ್ಳಬೇಕಾಗುತ್ತದೆ.
FRUITS ID : ಮೊಬೈಲ್ ನಲ್ಲಿಯೇ ಎಫ್.ಐ.ಡಿ ಸಂಖ್ಯೆ ಪಡೆಯಿರಿ:
* ಫ್ರೂಟ್ಸ್ ವೆಬ್ ಸೈಟ್‌ಗೆ ಭೇಟಿ ನೀಡಿ ಅಲ್ಲಿ Citizen Login ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.(https://fruits.karnataka.gov.in/Login.aspx)
* ಬಳಿಕ ವೆಬ್ ಸೈಟ್ ಬಲಬದಿಯಲ್ಲಿ ಅನುಕೂಲಕ ಭಾಷೆಯಾಗಿ ಕನ್ನಡ ಮತ್ತು ಇಂಗ್ಲಿಷ್ ಅನ್ನು ನೀಡಲಾಗಿದ್ದು, ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
* ಇದಾದ ಮೇಲೆ Citizen Registration ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರನ್ನು ನಮೂದು ಮಾಡಲು ಸೂಚಿಸುತ್ತದೆ.
* ಜೊತೆಗೆ ಆಧಾರ್ ಸಂಖ್ಯೆಯನ್ನೂ ಟೈಪ್ ಮಾಡಿ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಸಬ್ ಮಿಟ್ ಮಾಡುವುದು.
* ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇ-ಮೇಲ್ ವಿಳಾಸ ಇದ್ದಲ್ಲಿ ಅದನ್ನೂ ನಮೂದಿಸುವುದು. ಇಲ್ಲದೇ ಹೋದ ಪಕ್ಷದಲ್ಲಿ “NO” ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು.
* ಬಳಿಕ “PROCEED” ಬಟನ್ ಅನ್ನು ಆಯ್ಕೆ ಮಾಡಬೇಕು.
* ಬಳಿಕ ನಮೂದಿಸಲ್ಪಟ್ಟ ಮೊಬೈಲ್ ಸಂಖ್ಯೆಗೆ “OTP” ಬಂರುತ್ತದೆ. ಆ ಸಂಖ್ಯೆಯನ್ನು ನಮೂದಿಸಿ “Submit” ಮೇಲೆ ಕ್ಲಿಕ್ ಮಾಡಬೇಕು.
* ಈಗ ಪ್ರೂಟ್ಸ್ ಖಾತೆಗೆ ಪಾಸ್ ವರ್ಡ್ ರಚಿಸಬೇಕಾಗುತ್ತದೆ. ಇದಾದ ಬಳಿಕ ಫ್ರೂಟ್ಸ್ ಲಾಗಿನ್ ಲಭ್ಯವಾಗುತ್ತದೆ.
* ಪುನಃ Citizen Login ಮೂಲಕ ನಿಮ್ಮ ಪ್ರೂಟ್ಸ್ ಖಾತೆಗೆ ಲಾಗಿನ್ ಆಗಿ ಅದನ್ನು ತೆರೆಯಬೇಕು.
ಇದನ್ನೂ ಓದಿ; ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ಇಂದಿನ ಚಿನ್ನ, ಬೆಳ್ಳಿ ದರ
* ಲಾಗಿನ್ ಆದ ಬಳಿಕ “REGISTRATION” (ನೋಂದಣಿ) ಆಯ್ಕೆಯಲ್ಲಿ Online Registration ಮೇಲೆ ಕ್ಲಿಕ್ ಮಾಡಬೇಕು.
* ಹೊಸತಾಗಿ ಅರ್ಜಿ ಸಲ್ಲಿಬೇಕಿದ್ದರಿಂದ ಅಲ್ಲಿ Registration New Farmer ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
* ನಿಮ್ಮ ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಭೂಮಿಯ ಮಾಹಿತಿಯನ್ನು ಹಾಗೂ ಆಯ್ಕೆಯಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೆ ನಂಬರ್ ಗಳನ್ನು ನಮೂದು ಮಾಡಬೇಕು.
* ಅಲ್ಲದೆ, ಬ್ಯಾಂಕ್ ಖಾತೆ ವಿವರ ನಮೂದಿಸಿದ ಬಳಿಕ ಪೋಟೊವನ್ನು ಅಪ್ಲೋಡ್ ಮಾಡಬೇಕು.
* ಎಲ್ಲ ವಿವರ ಭರ್ತಿ ಮಾಡಿದ ನಂತರ “save and Forward” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
* ಈ ಎಲ್ಲ ಪ್ರಕ್ರಿಯೆಗಳ ನಂತರ ನಿಮಗೆ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ.
ಎಫ್.ಐ.ಡಿ ಸಂಖ್ಯೆ ಇದ್ದರೆ ತಿಳಿಯುವುದು ಹೇಗೆ:
ಈಗಾಗಲೇ ಎಫ್.ಐ.ಡಿ ಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, ಆ ನಂಬರ್ ನಿಮಗೆ ನೆನಪಿಲ್ಲದೇ ಇದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ವೆಬ್ ಸೈಟ್‌ನ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ (https://fruitspmk.karnataka.gov.in/) ಅಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಫ್.ಐ.ಡಿ ಸಂಖ್ಯೆ ತಿಳಿಯುತ್ತದೆ.






Leave a Reply